
shimoga | ಶಿವಮೊಗ್ಗ – ಮಸೀದಿ ಸಮಿತಿಯಿಂದ ಗಣಪತಿಗೆ ಮಾಲಾರ್ಪಣೆ : ಹಿಂದೂ – ಮುಸ್ಲಿಂ ಭಾವೈಕ್ಯತೆಯ ಮತ್ತೊಂದು ಸನ್ನಿವೇಶ!
ಶಿವಮೊಗ್ಗ (shivamogga), ಸೆ. 13: ಇತ್ತೀಚೆಗಷ್ಟೆ ಶಿವಮೊಗ್ಗದ ರಾಗಿಗುಡ್ಡ (ragigudda) ದಲ್ಲಿ ಗಣಪತಿ ಪ್ರತಿಷ್ಠಾಪನೆ ಸ್ಥಳಗಳಲ್ಲಿ, ಹಿಂದೂ – ಮುಸ್ಲಿಂ ಧರ್ಮದ ಮುಖಂಡರು (hindu muslim religious leaders) ಒಟ್ಟಾಗಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಾವೈಕ್ಯತೆ – ಸಾಮರಸ್ಯ ಮೆರೆದಿದ್ದರು.
ಇದರ ಬೆನ್ನಲ್ಲೇ, ಶಿವಮೊಗ್ಗದ ಇಮಾಮ್ ಬಾಡ (imambada) ಬಡಾವಣೆಯು ಕೋಮು ಸೌಹಾರ್ದ – ಭಾವೈಕ್ಯತೆಯ (communal Harmony – spirituality) ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಸೆ. 12 ರ ಗುರುವಾರ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ವೇಳೆ, ಮುಸ್ಲಿಂ ಮುಖಂಡರು ಗಣಪತಿಗೆ ಹೂವಿನ ಮಾಲೆ ಹಾಕಿ ಕೋಮು ಸಾಮರಸ್ಯ ಮೆರೆದಿದ್ದಾರೆ.
ಈ ಕುರಿತಂತೆ ಸೆ. 13 ರಂದು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಇಮಾಮ್ ಬಾಡ, ಮುರಾದ್ ನಗರ,ಅಹ್ಮದ್ ನಗರ ಸಮೀಪದ 3 ನೇ ಅಡ್ಡ ರಸ್ತೆಯ ಸ್ನೇಹ ಜ್ಯೋತಿ ಗೆಳೆಯರ ಬಳಗ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿಯ ವಿಸರ್ಜನಾ ಪೂರ್ವ ಮೆರವಣಿ (ganesha idol procession) ಗೆ ಗುರುವಾರ ಸಂಜೆ ನಡೆಯಿತು.
ಮೆರವಣಿಗೆಯು ಇಮಾಮ್ ಬಾಡದ ಸುನ್ನಿ ಮಸೀದಿ (sunni masjid) ಎದುರು ಆಗಮಿಸಿದಾಗ ಮಸೀದಿ ಅಧ್ಯಕ್ಷರಾದ ಮುನೀರ್ ಅಹಮದ್, ಕಾರ್ಯದರ್ಶಿ ನೂರುಲ್ಲಾ, ನವ ಜವಾನ್ ಸಮಿತಿ ಅಧ್ಯಕ್ಷರಾದ ಸಮೀವುಲ್ಲಾ ಹಾಗೂ ಇತರೆ ಸದಸ್ಯರು ಗಣೇಶಮೂರ್ತಿಗೆ ಮಾಲಾರ್ಪಣೆ ಮಾಡಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸ್ನೇಹ ಜ್ಯೋತಿ ಗೆಳೆಯರ ಬಳಗದ ಪ್ರಮುಖರಾದ ಗಣೇಶ್, ಶ್ರೀನಿವಾಸ್, ಕಾರ್ತಿಕ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಮುಸ್ಲಿಂ ಮುಖಂಡರುಗಳಿಗೆ ಅಭಿನಂದಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.