ತೀರ್ಥಹಳ್ಳಿ (thirthahalli), ಸೆ. 12 : ತೀರ್ಥಹಳ್ಳಿಯ ಆಗುಂಬೆ (agumbe) ಸಂಶೋಧನಾ ವಲಯದಲ್ಲಿ, ಕಸಿ ಕಟ್ಟಿದ ಉತ್ತಮ ತಳಿಯ ಆಲ್ಫೋನ್ಸ್ ಮಾವಿನ ಸಸಿ (alphonso mango tree) ಗಳನ್ನು ವಿತರಿಸಲಾಗುತ್ತಿದೆ.
8*12’ ಅಳತೆಯ ಆಲ್ಫೋನ್ಸ್ ಮಾವಿನ ಸಸಿಗಳನ್ನು ಸಾರ್ವಜನಿಕರಿಗೆ ಹಾಗೂ ರೈತರಿಗೆ ರಿಯಾಯಿತಿ ದರದಲ್ಲಿ, ಪ್ರತಿ ಸಸಿಗೆ 43 ರೂ.ಗಳಂತೆ ವಿತರಿಸಲಾಗುತ್ತಿದೆ.
ಆಸಕ್ತರು ಆರ್.ಟಿ,ಸಿ (rtc) ಮತ್ತು ಆಧಾರ್ ಕಾರ್ಡ್ (aadhar card) ಜೆರಾಕ್ಸ್ ಪ್ರತಿಯೊಂದಿಗೆ ಅಗುಂಬೆ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಸಸಿಗಳನ್ನು ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಉಪ ವಲಯ ಅರಣ್ಯಾಧಿಕಾರಿ ಮೊಬೈಲ್ ಸಂಖ್ಯೆ : 8310655489 ಮತ್ತು ಗಸ್ತು ಅರಣ್ಯ ಪಾಲಕ ಮೊ.ಸಂ 9611930366 ಇವರನ್ನು ಸಂಪರ್ಕಿಸುವಂತೆ ತೀರ್ಥಹಳ್ಳಿ ಆಗುಂಬೆ ಸಂಶೋಧನಾ ವಲಯ ಅರಣ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

