Great dance of foreign tourists in Ganapati procession! ಗಣಪತಿ ಮೆರವಣಿಗೆಯಲ್ಲಿ ವಿದೇಶಿ ಪ್ರವಾಸಿಗರ ಭರ್ಜರಿ ಡ್ಯಾನ್ಸ್!

sagara | ಗಣಪತಿ ಮೆರವಣಿಗೆಯಲ್ಲಿ ವಿದೇಶಿ ಪ್ರವಾಸಿಗರ ಭರ್ಜರಿ ಡ್ಯಾನ್ಸ್!

ಸಾಗರ (sagara), ಸೆ. 13: ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ (ganpati procession) ಯಲ್ಲಿ ವಿದೇಶಿ ಪ್ರವಾಸಿಗರ ತಂಡ (ganpati procession) ವೊಂದು, ಭರ್ಜರಿಯಾಗಿ ಡ್ಯಾನ್ಸ್ ಮಾಡಿದ ಘಟನೆ ಸಾಗರ ತಾಲೂಕು ಕೋಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗಿಣಿವಾರ ಗ್ರಾಮ (sagara taluk ginivara village) ದಲ್ಲಿ ಇತ್ತೀಚೆಗೆ ನಡೆದಿದೆ.

‘ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯ ವಿಸರ್ಜನಾ ಪೂರ್ವ ಮೆರವಣಿಗೆಯು, ಸೆ. 11 ರ ಬುಧವಾರ ಸಂಜೆ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಸಿಗಂದೂರು (siganduru) ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗುತ್ತಿದ್ದಾಗ, ಸಾಗರ ತಾಲೂಕಿನ ವಿವಿಧೆಡೆ ಪ್ರವಾಸಕ್ಕೆಂದು ಆಗಮಿಸಿದ್ದ ವಿದೇಶಿಗರು ಅದೇ ಮಾರ್ಗದಲ್ಲಿ ಮೂರು ಎಲೆಕ್ಟ್ರಿಕ್ ಆಟೋಗಳಲ್ಲಿ ತೆರಳುತ್ತಿದ್ದರು.  

ಮೆರವಣಿಗೆಯಲ್ಲಿ ಸ್ಥಳೀಯ ಯುವಕರು ಡಿಜೆ ಹಾಡಿ (dj songs) ಗೆ ಮಾಡುತ್ತಿದ್ದ ಡ್ಯಾನ್ಸ್ ನೋಡಿ ಪುಳುಕಿತರಾದ ವಿದೇಶಿಗರು, ಸ್ವಯಂ ಪ್ರೇರಿತವಾಗಿ ವಾಹನಗಳಿಂದಿಳಿದು ಮೆರವಣಿಗೆಯತ್ತ ಆಗಮಿಸಿದರು. ಸ್ಥಳೀಯ ಯುವಕರ ಜೊತೆಗೂಡಿ ಭರ್ಜರಿಯಾಗಿ ಡ್ಯಾನ್ಸ್ ಮಾಡಿದರು.

ಹಲವು ನಿಮಿಷಗಳ ಕಾಲ ಮೆರವಣಿಗೆಯಲ್ಲಿ ನರ್ತಿಸಿದರು. ಮೆಚ್ಚುಗೆ ವ್ಯಕ್ತಪಡಿಸಿ, ಸಂತಸದಿಂದ ಹಿಂದಿರುಗಿದರು. ಸದರಿ ತಂಡದಲ್ಲಿ ಮಹಿಳೆಯರು, ಯುವತಿಯರು ಇದ್ದರು’ ಎಂದು ಗಿಣಿವಾರ ಗ್ರಾಮದ ನಿವಾಸಿಯೂ ಆದ ಕೋಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ನವೀನ್ ಅವರು ತಿಳಿಸಿದ್ದಾರೆ.

ವೈರಲ್ : ಗಣಪತಿ ಮೆರವಣಿಗೆಯಲ್ಲಿ ವಿದೇಶಿಗರು ಮಾಡಿದ ಡ್ಯಾನ್ಸ್ (dance of foreign tourists in Ganapati procession) ವೀಡಿಯೋಗಳು (videos), ಸಾಮಾಜಿಕ ಜಾಲತಾಣಗಳಲ್ಲಿ (social media) ವೈರಲ್ (viral) ಆಗಿದೆ. ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

Shivamogga - Garland to Ganapati by Masjid Committee: Another situation of Hindu-Muslim sentimentality! ಶಿವಮೊಗ್ಗ - ಮಸೀದಿ ಸಮಿತಿಯಿಂದ ಗಣಪತಿಗೆ ಮಾಲಾರ್ಪಣೆ : ಹಿಂದೂ – ಮುಸ್ಲಿಂ ಭಾವೈಕ್ಯತೆಯ ಮತ್ತೊಂದು ಸನ್ನಿವೇಶ! Previous post shimoga | ಶಿವಮೊಗ್ಗ – ಮಸೀದಿ ಸಮಿತಿಯಿಂದ ಗಣಪತಿಗೆ ಮಾಲಾರ್ಪಣೆ : ಹಿಂದೂ – ಮುಸ್ಲಿಂ ಭಾವೈಕ್ಯತೆಯ ಮತ್ತೊಂದು ಸನ್ನಿವೇಶ!
bhadravati | Bhadravati Social Welfare Department invites applications for scholarship ಭದ್ರಾವತಿ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ Next post bhadravati | ಭದ್ರಾವತಿ ಸಮಾಜ ಕಲ್ಯಾಣ ಇಲಾಖೆಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ