
government employees association | ಪ್ರತಿಷ್ಠಿತ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ವೇಳಾಪಟ್ಟಿ ಪ್ರಕಟ!
ಬೆಂಗಳೂರು (bengaluru), ಸೆ. 16: ಪ್ರತಿಷ್ಠಿತ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ (karnataka state government employees association) ದ 2024 – 2029 ನೇ ಅವಧಿಯ ಚುನಾವಣೆ (election) ಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.
ತಾಲೂಕು ಶಾಖೆ, ಯೋಜನಾ ಶಾಖೆ, ಜಿಲ್ಲಾ ಶಾಖೆಗಳ ನಿರ್ದೇಶಕರುಗಳು –ಪದಾಧಿಕಾರಿಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ ರಾಜ್ಯ ಪರಿಷತ್ ಸದಸ್ಯರ ಮತ್ತು ರಾಜ್ಯ ಸಂಘದ ಪದಾಧಿಕಾರಿಗಳ ಚುನಾವಣೆಗಳು (elections) ನಡೆಯಲಿವೆ. ವೇಳಾಪಟ್ಟಿಯ (time table) ವಿವರ ಈ ಕೆಳಕಂಡಂತಿದೆ.
ಚುನಾವಣಾ ವಿವರ : ತಾಲೂಕು ಶಾಖೆ ಹಾಗೂ ಯೋಜನಾ ಶಾಖೆಗಳ ಕಾರ್ಯಕಾರಿ ಸಮಿತಿ ನಿರ್ದೇಶಕರ ಸ್ಥಾನದ ಚುನಾವಣೆಗಳು ದಿನಾಂಕ 9-10-2024 ರಿಂದ 28-10-2024 ರವರೆಗೆ ನಡೆಯಲಿವೆ.
ತಾಲೂಕು ಶಾಖೆಗಳ ತಾಲೂಕು ಅಧ್ಯಕ್ಷರು, ಯೋಜನಾ ಶಾಖೆಗಳ ಅಧ್ಯಕ್ಷರು, ತಾಲೂಕು ಯೋಜನಾ ಶಾಖೆಗಳ ಖಜಾಂಚಿ ಹಾಗೂ ರಾಜ್ಯ ಪರಿಷತ್ ಸದಸ್ಯರ ಚುನಾವಣೆಗಳು ದಿನಾಂಕ 30-10-2024 ರಿಂದ 16-11-2024 ರವರೆಗೆ ನಡೆಯಲಿವೆ.
ಜಿಲ್ಲಾ ಶಾಖೆಗಳ ಕಾರ್ಯಕಾರಿ ಸಮಿತಿಯ ನಿರ್ದೇಶಕರ ಚುನಾವಣೆಗಳು ದಿನಾಂಕ 28-10-2024 ರಿಂದ 16-11-2024 ರವರೆಗೆ ನಡೆಯಲಿವೆ.
ಜಿಲ್ಲಾ ಶಾಖೆಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಖಜಾಂಚಿ ಮತ್ತು ರಾಜ್ಯ ಪರಿಷತ್ ಸದಸ್ಯರ ಚುನಾವಣೆಗಳು ದಿನಾಂಕ 19-11-2024 ರಿಂದ 4-12-2024 ರವರೆಗೆ ನಡೆಯಲಿವೆ.
ಬೆಂಗಳೂರು ನಗರ (bengaluru city) ಜಿಲ್ಲೆಯ ರಾಜ್ಯ ಪರಿಷತ್ ಸದಸ್ಯರ ಮತ ಕ್ಷೇತ್ರವಾರು ಚುನಾವಣೆಗಳು ದಿನಾಂಕ 17-9-2024 ರಿಂದ 4-12-2024 ರವರೆಗೆ ನಡೆಯಲಿವೆ.
ರಾಜ್ಯ ಸಂಘದ ರಾಜ್ಯಾಧ್ಯಕ್ಷರು (karnataka state government employees association state president) ಮತ್ತು ರಾಜ್ಯ ಖಜಾಂಚಿ (treasurer) ಸ್ಥಾನದ ಚುನಾವಣೆಗಳು ದಿನಾಂಕ 9-12-2024 ರಿಂದ 27-12-2024 ರವರೆಗೆ ನಡೆಯಲಿವೆ.