shimoga | Shimoga: Distribution of fruits and bread for Eid Milad ಶಿವಮೊಗ್ಗ : ಈದ್ ಮಿಲಾದ್ ಪ್ರಯುಕ್ತ ಹಣ್ಣು, ಬ್ರೆಡ್ ವಿತರಣೆ

shimoga | ಶಿವಮೊಗ್ಗ : ಈದ್ ಮಿಲಾದ್ ಪ್ರಯುಕ್ತ ಹಣ್ಣು, ಬ್ರೆಡ್ ವಿತರಣೆ

ಶಿವಮೊಗ್ಗ (shivamogga), ಸೆ. 16: ಈದ್ ಮಿಲಾದ್ (eid milad un nabi) ಪ್ರಯುಕ್ತ, ಶಿವಮೊಗ್ಗ ನಗರದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ (govt meggan hospital) ಆವರಣದಲ್ಲಿ ಸೆ. 16 ರ ಸೋಮವಾರ ಸಾರ್ವಜನಿಕರಿಗೆ ಹಣ್ಣುಹಂಪಲು, ಬ್ರೆಡ್, ಬಿಸ್ಕೇಟ್ ವಿತರಣೆ ಹಮ್ಮಿಕೊಳ್ಳಲಾಗಿತ್ತು.

ಶಿವಮೊಗ್ಗ ನಗರ ಮುಸ್ಲಿಂ ಒಕ್ಕೂಟ (shimoga city muslim organisation) ದವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಸ್ಪತ್ರೆಯ ರೋಗಿಗಳು ಮತ್ತು ಅವರ ಕಡೆಯವರಿಗೆ ಆಹಾರ ಪದಾರ್ಥಗಳನ್ನು ವಿತರಿಸಲಾಯಿತು ಎಂದು ಸಂಘಟನೆ ತಿಳಿಸಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್. ರಮೇಶ್, ಶಿವಮೊಗ್ಗ ನಗರ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾದ ಮಹಮ್ಮದ್ ನೆಹಾಲ್,

ಪ್ರಮುಖರಾದ ಇಮ್ರಾನ್ ಖಾನ್, ಖಲೀಲ್ ಬೇಗ್, ಸೈಯದ್ ಹೈದರ್, ಇರ್ಫಾನ್ ಖಾನ್, ಆಸೀಫ್ ಖಾನ್, ಆದಿಲ್ ಪಾಶ, ಕಾಶೀಫ್, ಸೈಯದ್ ಇರ್ಫಾನ್, ರಿಜ್ವಾನ್, ವಾಸಿಂ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

The schedule for the election of the prestigious state government employees' association has been announced! ಪ್ರತಿಷ್ಠಿತ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ವೇಳಾಪಟ್ಟಿ ಪ್ರಕಟ Previous post government employees association | ಪ್ರತಿಷ್ಠಿತ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗೆ ವೇಳಾಪಟ್ಟಿ ಪ್ರಕಟ!
Shivamogga: Hindu Mahasabha Ganapati Procession on the way with great decoration! ಶಿವಮೊಗ್ಗ : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಮಾರ್ಗದಲ್ಲಿ ಭರ್ಜರಿ ಅಲಂಕಾರ! Next post shimoga | hindu mahasabha ganapathi | ಶಿವಮೊಗ್ಗ : ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ  ಮಾರ್ಗದಲ್ಲಿ ಭರ್ಜರಿ ಅಲಂಕಾರ!