thirthahalli | agumbe | ತೀರ್ಥಹಳ್ಳಿ – ಆಗುಂಬೆ ಎಸ್.ವಿ.ಎಸ್ ಶಾಲೆಯಲ್ಲಿ ಅಪರೂಪದ ಕಾರ್ಯಕ್ರಮ!
ತೀರ್ಥಹಳ್ಳಿ (thirthahalli), ಸೆ. 15: ಆಗುಂಬೆ ಎಸ್ ವಿ ಎಸ್ (agumbe svs school) ಅನುದಾನಿತ ಕನ್ನಡ ಮಾಧ್ಯಮ ಶಾಲೆ ಯಲ್ಲಿ 19 ವರ್ಷಗಳ ನಂತರ ವಲಯ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟ ಹಾಗೂ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಏರ್ಪಡಿಸಲಾಗಿತ್ತು .
ಸೆ. 13 ಮತ್ತು 14ರಂದು ಎರಡು ದಿನಗಳ ಕಾಲ ನಡೆದ ಈ ವಿಶೇಷ ಕಾರ್ಯಕ್ರಮದಲ್ಲಿ, 4000 ಜನರಿಗೆ ಶೃಂಗೇರಿ ಮಠದಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಮಠದ ಊಟದ ಜೊತೆಗೆ ಶಾಲೆಯ ವತಿಯಿಂದ ವಿಶೇಷವಾಗಿ ಸಿಹಿ ತಿಂಡಿಗಳನ್ನು ಮಾಡಿ ವಿತರಿಸಲಾಯಿತು.
ಹಿರಿಯ, ಕಿರಿಯ ವಿದ್ಯಾರ್ಥಿಗಳ ಸಮ್ಮಿಲನ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಬೆಳಗಿಸುವುದರ ಮೂಲಕ ಹಿರಿಯ ಮುಖ್ಯ ಉಪಾಧ್ಯಾಯರಾದ ಐತಾಳ್ ಸೇರಿದಂತೆ ಮಹೇಶ್, ಅರವಿಂದ್, 1965 ರ ಬ್ಯಾಚ್ ನ ಹಿರಿಯ ವಿದ್ಯಾರ್ಥಿನಿ ಸಂಧ್ಯಾ, ಹಾಗೂ 2024 ರ ವಿದ್ಯಾರ್ಥಿಗಳು ವೇದಿಕೆ ಮೇಲೆ ಉಪಸ್ಥಿತರಿದ್ದ ಗಣ್ಯರು ಉದ್ಘಾಟಿಸಿದರು.
ಹಿರಿಯ ವಿದ್ಯಾರ್ಥಿ ವೇಣು ಹೆಬ್ಬಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ವಿ ಎಸ್ ಶಾಲೆ ಬೆಳೆದು ಬಂದ ರೀತಿ, ಅನುಭವಿಸಿದ ಸಮಸ್ಯೆಗಳು, ಇಲ್ಲಿ ಓದಿದ ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿರುವ ಬಗ್ಗೆ ಶಾಲೆಗಳಲ್ಲಿ ಕಲಿಸಿದ ಗುರುಗಳ ಬಗ್ಗೆ ತಿಳಿಸಿದರು. ಶಾಲೆಯ ಅಭಿವೃದ್ದಿ ಕುರಿತಂತೆ ಮುಂದಿನ ಯೋಜನೆಗಳ ಬಗ್ಗೆ ಹಾಗೂ 60 ವರ್ಷದ ವರ್ಣ ಮಹೋತ್ಸವ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಮಾತನಾಡಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರು ಎಸ್ ವಿ ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಹೊಸಹಳ್ಳಿ ಸುಧಾಕರ್ ಅವರು, ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ಸುಸಂದರ್ಭದಲ್ಲಿ ನಾವೆಲ್ಲರೂ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಹಾಗೆಯೇ ಈಗಾಗಲೇ ಸಾಕಷ್ಟು ಜನ ಹಿರಿಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ವೈಯಕ್ತಿಕವಾಗಿ ಹಣ ನೀಡಿದ್ದಾರೆ.
ನಾನು ನನ್ನ ವೈಯಕ್ತಿಕ ಹಣದಿಂದ ಒಂದಷ್ಟು ವರ್ಷ ಶಾಲೆಯ ಶಿಕ್ಷಕರಿಗೆ ಸಂಬಳ ನೀಡುತ್ತಾ ಬಂದಿದ್ದೆನೆ. ಈಗ ತಾವೆಲ್ಲರೂ ಜೊತೆಯಾಗಿರುವುದು ಸಂತೋಷದ ಸಂಗತಿ. ಮುಂದೆ ಕೂಡ ಎಲ್ಲರೂ ಸೇರಿ ಈ ಶಾಲೆಯನ್ನು ಬೆಳೆಸೋಣ. ಈಗಾಗಲೇ ಶಾಲೆಯ ದುರಸ್ತಿಗೆ ಸಾಕಷ್ಟು ಹಣ ಖರ್ಚಾಗಿದೆ ಎಂದರು.
ಕಾರ್ಯಕ್ರಮದ ನಿರೂಪಣೆಯನ್ನು ಆರುಂಧತಿ, ಸ್ವಾಗತವನ್ನು ಶಿವಳ್ಳಿ ಪ್ರದೀಪ್ ಹಾಗೂ ವಂದನಾರ್ಪಣೆಯನ್ನು ಸಂತೋಷ್ ಹಂಡಿಗೆ ಮಾಡಿದರು.
ಸಮಾರೂಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರು ಆಗಮಿಸಿದ್ದರು. ಶಾಲೆಯ ಅಧ್ಯಕ್ಷರಾದ ಕೃಷ್ಣಮೂರ್ತಿ ಬಾಯರ್ ಹಿರಿಯ ವಿದ್ಯಾರ್ಥಿ ಹಾಗೂ ಎಸ್ ವಿ ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹೊಸಹಳ್ಳಿ ಸುಧಾಕರ್, ಕ್ರೀಡೆಯ ಉಸ್ತುವಾರಿ ವಹಿಸಿದ್ದ ಮಾಜಿ ಪೊಲೀಸ್ ಅಧಿಕಾರಿ ರತ್ನಾಕರ್, ಶಾಲೆಯ ಮುಖ್ಯೋಪಾಧ್ಯಾಯರಾದ ವಾಸುದೇವ್,
ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ರವಿಕುಮಾರ್, ವೇಣು ಹೆಬ್ಬಾರ್, ಶಿವಳ್ಳಿ ಪ್ರದೀಪ್, ಹಂಡಿಗೆ ಸಂತೋಷ್, ಜಯಣ್ಣ ಹೆಗ್ಡೆ ಆಗುಂಬೆ ಗ್ರಾಮ ಪಂಚಾಯಿತಿ ಸದಸ್ಯರಾದ ರಾಘವೇಂದ್ರ, ದೈಹಿಕ ಶಿಕ್ಷಕರಾದ ಜಿತೇಂದ್ರ ಶಾಲೆಯ ಹಿರಿಯ ವಿದ್ಯಾರ್ಥಿ ಹಾಗೂ ಪತ್ರಕರ್ತರಾದ ರಘುರಾಜ್ ಹೆಚ್ ಕೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಡಾ ಸುಂದರೇಶ್, ತಾಲೂಕಿನ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಸಚಿಂದ್ರ ಹೆಗ್ಡೆ ಉಪಸ್ಥಿತರಿದ್ದರು.
