shimoga | job news | Shimoga - Applications invited for filling up vacancies under National Health Campaign ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

shimoga | job news | ಶಿವಮೊಗ್ಗ – ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಶಿವಮೊಗ್ಗ (shivamogga), ಸೆ. 19: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ, ಜಿಲ್ಲಾ ಸರ್ವೇಕ್ಷಣಾದಿಕಾರಿಗಳ ಅಧೀನದಲ್ಲಿ ಬರುವ ವಿವಿಧ ಕಾರ್ಯಕ್ರಮಗಳಡಿಯಲ್ಲಿ ಖಾಲಿಯಿರುವ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿಲಾಗಿದೆ. 

ಎನ್.ಪಿ.ಎನ್.ಸಿ.ಡಿ. ಕಾರ್ಯಕ್ರಮದಡಿ ಎಂ.ಬಿ.ಬಿ.ಎಸ್ (mbbs) ವೈದ್ಯರ 8 ಹುದ್ದೆಗೆ ಎಂಬಿಬಿಎಸ್ ವಿದ್ಯಾರ್ಹತೆ ಹೊಂದಿರುವ 2 ವರ್ಷ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರಬೇಕು.

ಎನ್‌ಪಿಹೆಚ್‌ಸಿಇ ಕಾರ್ಯಕ್ರಮದಡಿ ಎಂ.ಡಿ.ಇಂಟರ್ನಲ್ ಮೆಡಿಸಿನ್ ತಜ್ಞ ವೈದ್ಯರ 1 ಹುದ್ದೆಗೆ ಎಂಬಿಬಿಎಸ್ –ಎಂಡಿ (ಇಂಟರ್ನಲ್ ಮೆಡಿಸಿನ್) ವಿದ್ಯಾರ್ಹತೆಯುಳ್ಳ 2 ವರ್ಷ ಸ್ಪೆಷಲಿಸ್ಟ್ ಹುದ್ದೆಯಲ್ಲಿ ಅನುಭವ ಹೊಂದಿರಬೇಕು. 

ಸಿಪಿಹೆಚ್‌ಸಿ-ಯುಹೆಚ್‌ಸಿ ಕಾರ್ಯಕ್ರಮದಡಿ, ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಸಂಯೋಜಕರ 1 ಹುದ್ದೆಗೆ ಬಿಡಿಎಸ್/ ಬಿಎಎಂಎಸ್/ ಬಿ.ಯು.ಎಂ.ಎಸ್/ ಬಿಹೆಚ್‌ಎಂಎಸ್/ ಬಿವೈಎನ್‌ಎಸ್/ ಎಂಎಸ್‌ಸಿ ನರ್ಸಿಂಗ್/ಎಎಸ್‌ಸಿ ಲೈಫ್‌ಸೈನ್ಸ್/ಬಿಎಸ್‌ಸಿ ನರ್ಸಿಂಗ್ ಎಲ್ಲಾ ಪದವಿಯೊಂದಿಗೆ ಎಂಪಿಹೆಚ್ ಅಥವಾ ಎಂಬಿಎ ಕಡ್ಡಾಯವಾಗಿ ಪೂರ್ಣಗೊಂಡಿರಬೇಕು.

ಎನ್‌ಪಿಪಿಸಿ ಕಾರ್ಯಕ್ರಮದಡಿ ಶುಶ್ರೂಷಕಿ 1 ಹುದ್ದೆಗೆ ಜಿಎನ್‌ಎಂ/ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಹತೆ ಹೊಂದಿರುವ 1 ವರ್ಷ ಸಾರ್ವಜನಿಕ ಹಾಗೂ ಸರ್ಕಾರದ ಆರೋಗ್ಯ ಕಾರ್ಯಕ್ರಮದಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿರಬೇಕು.

ಐ.ಡಿ.ಎಸ್.ಪಿ. ಕಾರ್ಯಕ್ರಮಡಿ ಜಿಲ್ಲಾ ಎಪಿಡೆಮಿಯಾಲಜಿಸ್ಟ್ 1 ಹುದ್ದೆಗೆ ಮೆಡಿಕಲ್ ಗ್ರಾಜುಯೇಟ್ ಜೊತೆಗೆ ಪೋಸ್ಟ್ ಗ್ರಾಜುಯೇಟ್ ಪದವಿ/ ಡಿಪ್ಲೊಮಾ ಇನ್ ಪ್ರೆವೆಂಟಿಸ್ ಆಂಡ್ ಸೋಶಿಯಲ್ ಮೆಡಿಸಿನ್/ ಪಬ್ಲಿಕ್ ಹೆಲ್ತ್ ಅಥವಾ ಎಪಿಡೆಮಿಯಾಲಜಿ ಅಥವಾ ಯಾವುದೇ ಮೆಡಿಕಲ್ ಗ್ರಾಜುಯೇಟ್ ಜೊತೆಗೆ ಎಂ.ಪಿ.ಹೆಚ್ ಜೊತೆಗೆ ಕನಿಷ್ಠ ಒಂದು ವರ್ಷ ಪಬ್ಲಿಕ್ ಹೆಲ್ತ್ನಲ್ಲಿ ಅನುಭವ ಜೊತೆಗೆ ಎಂ.ಎಸ್.ಸಿ. ಇನ್ ಲೈಫ್‌ಸೈನ್ಸ್ ಜೊತೆಗೆ 2 ವರ್ಷ ಎಂಪಿಹೆಚ್‌ನಲ್ಲಿ ಅನುಭವ ಹೊಂದಿರಬೇಕು.

ಈ ನೇಮಕಾತಿಯು ಎನ್‌ಹೆಚ್‌ಎಂ ನಿಯಮಾವಳಿ, ಷರತ್ತು ಮತ್ತು ನಿಬಂಧನೆಗಳಿಗೆ ಮತ್ತು ಆಯ್ಕೆ ಸಮಿತಿಯ ತೀರ್ಮಾನಕ್ಕೆ ಒಳಪಟ್ಟಿರುತ್ತದೆ. ಆಸಕ್ತರು ದಾಖಲೆಗಳ ಮೂಲಪ್ರತಿ ಮತ್ತು ಛಾಯಾಪ್ರತಿಗಳೊಂದಿಗೆ ಸೆ. 25 ರಂದು ಬೆಳಗ್ಗೆ 10.30ಕ್ಕೆ ಜಿಲ್ಲಾ ಸರ್ವೇಕ್ಷಣಾದಿಕಾರಿಗಳ ಕಚೇರಿ, ಜಿಲ್ಲಾ ಎನ್.ಸಿ.ಡಿ.ಘಟಕ, ಮೆಗ್ಗಾನ್ ಆಸ್ಪತ್ರೆ ಆವರಣ, ತುಂಗಾ ವಿದ್ಯಾರ್ಥಿನಿಯರ ವಸತಿ ನಿಲಯದ ಎದುರು, ಶಿವಮೊಗ್ಗ ಇಲ್ಲಿ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗುವುದು. 

ಪ್ರತಿ ತಿಂಗಳು 3ನೇ ಸೋಮವಾರದಂದು ವೈದ್ಯರ ಮತ್ತು ತಜ್ಞ ವೈದ್ಯರ ಹುದ್ದೆಗೆ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗದ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದಾಗಿದೆ. 

Shivamogga: Power outage in various places on July 20 th! ಶಿವಮೊಗ್ಗ : ಜು. 20 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Previous post shimoga | power cut news | ಶಿವಮೊಗ್ಗ ತಾಲೂಕಿನ ವಿವಿಧೆಡೆ ಸೆ. 21 ರಂದು ವಿದ್ಯುತ್ ವ್ಯತ್ಯಯ!
Shimoga Palike | Survey by drone to revise Shimoga Palike coverage! ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಡ್ರೋಣ್ ಮೂಲಕ ಸರ್ವೇ! ವರದಿ : ಬಿ. ರೇಣುಕೇಶ್reporter – b renukesha Next post shimoga palike | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆಗೆ ಡ್ರೋಣ್ ಮೂಲಕ ಸರ್ವೇ!