
shimoga railway news | ಶಿವಮೊಗ್ಗ – ಬೆಂಗಳೂರು ನಡುವೆ ಗರೀಬ್ ರಥ ರೈಲು ಓಡಿಸಲು ಸಚಿವರಿಗೆ ಆಗ್ರಹ
ಶಿವಮೊಗ್ಗ (shivamogga), ಸೆ. 26: ಶಿವಮೊಗ್ಗ – ಬೆಂಗಳೂರು ನಡುವೆ ಗರೀಬ್ ರಥ ರೈಲು ಓಡಿಸುವಂತೆ ಆಗ್ರಹಿಸಿ, ರೈಲ್ವೆ ಪ್ರಯಾಣಿಕರ ನಾಗರೀಕರ ಸಂಘವು ಸೆ. 26 ರ ಗುರುವಾರ ಶಿವಮೊಗ್ಗದ ಪ್ರವಾಸಿ ಮಂದಿರದಲ್ಲಿ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಪತ್ರ ಅರ್ಪಿಸಿತು.
ಬಡ-ಮಧ್ಯಮ ವರ್ಗದ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿಕೊಡುವ ಉದ್ದೇಶದಿಂದ, ಶಿವಮೊಗ್ಗ – ಬೆಂಗಳೂರು ನಡುವೆ ಗರೀಬ್ ರಥ ರೈಲು ಓಡಿಸಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಶಿವಮೊಗ್ಗದಿಂದ ಅರಸೀಕೆರೆ, ಹಾಸನ, ಸಕಲೇಶಪುರ, ಮಂಗಳೂರು ಮಾರ್ಗಕ್ಕೆ ಇಂಟರ್ ಸಿಟಿ ರೈಲು (shimoga – mangalore intercity rail) ಸಂಚಾರಕ್ಕೆ ಕ್ರಮಕೈಗೊಳ್ಳಬೇಕು. ಶಿವಮೊಗ್ಗ ರೈಲ್ವೆ ಸ್ಟೇಷನ್‌ನಲ್ಲಿ 50 ಬೆಡ್‌ನ ರೈಲ್ವೆ ಯಾತ್ರೆ ನಿವಾಸ ಸ್ಥಾಪಿಸಬೇಕು. ಲಗೇಜ್ ಲಾಕರ್ ವ್ಯವಸ್ಥೆ, ಸ್ತ್ರೀಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಫ್ಲಾಟ್ ಫಾರಂಗಳಲ್ಲಿ ಮಹಿಳೆಯರಿಗೆ ಫೀಡಿನ್ ಕ್ಯಾಬಿನ್ ಅಳವಡಿಸಬೇಕು ಎಂದು ಸಂಘಟನೆ ಮನವಿ ಮಾಡಿದೆ.
ಹಾಗೆಯೇ 2 ಮತ್ತು 3 ನೇ ಪ್ಲಾಟ್ ಫಾರಂಗಳಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. ಸದರಿ ಫ್ಲಾಟ್ ಫಾರಂಗಳಿಗೆ ಎಕ್ಸ್’ಲೇಟರ್ ಅಳವಡಿಸಬೇಕು. ರೈಲ್ವೆ ನಿಲ್ದಾಣದಲ್ಲಿ ಸಾರ್ವಜನಿಕ ಹೆಲ್ಪ್ ಡೆಸ್ಕ್ ಮತ್ತು ಜಿಲ್ಲಾ ಪ್ರವಾಸಿ ತಾಣಗಳ ಮಾಹಿತಿ ಕೇಂದ್ರವನ್ನು ತೆರೆಯಬೇಕು.
ಶಿವಮೊಗ್ಗದಿಂದ ಹೊರಡುವ ಮತ್ತು ಆಗಮಿಸುವ ಎಲ್ಲ ರೈಲುಗಳ ಬೋಗಿಗಳಲ್ಲಿ, ಶಿವಮೊಗ್ಗ ಜಿಲ್ಲಾ ಐತಿಹಾಸಗಳ ಸ್ಥಳಗಳು ಮತ್ತು ಪ್ರವಾಸಿ ಸ್ಥಳಗಳ ಸ್ತಬ್ದ ಚಿತ್ರ ಅಳವಡಿಸಬೇಕು ಎಂದು ಸಂಘಟನೆ ಸಲಹೆ ನೀಡಿದೆ.
ಶಿವಮೊಗ್ಗದಿಂದ ಮುಂಬೈಗೆ (shimoga to mumbai rail) ಬೀರೂರು ಜಂಕ್ಷನ್ ಮಾರ್ಗವಾಗಿ ನೇರ ರೈಲು ಓಡಿಸಬೇಕು. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಸಮರ್ಪಕಗೊಳಿಸಬೇಕು. ರಾತ್ರಿ ವೇಳೆ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸಬೇಕು.
ಶಿವಮೊಗ್ಗದಿಂದ ಹಗಲು ವೇಳೆ ಬೀರೂರು, ಚಿಕ್ಕಜಾಜೂರು, ಚಿತ್ರದುರ್ಗ, ಬಳ್ಳಾರಿ, ಮಂತ್ರಾಲಯ, ರಾಯಚೂರು ಮಾರ್ಗಕ್ಕೆ ಪ್ಯಾಸೆಂಜರ್ ರೈಲು ((shimoga chitradurga raichur passenger rail) ಓಡಿಸಲು ಕ್ರಮಕೈಗೊಳ್ಳಬೇಕು ಎಂದು ಸಂಘಟನೆ ಒತ್ತಾಯಿಸಿದೆ.
ಹಿರಿಯ ನಾಗರೀಕರಿಗೆ ಈ ಹಿಂದಿನಂತೆ ಶೇ. 50 ರಷ್ಟು ರಿಯಾಯ್ತಿ ದರದ ಟಿಕೆಟ್ ಹಾಗೂ ಕೋಟಾ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸಂಘಟನೆಯು ರೈಲ್ವೆ ಸಚಿವರಿಗೆ ಅರ್ಪಿಸಿದ ಮನವಿಯಲ್ಲಿ ಆಗ್ರಹಿಸಿದೆ.
ಮನವಿ ಅರ್ಪಿಸುವ ಸಂದರ್ಭದಲ್ಲಿ ರೈಲ್ವೆ ಪ್ರಯಾಣಿಕರ ನಾಗರೀಕರ ಸಂಘದ ಅಧ್ಯಕ್ಷರಾದ ಡಾ. ದಿನೇಶ್ ಎಸ್, ಗೋಪಿನಾಥ್, ಜಿ ವಿಜಯ್ ಕುಮಾರ್, ಕೆ ರಂಗನಾಥ್, ಜಗದೀಶ್, ಮಂಜುನಾಥ್, ಮಂಜು, ಐಡಿಯಲ್ ಗೋಪಿ, ನೂರ್ ಅಹಮದ್, ವಿನೋದ ಕೆ ಜೋಸೆಫ್, ಡಾ. ಶಿಶಿರಾ.. ಸುರೇಶ ಶೆಟ್ಟಿ, ಡಾ. ಶಿವಕುಮಾರ್, ವೆಂಕಟೇಶ್. ವಸಂತ ಹೋಬಳಿ ದಾರ್ ಮೊದಲಾದವರಿದ್ದರು.
Demanding the running of Garib Ratha train between Shimoga – Bengaluru, Railway Passenger Citizens Association on Thursday at Pravasi Mandir in Shimoga, Union Minister of State for Railways V. A letter of appeal was submitted to Somanna.