Shivamogga: Worker dies of electrocution in Holalur arecanut plantation! ಶಿವಮೊಗ್ಗ : ಹೊಳಲೂರು ಅಡಕೆ ತೋಟದಲ್ಲಿ ವಿದ್ಯುತ್ ಸ್ಪರ್ಶದಿಂದ ಕಾರ್ಮಿಕ ಸಾವು!

bhadravati news | ಭದ್ರಾವತಿ ಭದ್ರಾ ನಾಲೆಯಲ್ಲಿ ಪುರುಷನ ಶವ ಪತ್ತೆ!

ಭದ್ರಾವತಿ (bhadravati), ಸೆ. 26: ಭದ್ರಾವತಿಯ ಶಿವಪುರ ಗ್ರಾಮದಲ್ಲಿನ ಭದ್ರಾ ಬಲದಂಡೆ ನಾಲೆಯಲ್ಲಿ, ಅನಾಮಧೇಯ ಪುರುಷನ ಶವ, ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ.

ಈ ಕುರಿತಂತೆ ಪೊಲೀಸ್ ಇಲಾಖೆ ಸೆ. 26 ರ ಗುರುವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಶವ ನೀರಿನಲ್ಲಿ ತೇಲಿ ಬಂದಿದ್ದು, ಸೇತುವೆ ಬಳಿ ಸಿಲುಕಿಕೊಂಡಿತ್ತು. ಶವ ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

ಮೃತರ ಹೆಸರು, ವಿಳಾಸ ಸೇರಿದಂತೆ ಯಾವುದೇ ವಿವರಗಳು ಲಭ್ಯವಾಗಿಲ್ಲ. ಅಂದಾಜು 35 ವರ್ಷವಿದ್ದು, ದೇಹವು ಭಾಗಶಃ ಕೊಳೆತ ಸ್ಥಿತಿಯಲ್ಲಿದೆ. ಮೈಮೇಲೆ ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಡಿಸೈನ್ ಅಂಗಿ ಇರುತ್ತದೆ.

ಮೃತ ವ್ಯಕ್ತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ಭದ್ರಾವತಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಗೆ ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

In Bhadra Balande Nale in Shivpur village of Bhadravati, the dead body of an anonymous man was found in a partially decomposed state.

Vande Bharat train movement between Bangalore – Shimoga: What did the minister say? ಬೆಂಗಳೂರು – ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಸಂಚಾರ : ಸಚಿವರು ಹೇಳಿದ್ದೇನು? Previous post shimoga railway | ಬೆಂಗಳೂರು – ಶಿವಮೊಗ್ಗ ನಡುವೆ ವಂದೇ ಭಾರತ್ ರೈಲು ಸಂಚಾರ : ಸಚಿವರು ಹೇಳಿದ್ದೇನು?
Request to minister to run Garib Rath train between Shimoga and Bangalore ಶಿವಮೊಗ್ಗ – ಬೆಂಗಳೂರು ನಡುವೆ ಗರೀಬ್ ರಥ ರೈಲು ಓಡಿಸಲು ಸಚಿವರಿಗೆ ಆಗ್ರಹ Next post shimoga railway news | ಶಿವಮೊಗ್ಗ – ಬೆಂಗಳೂರು ನಡುವೆ ಗರೀಬ್ ರಥ ರೈಲು ಓಡಿಸಲು ಸಚಿವರಿಗೆ ಆಗ್ರಹ