
shimoga | ಜೀವ ರಕ್ಷಕ ಪೊಲೀಸ್ ಸಿಬ್ಬಂದಿಗಳಿಗೆ ಶಿವಮೊಗ್ಗ ಎಸ್ಪಿ ಸನ್ಮಾನ
ಶಿವಮೊಗ್ಗ (shivamogga), ಸೆ. 30: ಕೆರೆಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯೋರ್ವರ ಜೀವ ಉಳಿಸಿದ ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗಳಿಗೆ, ಸೆ. 30 ರಂದು ಶಿವಮೊಗ್ಗದ ಎಸ್ಪಿ ಕಚೇರಿಯಲ್ಲಿ ಪೊಲೀಸ್ ಇಲಾಖೆಯಿಂದ ಸನ್ಮಾನಿಸಲಾಯಿತು.
ಹೆಡ್ ಕಾನ್ಸ್’ಟೇಬಲ್ ರಾಮಪ್ಪ ಹಾಗೂ ವಾಹನ ಚಾಲಕ ಡಿಎಆರ್ ಎಹೆಚ್’ಸಿ ಲೋಕೇಶ್ ಸನ್ಮಾನಿತ ಸಿಬ್ಬಂದಿಗಳಾಗಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಜಿ. ಕೆ. ಮಿಥುನ್ ಕುಮಾರ್ (shimoga sp g k mithunkumar) ಅವರು ಶಾಲು ಹೊದಿಸಿ, ಪ್ರಶಂಸನಾ ಪತ್ರ ನೀಡಿ ಸನ್ಮಾಸಿದ್ದಾರೆ.
ರಕ್ಷಣೆ : ಸದರಿ ಇಬ್ಬರು ಸಿಬ್ಬಂದಿಗಳು 17-9-2024 ರಂದು ಇ.ಆರ್.ಆರ್.ಎಸ್ – 112 ತುರ್ತು ಸ್ಪಂದನೆ ವಾಹನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಅಂದು ರಾತ್ರಿ ತೀರ್ಥಹಳ್ಳಿ ತಾಲೂಕಿನ ಯಡೇಹಳ್ಳಿ ಕೆರೆಯ ಬಳಿ, ಯಾರೋ ಓರ್ವ ವ್ಯಕ್ತಿ ನೀರಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಇವರಿಗೆ ಬಂದಿತ್ತು.
ತಕ್ಷಣವೇ ಕೆರೆ ಬಳಿ ಸಿಬ್ಬಂದಿಗಳು ಆಗಮಿಸಿದ್ದರು. ಕೆರೆ ಸಮೀಪ ಕಾರೊಂದು ಪತ್ತೆಯಾಗಿತ್ತು. ಸುತ್ತಮುತ್ತಲು ಪರಿಶೀಲಿಸಿದಾಗ ನೀರಿನಲ್ಲಿ ವ್ಯಕ್ತಿಯೋರ್ವರು ಮುಳುಗುತ್ತಿರುವುದನ್ನು ಪತ್ತೆ ಹಚ್ಚಿದ್ದರು.
ತಕ್ಷಣವೇ ಸಿಬ್ಬಂದಿಗಳು ತಮ್ಮ ಜೀವದ ಹಂಗು ತೊರೆದು, ಸದರಿ ವ್ಯಕ್ತಿಯನ್ನು ನೀರಿನಿಂದ ರಕ್ಷಿಸಿದ್ದರು. ನೀರು ಕುಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ನಂತರ ಆಸ್ಪತ್ರೆಗೆ ದಾಖಲಿಸಿದ್ದರು. ಸದರಿ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿ ಚೇತರಿಸಿಕೊಂಡಿದ್ದರು.
Two personnel of Tirthahalli Taluk Malur Police Station who saved the life of a person who was drowning in the lake were felicitated by the police department at the SP office in Shimoga.