ಶಿವಮೊಗ್ಗ (shivamogga), ಸೆ. 30: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು, ಶಿವಮೊಗ್ಗ ನಗರದ ಊರುಗಡೂರು ಬಡಾವಣೆಯಲ್ಲಿ ಅಭಿವೃದ್ದಿಪಡಿಸಿರುವ ವಸತಿ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಈಗಾಗಲೇ ಸಾರ್ವಜನಿರಿಂದ ಅರ್ಜಿ ಆಹ್ವಾನಿಸಿದೆ.
ಈ ನಡುವೆ ಸಾರ್ವಜನಿಕರಿಗೆ ಅರ್ಜಿಗಳನ್ನುವಿತರಿಸಲು ನಿಗದಿಪಡಿಸಲಾಗಿದ್ದ, ಕೊನೆಯ ದಿನಾಂಕವನ್ನು ಅಕ್ಟೋಬರ್ 05 ರವರೆಗೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಈ ಸಂಬಂಧ ಸೆ. 30 ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ.
ಉಳಿದಂತೆ ಭರ್ತಿ ಮಾಡಿದ ಅರ್ಜಿ ಸಲ್ಲಿಸಲು, ಈ ಮೊದಲು ನಿಗದಿಪಡಿಸಿದ್ದ ಕೊನೆಯ ದಿನಾಂಕವಾದ ಅಕ್ಟೋಬರ್ 30 ರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
The Shimoga-Bhadravati Urban Development Authority has already invited applications from the public for allotment of plots in the developed housing estate in Oorugadur area of Shimoga city.

