ಶಿವಮೊಗ್ಗ (shivamogga), ಅ. 5: ‘ಗೃಹಲಕ್ಷ್ಮೀ ಯೋಜನೆಯಡಿ, ಜುಲೈ ಹಾಗೂ ಆಗಸ್ಟ್ ತಿಂಗಳ ಹಣವು ಅಕ್ಟೋಬರ್ 12 ರೊಳಗೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ’ ಎಂದು ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷರಾದ ಸಿ. ಎಸ್. ಚಂದ್ರಭೂಪಾಲ್ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಅ. 5 ರಂದು ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಗೃಹಲಕ್ಷ್ಮೀ ಯೋಜನೆಯ 2 ತಿಂಗಳ ಹಣ ಬಿಡುಗಡೆಯಾಗುತ್ತಿರುವ ಬಗ್ಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಳ್ಕಾರ್ ಅವರು, ಜಿಲ್ಲಾ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ನಾಡಹಬ್ಬ ದಸರಾವನ್ನು ಮಹಿಳೆಯರು ಸಂತೋಷದಿಂದ ಆಚರಿಸುವಂತಾಗಲು, ಹಬ್ಬದೊಳಗೆ ರಾಜ್ಯ ಸರ್ಕಾರದಿಂದ ಗೃಹ ಲಕ್ಷ್ಮೀ ಯೋಜನೆಯ ಹಣ ಅರ್ಹ ಮಹಿಳೆಯರಿಗೆ ದೊರಕಲಿದೆ ಎಂದು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಗೃಹ ಲಕ್ಷ್ಮೀ ಯೋಜನೆಯಡಿ 3,75,621 ಮಹಿಳಾ ಫಲಾನುಭವಿಗಳು ಸೌಲಭ್ಯಕ್ಕೆ ಅರ್ಹರಾಗಿದ್ದಾರೆ. ತಲಾ 2 ಸಾವಿರ ರೂ.ಗಳಂತೆ, ಸುಮಾರು 75 ಕೋಟಿ ರೂ.ಗಳನ್ನು ಪ್ರತಿ ತಿಂಗಳು ಸರ್ಕಾರ ಜಿಲ್ಲೆಗೆ ಬಿಡುಗಡೆ ಮಾಡುತ್ತಿದೆ ಎಂದು ಸಿ. ಎಸ್. ಚಂದ್ರಭೂಪಾಲ್ ಅವರು ತಿಳಿಸಿದ್ದಾರೆ.
under the gruha lakshmi yojana, the money for the months of July and August will be deposited in the bank account of the beneficiaries by october 12, said Shimoga District Guarantee Scheme Implementation Authority presiden c s chandrabhupal.

