shimoga | ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಆರ್ಭಟ – ಹವಾಮಾನ ಇಲಾಖೆ ಮುನ್ಸೂಚನೆಯೇನು?
ಶಿವಮೊಗ್ಗ, ಅ. 12: ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಹಿಂಗಾರು ಮಳೆ ಆರ್ಭಟ ಮುಂದುವರಿದಿದೆ. ಅ. 11 ರ ಶುಕ್ರವಾರ ರಾತ್ರಿ, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಯಿತು.
ಶಿವಮೊಗ್ಗ ನಗರ ಹಾಗೂ ತಾಲೂಕಿನ ಹಲವೆಡೆ ಧಾರಾಕಾರ ವರ್ಷಧಾರೆಯಾಯಿತು. ಎಡೆಬಿಡದೆ ಸುರಿದ ಮಳೆಯಿಂದ ನಾಗರೀಕರು ತೊಂದರೆ ಸಿಲುಕುವಂತಾಯಿತು. ಸಂಜೆ ವೇಳೆ ಆಯುಧ ಪೂಜೆ ಕಾರ್ಯಕ್ರಮ ಆಯೋಜಿಸಿದ್ದವರು ಸಂಕಷ್ಟ ಪಡುವಂತಾಯಿತು.
ಭದ್ರಾವತಿ ನಗರದಲ್ಲಿಯೂ ಶುಕ್ರವಾರ ರಾತ್ರಿ ವ್ಯಾಪಕ ಮಳೆಯಾಗಿದ್ದು, ಪಟ್ಟಣದ ಹಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದ ವರದಿಗಳು ಬಂದಿವೆ. ಇದರಿಂದ ನಾಗರೀಕರು ತೀವ್ರ ತೊಂದರೆ ಪಡುವಂತಾಯಿತು.
ಮುನ್ಸೂಚನೆ : ಶಿವಮೊಗ್ಗ ಜಿಲ್ಲೆಯಲ್ಲಿ ಅ. 12 ರಂದು ಕೂಡ ಮಳೆ ಮುಂದುವರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಶಿವಮೊಗ್ಗ, ಮೈಸೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಸಂಜೆ ವೇಳೆ ಮಳೆ ಆರಂಭವಾಗುವುದರಿಂದ ದಸರಾ ವಿಜಯದಶಮಿ ಮೆರವಣಿಗೆಗೆ ಎಲ್ಲಿ ಮಳೆ ಅಡ್ಡಿಯಾಗಲಿದೆಯೋ? ಎಂಬ ಆತಂಕ ನಾಗರೀಕರಲ್ಲಿ ಮನೆ ಮಾಡಿದೆ.
ಮತ್ತೆ ಭರ್ತಿ: ಇತ್ತೀಚೆಗೆ ಪೂರ್ಣಗೊಂಡ ಮುಂಗಾರು ಮಳೆಯ ವೇಳೆ, ಶಿವಮೊಗ್ಗ ಜಿಲ್ಲೆಯ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿದ್ದವು. ಇದೀಗ ಹಿಂಗಾರು ಮಳೆ ಆರ್ಭಟದಿಂದ ಹಲವೆಡೆ ಮತ್ತೊಮ್ಮೆ ಕೆರೆಕಟ್ಟೆಗಳು ಕೋಡಿ ಬಿದ್ದು ಹರಿಯಲಾರಂಭಿಸಿವೆ. ಮತ್ತೊಂದೆಡೆ, ಭಾರೀ ಮಳೆಯು ಕಟಾವಿಗೆ ಬಂದಿರುವ ಬೆಳೆ ನಷ್ಟದ ಆತಂಕ ಉಂಟು ಮಾಡಿದೆ.
The torrential rain continues in various parts of Shimoga district. On Friday night, there was heavy rain in various parts of the district including Shimoga city. Many parts of Shimoga city and taluk experienced torrential rains. Due to the incessant rains, the citizens faced difficulties. In the evening, those who had organized the Ayudha Puja program faced difficulties.
