shimoga | Contaminated drinking water supply in Shimoga city - checked by MLAs and officials!ಶಿವಮೊಗ್ಗ ನಗರದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆ - ಶಾಸಕರು, ಅಧಿಕಾರಿಗಳಿಂದ ಪರಿಶೀಲನೆ!ವರದಿ : ಬಿ. ರೇಣುಕೇಶ್ b renukesha

shimoga | ಶಿವಮೊಗ್ಗ ನಗರದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆ – ಶಾಸಕರು, ಅಧಿಕಾರಿಗಳಿಂದ ಪರಿಶೀಲನೆ!

ಶಿವಮೊಗ್ಗ (shivamogga), ಅ. 12: ಶಿವಮೊಗ್ಗ ನಗರದಲ್ಲಿ ಕಳೆದ ಕೆಲ ದಿನಗಳಿಂದ, ಮಣ್ಣು ಮಿಶ್ರಿತ ಕೆಂಪು ಬಣ್ಣದ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಇದು ನಾಗರೀಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಈ ನಡುವೆ ಭಾನುವಾರ ಬೆಳಿಗ್ಗೆ ಶಾಸಕ ಚನ್ನಬಸಪ್ಪ ಅವರು ಮಹಾನಗರ ಪಾಲಿಕೆ ಹಾಗೂ ಜಲ ಮಂಡಳಿ ಅಧಿಕಾರಿಗಳೊಂದಿಗೆ, ನಗರದ ಹೊರವಲಯ ಮಂಡ್ಲಿಯಲ್ಲಿರುವ ನೀರು ಶುದ್ದೀಕರಣ ಘಟಕ ಹಾಗೂ ಗಾಜನೂರಿನ ತುಂಗಾ ಜಲಾಶಯಕ್ಕೆ ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್, ಜಲ ಮಂಡಳಿ ಎಂಜಿನಿಯರ್ ಗಳಾದ ಎಇಇ ಮಿಥುನ್ ಕುಮಾರ್, ಎಇ ತೇಜಸ್ವಿನಿ, ಸಿಬ್ಬಂದಿಗಳಾದ ಮೋಹನ್, ಪಾಲಿಕೆ ಎಂಜಿನಿಯರ್ ಪ್ರಿಯಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಭಾರೀ ಮಳೆ ಕಾರಣದಿಂದ ತುಂಗಾ ಜಲಾಶಯದಲ್ಲಿ ಅಪಾರ ಪ್ರಮಾಣದ ಮಣ್ಣು ಮಿಶ್ರಿತ ನೀರು ಸಂಗ್ರಹವಾಗಿದೆ. ನೀರಿನಲ್ಲಿ ಟರ್ಬಿಡಿಟಿ ಪ್ರಮಾಣ ಹೆಚ್ಚಾಗಿದೆ. ಶುದ್ಧೀಕರಣದ ಹೊರತಾಗಿಯೂ ಟರ್ಬಿಡಿಟಿ ಪ್ರಮಾಣ ಕಡಿಮೆಯಾಗುತ್ತಿಲ್ಲ. ಇದರಿಂದ ಕೆಂಪು ಬಣ್ಣದ ನೀರು ಪೂರೈಕೆಯಾಗುತ್ತಿದೆ ಎಂಬ ವಿವರವನ್ನು ಅಧಿಕಾರಿಗಳ ತಂಡ ಶಾಸಕರಿಗೆ ತಿಳಿಸಿದೆ ಎಂದು ತಿಳಿದುಬಂದಿದೆ.

ಕಲುಷಿತ ನೀರು ಪೂರೈಕೆಯಾಗುತ್ತಿರುವ ಬಗ್ಗೆ ನಾಗರೀಕ ವಲಯದಲ್ಲಿ ವ್ಯಾಪಕ ದೂರುಗಳು ಬರುತ್ತಿವೆ. ತಕ್ಷಣವೇ ಶುದ್ಧ ಕುಡಿಯುವ ನೀರು ಪೂರೈಕೆಗೆ ಗಮನಹರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಎನ್ನಲಾಗಿದೆ.

ಏನೀದು ಸಮಸ್ಯೆ? : ಗಾಜನೂರಿನ ತುಂಗಾ ಜಲಾಶಯದಿಂದ, ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಆದರೆ ಕಳೆದ ಅಕ್ಟೋಬರ್ 8 ರ ರಾತ್ರಿ ಬಿದ್ದ ಭಾರೀ ಮಳೆಗೆ ತುಂಗಾ ಡ್ಯಾಂ ನೀರಿನ ಬಣ್ಣ, ಏಕಾಏಕಿ ಕೆಂಪು ಬಣ್ಣಕ್ಕೆ ತಿರುಗಿತ್ತು. ನೀರಿನಲ್ಲಿ ಟರ್ಬಿಡಿಟಿ ಪ್ರಮಾಣ ಹೆಚ್ಚಾಗಿತ್ತು.

ನೀರಿನ ಶುದ್ದೀಕರಣದ ಹೊರತಾಗಿಯೂ ಟರ್ಬಿಡಿಟಿ ಪ್ರಮಾಣ ನಿಯಂತ್ರಣಕ್ಕೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರೋಗ್ಯದ ಹಿತದೃಷ್ಟಿಯಿಂದ ನೀರನ್ನು ಕುದಿಸಿ-ಆರಿಸಿ ಕುಡಿಯುವಂತೆ, ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆ ಮಾಡುತ್ತಿರುವ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಇತ್ತೀಚೆಗೆ ಪ್ರಕಟಣೆ ಹೊರಡಿಸಿತ್ತು.

ಕುಡಿಯಲು ಯೋಗ್ಯವಾದ ನೀರಿನ ಮಾನದಂಡಗಳ ಪ್ರಕಾರ, ನೀರಿನಲ್ಲಿನ ಟರ್ಬಿಡಿಟಿ ಪ್ರಮಾಣ 1 ಎನ್.ಟಿ.ಯು ಇರಬೇಕು. ಆದರೆ ಪ್ರಸ್ತುತ ತುಂಗಾ ನದಿ ನೀರಿನಲ್ಲಿ (tunga river water), ಟರ್ಬಿಡಿಟಿ ಪ್ರಮಾಣ ನಿಗದಿತ ಮಾನದಂಡಗಳಿಗಿಂತ ಹೆಚ್ಚಿದೆ ಎಂದ ದೂರುಗಳು ಕೇಳಿಬಂದಿದ್ದವು.

ಅಸಮಾಧಾನ: ನವರಾತ್ರಿ ಹಬ್ಬದ (dasara festival) ಸಂದರ್ಭದಲ್ಲಿಯೇ ಕಲುಷಿತ ಕುಡಿಯುವ ನೀರು ಪೂರೈಕೆಯಾಗುತ್ತಿರುವುದಕ್ಕೆ, ನಾಗರೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆಡಳಿತದ ವಿರುದ್ಧ ಅಸಮಾಧಾನ ಹೊರಹಾಕಲಾರಂಭಿಸಿದ್ದರು. ಇದು ಆಡಳಿತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವಂತಾಗಿದೆ.

For the last few days in Shimoga city, drinking water is being supplied with red color mixed with mud. This has led to widespread outrage in the civic sector. Meanwhile, on Sunday morning, MLA Channabasappa, along with officials of the Municipal Corporation and Jal Board, visited the water purification plant at Mandli on the outskirts of the city and the Tunga Reservoir at Gajanur.

Siganduru Bridge | Sigandur Bridge work towards the final stage: construction of the barrier is fast! Siganduru bridge | ಅಂತಿಮ ಹಂತದತ್ತ ಸಿಗಂದೂರು ಸೇತುವೆ ಕಾಮಗಾರಿ : ತಡೆಗೋಡೆ ನಿರ್ಮಾಣ ಬಿರುಸು! Previous post siganduru bridge | ಸಾಗರ : ಸಿಗಂದೂರು ಸೇತುವೆ – ವೈರಲ್ ಆದ ಸಂಜೆ ವೇಳೆ ತೆಗೆದ ಪೋಟೋ!
The car of those who were going to Sigandur from Bangalore overturned near Kunsi in Shimoga : one dead four injured! ಬೆಂಗಳೂರಿನಿಂದ ಸಿಗಂದೂರಿಗೆ ಹೊರಟಿದ್ದವರ ಕಾರು ಶಿವಮೊಗ್ಗದ ಕುಂಸಿ ಬಳಿ ಪಲ್ಟಿ : ಓರ್ವ ಸಾವು ನಾಲ್ವರಿಗೆ ಗಾಯ! Next post shimoga | ಬೆಂಗಳೂರಿನಿಂದ ಸಿಗಂದೂರಿಗೆ ಹೊರಟಿದ್ದವರ ಕಾರು ಶಿವಮೊಗ್ಗದ ಕುಂಸಿ ಬಳಿ ಪಲ್ಟಿ : ಓರ್ವ ಸಾವು, ನಾಲ್ವರಿಗೆ ಗಾಯ!