Siganduru Bridge | Sigandur Bridge work towards the final stage: construction of the barrier is fast! Siganduru bridge | ಅಂತಿಮ ಹಂತದತ್ತ ಸಿಗಂದೂರು ಸೇತುವೆ ಕಾಮಗಾರಿ : ತಡೆಗೋಡೆ ನಿರ್ಮಾಣ ಬಿರುಸು!

siganduru bridge | ಸಾಗರ : ಸಿಗಂದೂರು ಸೇತುವೆ – ವೈರಲ್ ಆದ ಸಂಜೆ ವೇಳೆ ತೆಗೆದ ಪೋಟೋ!

ಸಾಗರ (sagara), ಅ. 13: ರಾಜ್ಯದ ಪ್ರಸಿದ್ದ ಧಾರ್ಮಿಕ ತಾಣ ಸಿಗಂದೂರು ಬಳಿ ಶರಾವತಿ ಹಿನ್ನಿರಿಗೆ ನಿರ್ಮಿಸುತ್ತಿರುವ ಬೃಹತ್ ಸೇತುವೆ ಕಾಮಗಾರಿ, ಸದ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ. ಎಲ್ಲ ಅಂದುಕೊಂಡಂತೆ ನಡೆದರೆ, 2025 ರ ಮಾರ್ಚ್ ವೇಳೆಗೆ ಜನ – ವಾಹನ ಸಂಚಾರಕ್ಕೆ ಸೇತುವೆ ಮುಕ್ತಾಯವಾಗಲಿದೆ.

ಈ ನಡುವೆ ಸೇತುವೆ ನಿರ್ಮಾಣ ಹಂತದ ಕಾಮಗಾರಿಯೊಂದರ ಫೋಟೋವನ್ನು, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದು ವೈರಲ್ ಆಗಿದ್ದು, ನಾಗರೀಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಂಸದರ ಸೋಶಿಯಲ್ ಮೀಡಿಯಾ ತಂಡದ ಮಾಹಿತಿ ಅನುಸಾರ, ಅ. 12 ರ ಇಳಿ ಸಂಜೆ ಸಮಯದಲ್ಲಿ ಸದರಿ ಪೋಟೋ ತೆಗೆಯಲಾಗಿದೆ. ಸೇತುವೆಯ ಫಿಲ್ಲರ್ ಗಳ ನಡುವೆ ತಳಪಾಯ ಹಾಗೂ ರೋಪ್ ಹಾಕಿರುವ ಪೋಟೋ ಇದಾಗಿದೆ. ಆಕರ್ಷಕವಾಗಿ ಮೂಡಿ ಬಂದಿದೆ.

ಕೇಬಲ್ ಆಧಾರಿತ : ಸಿಗಂದೂರು ಬಳಿಯ ಅಂಬಾರಗೊಡ್ಲು – ಕಳಸವಳ್ಳಿ ಸಮೀಪ, ಶರಾವತಿ ಹಿನ್ನೀರಿಗೆ ಸೇತುವೆ ನಿರ್ಮಿಸಲಾಗುತ್ತಿದೆ. ಇದು ದೇಶದಲ್ಲಿಯೇ 7 ನೇ ಅತೀ ದೊಡ್ಡ ಕೇಬಲ್ ಆಧಾರಿತ ಸೇತುವೆಯಾಗಿದೆ. 2.4 ಕಿ.ಮೀ. ಉದ್ದವಿದ್ದು, 17 ಫಿಲ್ಲರ್ ಗಳಿವೆ. ಸೇತುವೆ ನಿರ್ಮಾಣದಿಂದ ಶರಾವತಿ ಹಿನ್ನೀರು ಭಾಗದ ಗ್ರಾಮಸ್ಥರಿಗೆ ಸಾಕಷ್ಟು ಅನುಕೂಲವಾಗಲಿದೆ. ಸಿಗಂದೂರು, ಕೊಲ್ಲೂರು ಭಾಗದ ಸಂಪರ್ಕ ಮತ್ತಷ್ಟು ಸುಲಭವಾಗಲಿದೆ.

2019 ರಲ್ಲಿ ಬೃಹತ್‌ ಸೇತುವೆ ಕಾಮಗಾರಿ ಪ್ರಾರಂಭವಾಗಿತ್ತು. ಕೇಂದ್ರ ಭೂ ಸಾರಿಗೆ ಸಚಿವರಾದ ನಿತಿನ್‌ ಗಡ್ಕರಿ ಅವರು 464.23 ಕೋಟಿ ರೂ. ವೆಚ್ಚದ ಕಾಮಗಾರಿಯ ಉದ್ಘಾಟನೆ ನೆರವೇರಿಸಿದ್ದರು. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಸೇತುವೆ ಕಾಮಗಾರಿ ಪೂರ್ಣಗೊಂಡು, ಸಾರ್ವಜನಿಕ ಸೇವೆಗೆ ಮುಕ್ತವಾಗಬೇಕಾಗಿತ್ತು. ಆದರೆ ನಾನಾ ಆಡಳಿತಾತ್ಮಕ, ತಾಂತ್ರಿಕ ಕಾರಣಗಳಿಂದ ಕಾಮಗಾರಿ ವಿಳಂಬವಾಗಿತ್ತು.

The construction of a huge bridge over Sharavati back water near Sigandur, a famous religious site of the state, is currently underway at Samaropadi. If all goes according to plan, the bridge will be ready for vehicular traffic by March 2025. Meanwhile, Lok Sabha member B. Y. Raghavendra has shared a photo of the construction stage of the bridge on social media. It has gone viral and is widely appreciated by the citizens.

shimoga dasara | Shivamogga : Dussehra celebration in the midst of rain! ಶಿವಮೊಗ್ಗ : ಮಳೆಯ ನಡುವೆಯೇ ಸಂಪನ್ನಗೊಂಡ ದಸರಾ ಸಂಭ್ರಮ Previous post shimoga dasara | ಶಿವಮೊಗ್ಗ : ಮಳೆಯ ನಡುವೆಯೇ ಸಂಪನ್ನಗೊಂಡ ದಸರಾ ಸಂಭ್ರಮ!
shimoga | Contaminated drinking water supply in Shimoga city - checked by MLAs and officials!ಶಿವಮೊಗ್ಗ ನಗರದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆ - ಶಾಸಕರು, ಅಧಿಕಾರಿಗಳಿಂದ ಪರಿಶೀಲನೆ!ವರದಿ : ಬಿ. ರೇಣುಕೇಶ್ b renukesha Next post shimoga | ಶಿವಮೊಗ್ಗ ನಗರದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆ – ಶಾಸಕರು, ಅಧಿಕಾರಿಗಳಿಂದ ಪರಿಶೀಲನೆ!