Shimoga: Fire broke out in the bike showroom! ಶಿವಮೊಗ್ಗ : ಬೈಕ್ ಶೋ ರೂಂನಲ್ಲಿ ಬೆಂಕಿ ಅವಘಢ!

shimoga | ಶಿವಮೊಗ್ಗ : ಬೈಕ್ ಶೋ ರೂಂನಲ್ಲಿ ಭಾರೀ ಬೆಂಕಿ ಅವಘಡ..!

ಶಿವಮೊಗ್ಗ (shivamogga), ಅ. 21: ಶಿವಮೊಗ್ಗ ನಗರದ ಬೈಪಾಸ್ ರಸ್ತೆ ಬಳಿಯಿರುವ ಕಾರ್ತಿಕ್ ಬೈಕ್ ಶೋ ರೂಂನಲ್ಲಿ, ಅ. 21 ರ ಸೋಮವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ.

ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಎರಡು ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದೆ. ಸದ್ಯ ಕಟ್ಟಡದಲ್ಲಿನ ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

ಕಟ್ಟಡದಿಂದ ಭಾರೀ ಪ್ರಮಾಣದ ದಟ್ಟ ಹೊಗೆ ಹೊರಬರುತ್ತಿತ್ತು. ಸ್ಥಳದಲ್ಲಿ ನೂರಾರು ನಾಗರೀಕರು ಜಮಾಯಿಸಿದ್ದರು. ಇದರಿಂದ ಕೆಲ ಸಮಯ ಎನ್.ಟಿ. ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಬೆಂಕಿ ಅವಘಡಕ್ಕೆ ಕಾರಣವೇನು? ಕಟ್ಟಡದಲ್ಲಿ ಏನೆಲ್ಲ ಹಾನಿಯಾಗಿದೆ? ನಷ್ಟದ ಪ್ರಮಾಣವೆಷ್ಟು? ಎಂಬಿತ್ಯಾದಿ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

A fire incident took place at the Karthik Bike Showroom near Bypass Road in Shimoga city on Monday morning. As soon as the matter came to know, two fire brigade vehicles reached the spot and started extinguishing the fire. It is known that the fire in the building has been brought under control.

Full cooperation for police to work independently : CM Siddaramaiah ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡಲು ಸಂಪೂರ್ಣ ಸಹಕಾರ : ಸಿ.ಎಂ.ಸಿದ್ದರಾಮಯ್ಯ Previous post bengaluru | ಪೊಲೀಸರು ಸ್ವತಂತ್ರವಾಗಿ ಕೆಲಸ ಮಾಡಲು ಸಂಪೂರ್ಣ ಸಹಕಾರ : CM ಸಿದ್ದರಾಮಯ್ಯ
Shimoga : How many bikes were burnt in the showroom? Who set the fire? ಶಿವಮೊಗ್ಗ : ಶೋ ರೂಂನಲ್ಲಿ ಸುಟ್ಟು ಕರಕಲಾದ ಬೈಕ್ ಗಳೆಷ್ಟು? ಬೆಂಕಿ ಹಾಕಿದ್ಯಾರು? Next post shimoga | ಶಿವಮೊಗ್ಗ : ಶೋ ರೂಂನಲ್ಲಿ ಸುಟ್ಟು ಕರಕಲಾದ ಬೈಕ್ ಗಳೆಷ್ಟು? ಬೆಂಕಿ ಹಾಕಿದ್ಯಾರು?