Shimoga : How many bikes were burnt in the showroom? Who set the fire? ಶಿವಮೊಗ್ಗ : ಶೋ ರೂಂನಲ್ಲಿ ಸುಟ್ಟು ಕರಕಲಾದ ಬೈಕ್ ಗಳೆಷ್ಟು? ಬೆಂಕಿ ಹಾಕಿದ್ಯಾರು?

shimoga | ಶಿವಮೊಗ್ಗ : ಶೋ ರೂಂನಲ್ಲಿ ಸುಟ್ಟು ಕರಕಲಾದ ಬೈಕ್ ಗಳೆಷ್ಟು? ಬೆಂಕಿ ಹಾಕಿದ್ಯಾರು?

ಶಿವಮೊಗ್ಗ (shivamogga), ಅ. 21: ಶಿವಮೊಗ್ಗ ನಗರದ ಬೈಪಾಸ್ ರಸ್ತೆ ಬಳಿಯಿರುವ ಕಾರ್ತಿಕ್ ಬೈಕ್ ಶೋ ರೂಂನಲ್ಲಿ ಅ. 21 ರ ಸೋಮವಾರ ಬೆಳಿಗ್ಗೆ ಸಂಭವಿಸಿದ ಬೆಂಕಿ ಅವಘಡದಲ್ಲಿ, ಲಕ್ಷಾಂತರ ರೂ. ಮೌಲ್ಯದ ಬೈಕ್ ಗಳು ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ!

ಪ್ರಾಥಮಿಕ ಹಂತದ ಮಾಹಿತಿ ಪ್ರಕಾರ, ಶೋ ರೂಂನಲ್ಲಿದ್ದ ಸುಮಾರು 30 ಕ್ಕೂ ಅಧಿಕ ಬೈಕ್ ಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದೆ. ಜೊತೆಗೆ ಕಟ್ಟಡದಲ್ಲಿದ್ದ ಪೀಠೋಪಕರಣ ಸೇರಿದಂತೆ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿವೆ. ನಷ್ಟದ ಅಂದಾಜು ಎಷ್ಟೆಂಬುವುದು ಇನ್ನಷ್ಟೆ ಸ್ಪಷ್ಟವಾಗಬೇಕಾಗಿದೆ.

ಶಿವಮೊಗ್ಗ ಅಗ್ನಿಶಾಮಕ ದಳದ ಎರಡು ಹಾಗೂ ಭದ್ರಾವತಿಯ ಒಂದು ಅಗ್ನಿಶಾಮಕ ದಳದ ಒಂದು ವಾಹನ ಸೇರಿದಂತೆ, ಒಟ್ಟಾರೆ ಮೂರು ವಾಹನಗಳು ಶೋ ರೂಂಗೆ ತಗುಲಿದ್ದ ಬೆಂಕಿ ನಂದಿಸಿವೆ ಎಂದು ಅಗ್ನಿಶಾಮಕ ದಳದ ಮೂಲಗಳು ಮಾಹಿತಿ ನೀಡುತ್ತವೆ.

ದುಷ್ಕೃತ್ಯ? : ಶೋ ರೂಂಗೆ ಬೆಂಕಿ ಸಂಭವಿಸಿದ್ದರ ಹಿಂದೆ ದುಷ್ಕೃತ್ಯ ಅಡಗಿದೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ. ಉದ್ದೇಶಪೂರ್ವಕವಾಗಿ ಬೆಂಕಿ ಹಾಕಲಾಗಿದೆ. ಸದರಿ ಶೋ ರೂಂನಲ್ಲಿ ಈ ಹಿಂದೆ ಉದ್ಯೋಗಿಯಾಗಿದ್ದ ವ್ಯಕ್ತಿಯೇ ಆರೋಪಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಹಳೇಯ ವೈಷಮ್ಯದ ಹಿನ್ನೆಲೆಯಲ್ಲಿ, ಸದರಿ ಅರೋಪಿಯೇ ಶೋ ರೂಂಗೆ ಪೆಟ್ರೋಲ್ ಸುರಿದು ಬೆಂಕಿ ಹೆಚ್ಚಿದ್ದಾನೆ ಎಂದು ಹೇಳಲಾಗಿದೆ. ಈ ಸಂಬಂಧ ಆರೋಪಿಯನ್ನು ದೊಡ್ಡಪೇಟೆ ಠಾಣೆ ಪೊಲೀಸರು (shimoga doddapete police station) ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತಂತೆ ಅಧಿಕೃತ ವಿವರಗಳು ಇನ್ನಷ್ಟೆ ತಿಳಿದುಬರಬೇಕಾಗಿದೆ.

It is learned that bikes worth lakhs of rupees were gutted in a fire incident at Karthik Bike Showroom near Bypass Road in Shimoga city on Monday morning. According to preliminary information, more than 30 bikes in the showroom are said to have caught fire. Besides, most of the things including the furniture in the building were burnt. The extent of the loss is yet to be clarified.

Shimoga: Fire broke out in the bike showroom! ಶಿವಮೊಗ್ಗ : ಬೈಕ್ ಶೋ ರೂಂನಲ್ಲಿ ಬೆಂಕಿ ಅವಘಢ! Previous post shimoga | ಶಿವಮೊಗ್ಗ : ಬೈಕ್ ಶೋ ರೂಂನಲ್ಲಿ ಭಾರೀ ಬೆಂಕಿ ಅವಘಡ..!
Lyrical video song release of 'Elligi Payana yavudo Dari' Cinema' ‘ಎಲ್ಲಿಗೆ ಪಯಣ ಯಾವುದೋ ದಾರಿ ಸಿನಿಮಾ’ದ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ Next post bengaluru | cinema news | ‘ಎಲ್ಲಿಗೆ ಪಯಣ ಯಾವುದೋ ದಾರಿ ಸಿನಿಮಾ’ದ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ