ಶಿವಮೊಗ್ಗ (shivamogga), ನ. 5: ಶಿವಮೊಗ್ಗ ತಾಲೂಕಿನ ವೀರಗಾರನ ಭೈರನಕೊಪ್ಪದ ಜಮೀನೊಂದರ ಸಮೀಪ ಕಾಡಾನೆಯೊಂದು, ಅನುಮಾನಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿರುವ ಘಟನೆ ನಡೆದಿದೆ.
ಕಾಡಾನೆಗಳ ನಿಯಂತ್ರಣಕ್ಕೆಂದು ತೆಗೆಯಲಾಗಿದ್ದ ಗುಂಡಿಯಲ್ಲಿ, ಕಾಡಾನೆಯ ಮೃತದೇಹ ಮಂಗಳವಾರ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಧಿಕಾರಿ, ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
ಕಳೆದೆರೆಡು ದಿನಗಳ ಹಿಂದೆಯೇ ಆನೆ ಮೃತಪಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರವಷ್ಟೆ ಆನೆಯ ಸಾವಿಗೆ ಸ್ಪಷ್ಟ ಕಾರಣವೆನೆಂಬುವುದು ತಿಳಿದುಬರಬೇಕಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ.
ನಿರಂತರ ದಾಳಿ : ಪುರದಾಳು, ಆಲದೇವರ ಹೊಸೂರು, ಗುಡ್ಡದ ಅರಕೆರೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತ್ತೀಚೆಗೆ ಕಾಡಾನೆಗಳ ಹಿಂಡು ಕಾಣಿಸಿಕೊಂಡಿತ್ತು. ತೋಟ, ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದ ಬೆಳೆ ನಾಶ ಪಡಿಸುತ್ತಿವೆ ಎಂದು ರೈತರು ದೂರಿದ್ದರು.
ಈ ನಡುವೆ ಸಲಗವೊಂದು ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ವರದಿಯ ನಂತರವಷ್ಟೆ ಆನೆಯ ಸಾವಿಗೆ ಸ್ಪಷ್ಟ ವಿವರಗಳು ಲಭ್ಯವಾಗಬೇಕಾಗಿದೆ.
An incident has taken place near a farm in veeragarana bairinakoppa in Shimoga taluk where a wild elephant has died in a suspicious condition.

