
shimoga | ಶಿವಮೊಗ್ಗ : ಎಚ್ಚೆತ್ತ ಆಡಳಿತ – ಕುಂಸಿ ಗ್ರಾಮದ ಶುದ್ಧ ಕುಡಿಯುವ ನೀರು ಘಟಕದ ಅವ್ಯವಸ್ಥೆಗೆ ಮುಕ್ತಿ!
ಶಿವಮೊಗ್ಗ (shivamogga), ನ. 29: ತಾಲೂಕಿನ ಕುಂಸಿ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ದುರಸ್ತಿಯಾಗಿದ್ದ ಶುದ್ಧ ಕುಡಿಯುವ ನೀರು ಪೂರೈಕೆ ಘಟಕ ಕೊನೆಗೂ ರಿಪೇರಿಯಾಗಿದೆ. ನ.28 ರ ಗುರುವಾರ ಸಂಜೆಯಿಂದಲೇ ಗ್ರಾಮಸ್ಥರಿಗೆ ಕುಡಿಯುವ ನೀರು ಲಭ್ಯವಾಗಲಾರಂಭಿಸಿದೆ!
ಕುಂಸಿ ಗ್ರಾಮ ಪಂಚಾಯ್ತಿ ಕಚೇರಿ ಆವರಣದಲ್ಲಿದ್ದ ಶುದ್ಧ ಕುಡಿಯುವ ನೀರು ಘಟಕವು, ಕಳೆದ ಹಲವು ದಿನಗಳಿಂದ ದುರಸ್ತಿಗೀಡಾಗಿತ್ತು. ಇದರಿಂದ ನಾಗರೀಕರು ಕುಡಿಯುವ ನೀರಿಗಾಗಿ ತೀವ್ರ ತೊಂದರೆ ಪಡುವಂತಾಗಿತ್ತು. ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಶುದ್ಧೀಕರಣ ಘಟಕಗಳಿಂದ ನೀರು ತರುವಂತಾಗಿತ್ತು.
ಮತ್ತೆ ಕೆಲ ಗ್ರಾಮಸ್ಥರು ಕುಡಿಯಲು ಅಯೋಗ್ಯವಾದ ಬೋರ್’ವೆಲ್ ನೀರನ್ನೇ ಬಳಸುತ್ತಿದ್ದರು. ಇದರಿಂದ ನಾನಾ ರೀತಿಯ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುವಂತಾಗಿತ್ತು. ಇಷ್ಟೆಲ್ಲದರ ಹೊರತಾಗಿಯೂ ಘಟಕದ ದುರಸ್ತಿಯಾಗಿರಲಿಲ್ಲ.
ಕುಂಸಿ ಗ್ರಾಮಸ್ಥರು ಎದುರಿಸುತ್ತಿರುವ ಸಮಸ್ಯೆಯ ಕುರಿತಂತೆ ‘ಉದಯ ಸಾಕ್ಷಿ ‘ ನ್ಯೂಸ್ ವೆಬ್’ಸೈಟ್ 28/11/2024 ರಂದು ಸುದ್ದಿ ಪ್ರಕಟಿಸಿತ್ತು. ವರದಿ ಪ್ರಕಟಗೊಂಡ ಬೆನ್ನಲ್ಲೆ, ಎಚ್ಚೆತ್ತುಕೊಂಡ ಆಡಳಿತ ವ್ಯವಸ್ಥೆ ಘಟಕ ದುರಸ್ತಿಗೆ ಕ್ರಮಕೈಗೊಂಡಿತ್ತು.
ನ. 28 ರ ಸಂಜೆಯಿಂದಲೇ ಕುಂಸಿ ಗ್ರಾಮಸ್ಥರಿಗೆ ಕುಡಿಯುವ ನೀರು ಲಭ್ಯವಾಗುವ ವ್ಯವಸ್ಥೆ ಮಾಡಿದೆ. ಘಟಕದಲ್ಲಿ ಎಂದಿನಂತೆ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತಿರುವುದಕ್ಕೆ ನಾಗರೀಕರು ಸಂತಸ ವ್ಯಕ್ತಪಡಿಸುತ್ತಾರೆ.
In Kunsi village of Shimoga taluk, the clean drinking water supply unit, which was under repair for the past several days, has finally been repaired. Drinking water has started being available to the villagers since Wednesday evening, November 28!