
Shimoga | ಶಿವಮೊಗ್ಗ ನಗರದ ವಿವಿಧೆಡೆ ನ. 30 ರಂದು ವಿದ್ಯುತ್ ವ್ಯತ್ಯಯ!
ಶಿವಮೊಗ್ಗ (shivamogga), ನ. 29: ಶಿವಮೊಗ್ಗ ನಗರದ ಅಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಲ್ಲಿರುವ ಬ್ಯಾಂಕ್- 3 ರಲ್ಲಿ, ನವೆಂಬರ್ 30 ರಂದು ನಿರ್ವಹಣಾ ಕೆಲಸ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ಸಂಸ್ಥೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆವರೆಗೆ, ಸದರಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್-9, 10, 11, 12, 13, ಮತ್ತು 19 ರ ವ್ಯಾಪ್ತಿಯ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ವಿವರ : ವಿನೋಬನಗರ, ಪಿ&ಟಿ ಕಾಲೋನಿ, ಸೂರ್ಯ ಲೇಔಟ್, ದೇವರಾಜ್ ಅರಸ್ ಲೇಔಟ್, ಮೈತ್ರಿ ಅಪಾರ್ಟ್ ಮೆಂಟ್. ಶಾರದಮ್ಮ ಲೇಔಟ್, ಮೇಧಾರ್‌ಕೇರಿ, ಪೊಲೀಸ್ ಚೌಕಿ, 100ಅಡಿ ರಸ್ತೆ ಮತ್ತು 60ಅಡಿ ರಸ್ತೆ ವಿನೋಬನಗರ, ಶುಭಮಂಗಳ ಹಿಂಭಾಗ ಮತ್ತು ಮುಂಭಾಗ,
ಮೇದಾರ್‌ಕೇರಿ ವೃತ್ತ. ಫ್ರೀಡಂ ಪಾರ್ಕ್ ಎದುರು, ರಾಜೇಂದ್ರ ನಗರ, ರವೀಂದ್ರ ನಗರ, ಗಾಂಧಿನಗರ, ವೆಂಕಟೇಶನಗರ, ಸವಳಂಗ ರಸ್ತೆ, ಹನುಮಂತನಗರ, ವಿನಾಯಕ ನಗರ, ಎ.ಎನ್.ಕೆ ರಸ್ತೆ, ಜೈಲ್ ರಸ್ತೆ, ಅಚ್ಯುತ್ ರಾವ್ ಲೇಔಟ್, ಚನ್ನಪ್ಪ ಲೇಔಟ್, ಅಲ್ಕೋಳ,
ಮಂಗಳಾ ಮಂದಿರ ರಸ್ತೆ, ಮುನಿಯಪ್ಪ ಲೇಔಟ್, ಸಂಗೊಳ್ಳಿ ರಾಯಣ್ಣ ಲೇಔಟ್, ಆದರ್ಶ ನಗರ, ಸೋಮಿನಕೊಪ್ಪ, ಹೊಂಗಿರಣ ಲೇಔಟ್, ಜೆ.ಹೆಚ್.ಪಟೇಲ್ ಬಡಾವಣೆ ಎ. ಬಿ. ಸಿ. ಡಿ. ಇ ಬ್ಲಾಕ್. ಶಿವಸಾಯಿ ಕಾಸ್ಟಿಂಗ್,
ಪ್ರೆಸ್ ಕಾಲೋನಿ, ಭೈರನಕೊಪ್ಪ, ಗೆಜ್ಜೇನಹಳ್ಳಿ, ಗೆಜ್ಜೇನಹಳ್ಳಿ ಇಂಡಸ್ಟ್ರೀಯಲ್ ಏರಿಯಾ, ದೇವಕಾತಿಕೊಪ್ಪ ಇಂಡಸ್ಟ್ರಿಯಲ್ ಏರಿಯಾ, ಶರ್ಮಾ ಲೇಔಟ್, ಬಸವನಗಂಗೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಕೊರಿದೆ.
Power outage in different parts of Shimoga city on November 30!
Mescom said that maintenance work was started on November 30 at Bank-3 at Alkola Power Distribution Center in Shimoga city. #poweroutage, #powercut,