
shimoga | ಮಧು ಬಂಗಾರಪ್ಪ – ಸಿ ಎಸ್ ಷಡಾಕ್ಷರಿ ನಡುವೆ ವೈಮನಸ್ಸು : ಇದೀಗ ಪ್ರತಿಭಟನೆ ಹಂತಕ್ಕೆ..!
ಶಿವಮೊಗ್ಗ (shivamogga), ನ. 30: ಸರ್ಕಾರಿ ನೌಕರರ ಸಂಘದ ಚುನಾವಣೆಗೆ ಸಂಬಂಧಿಸಿದಂತೆ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ನಡುವೆ ಮನೆಮಾಡಿರುವ ವೈಮನಸ್ಸು, ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಇದೀಗ ಪ್ರತಿಭಟನೆಯ ಹಂತಕ್ಕೆ ಬಂದಿದೆ!
ನ. 30 ರ ಶನಿವಾರ ಶಿವಮೊಗ್ಗ ನಗರದ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ, ಕೆಲ ಕಾಂಗ್ರೆಸ್ ಕಾರ್ಯಕರ್ತರು ಸಿ ಎಸ್ ಷಡಾಕ್ಷರಿ ವಿರುದ್ಧ ಘೋಷಣೆ ಕೂಗಿ ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಪತ್ರ ಅರ್ಪಿಸಿದ ಘಟನೆ ನಡೆಯಿತು.
ಕೆಡಿಪಿ ಸಭೆಯಲ್ಲಿ ಭಾಗವಹಿಸಲು ಸಚಿವರು ಆಗಮಿಸುತ್ತಿದ್ದಂತೆ, ಏಕಾಏಕಿ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಲಾರಂಭಿಸಿದರು. ಕಾರಿನಿಂದಿಳಿದ ಸಚಿವರು ಕಾರ್ಯಕರ್ತರ ಅಹವಾಲು ಆಲಿಸಿ, ಮನವಿ ಪತ್ರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವಿನಯ್ ತಾಂದ್ಲೆ, ಮಂಜುನಾಥ್ ಪುರಲೆ, ಜಗದೀಶ್ ಮೊದಲಾದವರಿದ್ದರು.
ಸರಿಯಲ್ಲ : ‘ಇತ್ತೀಚೆಗೆ ಸಚಿವ ಮಧು ಬಂಗಾರಪ್ಪ ಅವರು ಸರ್ಕಾರಿ ನೌಕರರ ವಸತಿ ಗೃಹ ನವೀಕರಣಕ್ಕೆ 2 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಹೇಳಿದ್ದರು. ಈ ಕುರಿತಂತೆ ಷಡಾಕ್ಷರಿ ಅವರು ಸಚಿವರ ಬಳಿ ಸ್ಪಷ್ಟನೆ ನೀಡಬಹುದಾಗಿತ್ತು.
ಆದರೆ ಮಾಧ್ಯಮಗಳ ಎದುರಿನಲ್ಲಿ ಸಚಿವರ ಹೇಳಿಕೆಯನ್ನು ಹಾಸ್ಯಾಸ್ಪದ ಎಂದಿದ್ದಾರೆ. ಇದು ಸರಿಯಲ್ಲ. ಇದು ಸಚಿವರಿಗೆ ಹಾಗೂ ಸರ್ಕಾರಕ್ಕೆ ಮಾಡಿದ ಅಪಮಾನವಾಗಿದೆ’ ಎಂದು ಕಾಂಗ್ರೆಸ್ ಕಾರ್ಯಕರ್ತರು ದೂರಿದ್ದಾರೆ.
Regarding the government employees union elections, the animosity between district in-charge minister Madhu Bangarappa and state government employees union president CS Shadakshari is getting worse day by day. It has now reached the point of protest!