ಕರ್ನಾಟಕ ವಿಧಾನಸಭೆ 16 ನೇ ಸಾರ್ವತ್ರಿಕ ಚುನಾವಣೆ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. 224 ವಿಧಾನಸಭಾ ಕ್ಷೇತ್ರಗಳಿಗೆ ಮೇ 10 ರಂದು, ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 13 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡಕ್ಕೆ ಮೂಹೂರ್ತ ಫಿಕ್ಸ್!

ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಏಪ್ರಿಲ್ 20  ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಏಪ್ರಿಲ್ 21 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್ 24 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 10 ರಂದು ಮತದಾನ ನಡೆಯಲಿದೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಅಖಾಡಕ್ಕೆ ಮೂಹೂರ್ತ ಫಿಕ್ಸ್! Read More

ಚುನಾವಣೆಗೆ ಮಕ್ಕಳ ಬಳಕೆ ನಿರ್ಬಂಧ : ಶಿಸ್ತುಕ್ರಮದ ಎಚ್ಚರಿಕೆ!

ವಿಧಾನಸಭೆ ಚುನಾವಣೆಯ ಕಾರ್ಯ ಹಾಗೂ ಪ್ರಚಾರ ಕಾರ್ಯಗಳಲ್ಲಿ ಮಕ್ಕಳನ್ನು ಬಳಸಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ.

ಚುನಾವಣೆಗೆ ಮಕ್ಕಳ ಬಳಕೆ ನಿರ್ಬಂಧ : ಶಿಸ್ತುಕ್ರಮದ ಎಚ್ಚರಿಕೆ! Read More

ಶಿಕಾರಿಪುರದಲ್ಲಿ ನಡೆದಿದ್ದಾರೂ ಏನು?

ಶಿಕಾರಿಪುರ ಪಟ್ಟಣದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಂಡುಕೇಳರಿಯದ ಅಹಿತಕರ ಘಟನೆಗಳು ನಡೆದು ಹೋದವು. ಇದಕ್ಕೆಲ್ಲ ಕಾರಣವಾಗಿದ್ದು, ಒಳ ಮೀಸಲಾತಿ ಕಲ್ಪಿಸುವ ರಾಜ್ಯ ಸರ್ಕಾರದ ನಿರ್ಧಾರ.

ಶಿಕಾರಿಪುರದಲ್ಲಿ ನಡೆದಿದ್ದಾರೂ ಏನು? Read More

ಶಿವಮೊಗ್ಗ – ಮದ್ರಾಸ್ (ತಿರುಪತಿ ರೇಣುಗುಂಟ ಮಾರ್ಗ) ವಿಶೇಷ ರೈಲು ಸೇವೆ ಮತ್ತೆ 3 ತಿಂಗಳ ಕಾಲ ವಿಸ್ತರಣೆ

ವಾರದಲ್ಲಿ ಎರಡು ದಿನಗಳ ಕಾಲ ಸಂಚರಿಸುವ, ಶಿವಮೊಗ್ಗ – ಮದ್ರಾಸ್ (ತಿರುಪತಿ ರೇಣುಗುಂಟ ಮಾರ್ಗ) ಎಕ್ಸ್’ಪ್ರೆಸ್ ರೈಲು ಸೇವೆಯನ್ನು, ಜೂನ್ ತಿಂಗಳವರೆಗೆ ವಿಸ್ತರಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಶಿವಮೊಗ್ಗ – ಮದ್ರಾಸ್ (ತಿರುಪತಿ ರೇಣುಗುಂಟ ಮಾರ್ಗ) ವಿಶೇಷ ರೈಲು ಸೇವೆ ಮತ್ತೆ 3 ತಿಂಗಳ ಕಾಲ ವಿಸ್ತರಣೆ Read More

ಅಸೆಂಬ್ಲಿ ಎಲೆಕ್ಷನ್ : ಚೆಕ್ ಪೋಸ್ಟ್ ಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸೀಜ್..!

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ, ವಿಶೇಷ  ಚೆಕ್ ಪೋಸ್ಟ್ ಗಳನ್ನು ಪೊಲೀಸ್ ಇಲಾಖೆ ತೆರೆದಿದೆ. ಈ ವೇಳೆ ಸೂಕ್ತ ದಾಖಲೆಯಿಲ್ಲದೆ ಸಾಗಾಣೆ ಮಾಡುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ವಿವಿಧ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅಸೆಂಬ್ಲಿ ಎಲೆಕ್ಷನ್ : ಚೆಕ್ ಪೋಸ್ಟ್ ಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸೀಜ್..! Read More

ಅಸೆಂಬ್ಲಿ ಎಲೆಕ್ಷನ್ : ಎಎಪಿ ಪಕ್ಷದ ಮೊದಲ ಹಂತದ ಪಟ್ಟಿ ಪ್ರಕಟ

ಮುಂಬರುವ ವಿಧಾನಸಭೆ ಚುನಾವಣೆಗೆ, ಆಮ್ ಆದ್ಮಿ ಪಕ್ಷ 80 ಕ್ಷೇತ್ರಗಳಿಗೆ ಮೊದಲ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಶಿವಮೊಗ್ಗ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗಿದೆ.

ಅಸೆಂಬ್ಲಿ ಎಲೆಕ್ಷನ್ : ಎಎಪಿ ಪಕ್ಷದ ಮೊದಲ ಹಂತದ ಪಟ್ಟಿ ಪ್ರಕಟ Read More

ಇಬ್ಬರು ಮಕ್ಕಳೊಂದಿಗೆ ಪತ್ನಿ ಆತ್ಮಹತ್ಯೆ ಪ್ರಕರಣ : ಪತಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ!

ಮಹಿಳೆಯೋರ್ವರು ತನ್ನಿಬ್ಬರು ಮಕ್ಕಳೊಂದಿಗೆ ಚಾನಲ್ ಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪತಿಗೆ 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಭದ್ರಾವತಿಯ 4 ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಇಬ್ಬರು ಮಕ್ಕಳೊಂದಿಗೆ ಪತ್ನಿ ಆತ್ಮಹತ್ಯೆ ಪ್ರಕರಣ : ಪತಿಗೆ 5 ವರ್ಷ ಕಠಿಣ ಜೈಲು ಶಿಕ್ಷೆ! Read More

ಕೃಷಿ ಮೇಳದ ವೇದಿಕೆ ಮೇಲೆಯೇ ದಿಢೀರ್ ಪ್ರತಿಭಟನೆ..!

ಶಿವಮೊಗ್ಗದ ಹೊರವಲಯ ನವುಲೆಯ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮತ್ತು ತೋಟಗಾರಿಕೆ ಮೇಳದ ವೇದಿಕೆಯಲ್ಲಿಯೇ ಭಾನುವಾರ ಮಧ್ಯಾಹ್ನ ಕೆಲವರು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಕೃಷಿ ಮೇಳದ ವೇದಿಕೆ ಮೇಲೆಯೇ ದಿಢೀರ್ ಪ್ರತಿಭಟನೆ..! Read More

ಶಿವಮೊಗ್ಗ ಜಿ.ಪಂ.ಗೆ ಅತ್ಯುತ್ತಮ ಜಿಲ್ಲಾ ಪಂಚಾಯತ್ ಪ್ರಶಸ್ತಿ

2022-23 ನೇ ಸಾಲಿನ ಮಹಾತ್ಮಗಾಂಧಿ ನರೇಗಾ ಯೋಜನೆಯ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಅತ್ಯುತ್ತಮ ಜಿ.ಪಂ ಪ್ರಶಸ್ತಿ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲಾ ಪಂಚಾಯತ್‍ಗೆ ದ್ವಿತೀಯ ಹಾಗೂ ಅತ್ಯುತ್ತಮ ತಾಲ್ಲೂಕು ಪಂಚಾಯತಿ ವಿಭಾಗದಲ್ಲಿ ಭದ್ರಾವತಿ ತಾಲ್ಲೂಕಿಗೆ ತೃತೀಯ ಬಹುಮಾನ ಲಭಿಸಿದೆ.

ಶಿವಮೊಗ್ಗ ಜಿ.ಪಂ.ಗೆ ಅತ್ಯುತ್ತಮ ಜಿಲ್ಲಾ ಪಂಚಾಯತ್ ಪ್ರಶಸ್ತಿ Read More

ಅಪ್ಪು ಹುಟ್ಟು ಹಬ್ಬದಂದು ಅನ್ನ ಸಂತರ್ಪಣೆ ಕಾರ್ಯಕ್ರಮ

ಶಿಕಾರಿಪುರದಲ್ಲಿ ಮಾ. 17ರ ಶುಕ್ರವಾರ ಬೆಳಗ್ಗೆ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬದ ಅಂಗವಾಗಿ ಡಾ. ರಾಜಕುಮಾರ್ ಹಾಗೂ ಪುನೀತ್ ರಾಜಕುಮಾರ್ ಸ್ನೇಹ ಬಳಗ, ತಾ. ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮುಕ್ತಿದಾಮ ಅಭಿವೃದ್ಧಿ ಸಮಿತಿ ವತಿಯಿಂದ ಸಿಹಿ ವಿತರಣೆ ಮತ್ತು ಬೃಹತ್ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಸ್ನೇಹ ಬಳಗದ ವೈಭವ್ ಬಸವರಾಜ್ ತಿಳಿಸಿದರು.

ಅಪ್ಪು ಹುಟ್ಟು ಹಬ್ಬದಂದು ಅನ್ನ ಸಂತರ್ಪಣೆ ಕಾರ್ಯಕ್ರಮ Read More