shimoga | Two women who arrived in the guise of customers and tried to steal a gold chain were caught! shimoga | ಗ್ರಾಹಕರ ಸೋಗಿನಲ್ಲಿ ಆಗಮಿಸಿ ಚಿನ್ನದ ಸರ ಅಪಹರಿಸಲು ಯತ್ನಿಸಿ ಸಿಕ್ಕಿಬಿದ್ದ ಇಬ್ಬರು ಮಹಿಳೆಯರು!
shimoga | Distribution of sand blocks in Shimoga district : DC important order! shimoga | ಶಿವಮೊಗ್ಗ ಜಿಲ್ಲೆಯಲ್ಲಿ ಮರಳು ಬ್ಲಾಕ್ ಗಳ ಹಂಚಿಕೆ : DC ಮಹತ್ವದ ಆದೇಶ!
ಶಿವಮೊಗ್ಗ | ಯುವಕ – ಯುವತಿಗೆ ಬೆದರಿಸಿ ಸುಲಿಗೆ ಪ್ರಕರಣ : ಆಟೋ ಚಾಲಕ ಸೇರಿದಂತೆ ಮೂವರು ಆರೋಪಿಗಳ ಬಂಧನ! ಶಿವಮೊಗ್ಗ, ಫೆ 19: ಯುವಕ, ಯುವತಿಗೆ ಬೆದರಿಸಿ ಹಣ ಸುಲಿಗೆ ಮಾಡಿದ್ದ ಆರೋಪದ ಮೇರೆಗೆ ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಓರ್ವ ಆಟೋ ಚಾಲಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಫೆ 18 ರಂದು ನಡೆದಿದೆ. ಶಿವಮೊಗ್ಗದ ಕ್ಲಾರ್ಕ್ ಪೇಟೆಯ ನಿವಾಸಿ ಆಟೋ ಚಾಲಕ ಇಲಿಯಾಸ್ ಯಾನೆ ಇಲ್ಲು (26), ದಾವಣಗೆರೆ ಜಿಲ್ಲೆ ಹೊನ್ನಾಳ್ಳಿ ತಾಲೂಕು ಚೀಲೂರು ನಿವಾಸಿ, ಹೂವಿನ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಮೊಹಮದ್ ವಾಸೀಂ (28) ಹಾಗೂ ಶಿವಮೊಗ್ಗದ ಅಣ್ಣಾನಗರದ ನಿವಾಸಿ ಚಾಲಕ ವೃತ್ತಿಯ ಚಂದ್ರಶೇಖರ್ (30) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ತುಂಗಾನಗರ ಠಾಣೆ ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಘಟನೆ ಹಿನ್ನೆಲೆ : ಶಿವಮೊಗ್ಗ ತಾಲೂಕಿನ ಗಾಜನೂರಿನ ಹೋಟೆಲ್ ವೊಂದಕ್ಕೆ ಭದ್ರಾವತಿಯ ದಡಮಘಟ್ಟದ ಯುವಕನೋರ್ವ ಪರಿಚಯಸ್ಥ ಯುವತಿಯೊಂದಿಗೆ ಆಗಮಿಸಿದ್ದ. ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ವೇಳೆ, ಅದೇ ಹೋಟೆಲ್ ನಲ್ಲಿದ್ದ ಮೂವರು ಆರೋಪಿಗಳು ತಮ್ಮ ಮೊಬೈಲ್ ಪೋನ್ ನಲ್ಲಿ ವೀಡಿಯೋ ಮಾಡಿಕೊಂಡಿದ್ದರು. ಸದರಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದರು. ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ನಂತರ ಆಟೋದಲ್ಲಿ ಯುವಕ – ಯವತಿಯನ್ನು ಶಿವಮೊಗಗ ನಗರದತ್ತ ಕರೆತಂದಿದ್ದರು. 1.50 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದರು. ಈ ವೇಳೆ ಯುವತಿಯ ಪರ್ಸ್ ನಲ್ಲಿದ್ದ 24,500 ರೂ. ಹಾಗೂ ಯುವಕನ ಬಳಿಯಿದ್ದ 1500 ರೂ. ಕಿತ್ತುಕೊಂಡಿದ್ದರು. 1.50 ಲಕ್ಷ ರೂ. ನೀಡುವಂತೆ ಹೇಳಿ ಬೆದರಿಸಿ ಕಳುಹಿಸಿದ್ದರು. ನಂತರ ಯುವಕನು 7 ಸಾವಿರ ರೂ. ಹಣದೊಂದಿಗೆ ಆರೋಪಿ ಇಲಿಯಾಸ್ ಭೇಟಿಯಾಗಿದ್ದ.. ಆರೋಪಿಯು ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಸಂಬಂಧ ಯುವಕನು ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
Shimoga | Shimoga Municipality area revision: Will the DC pay attention? shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಗಮನಹರಿಸುವರೆ ಜಿಲ್ಲಾಧಿಕಾರಿ?
shimoga | Shivamogga: In which areas will there be no electricity on March 17? shimoga | ಶಿವಮೊಗ್ಗ : ಯಾವೆಲ್ಲ ಪ್ರದೇಶಗಳಲ್ಲಿ ಮಾ. 17 ರಂದು ವಿದ್ಯುತ್ ಇರಲ್ಲ?
Fake TTE caught on Bengaluru-Shivamogga train! ಬೆಂಗಳೂರು –ಶಿವಮೊಗ್ಗ ರೈಲಿನಲ್ಲಿ ಸಿಕ್ಕಿಬಿದ್ದ ನಕಲಿ ಟಿಟಿಇ!
shimoga | Police special patrol in Shimoga Bhadravati Sagar Anavatti : 197 cases! shimoga | ಶಿವಮೊಗ್ಗ ಭದ್ರಾವತಿ ಸಾಗರ ಆನವಟ್ಟಿಯಲ್ಲಿ ಪೊಲೀಸ್ ವಿಶೇಷ ಗಸ್ತು : 197 ಕೇಸ್!
shimoga | Which areas of Shimoga taluk will not have electricity on February 15? shimoga | ಶಿವಮೊಗ್ಗ ತಾಲೂಕಿನ ಯಾವೆಲ್ಲ ಪ್ರದೇಶಗಳಲ್ಲಿ ಫೆ. 15 ರಂದು ವಿದ್ಯುತ್ ಇರಲ್ಲ?
shimoga | Shimoga: Allegation of lake encroachment in Gadikoppa - Deputy Lokayukta filed a voluntary complaint! shimoga | ಶಿವಮೊಗ್ಗ : ಗಾಡಿಕೊಪ್ಪದಲ್ಲಿ ಕೆರೆ ಒತ್ತುವರಿ ಆರೋಪ - ಉಪ ಲೋಕಾಯುಕ್ತರಿಂದ ಸ್ವಯಂಪ್ರೇರಿತ ದೂರು ದಾಖಲು!