ಶಿವಮೊಗ್ಗ | ಯುವಕ – ಯುವತಿಗೆ ಬೆದರಿಸಿ ಸುಲಿಗೆ ಪ್ರಕರಣ : ಆಟೋ ಚಾಲಕ ಸೇರಿದಂತೆ ಮೂವರು ಆರೋಪಿಗಳ ಬಂಧನ! ಶಿವಮೊಗ್ಗ, ಫೆ 19: ಯುವಕ, ಯುವತಿಗೆ ಬೆದರಿಸಿ ಹಣ ಸುಲಿಗೆ ಮಾಡಿದ್ದ ಆರೋಪದ ಮೇರೆಗೆ ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಓರ್ವ ಆಟೋ ಚಾಲಕ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ ಫೆ 18 ರಂದು ನಡೆದಿದೆ. ಶಿವಮೊಗ್ಗದ ಕ್ಲಾರ್ಕ್ ಪೇಟೆಯ ನಿವಾಸಿ ಆಟೋ ಚಾಲಕ ಇಲಿಯಾಸ್ ಯಾನೆ ಇಲ್ಲು (26), ದಾವಣಗೆರೆ ಜಿಲ್ಲೆ ಹೊನ್ನಾಳ್ಳಿ ತಾಲೂಕು ಚೀಲೂರು ನಿವಾಸಿ, ಹೂವಿನ ಮಾರ್ಕೆಟ್ ನಲ್ಲಿ ಕೆಲಸ ಮಾಡುತ್ತಿದ್ದ ಮೊಹಮದ್ ವಾಸೀಂ (28) ಹಾಗೂ ಶಿವಮೊಗ್ಗದ ಅಣ್ಣಾನಗರದ ನಿವಾಸಿ ಚಾಲಕ ವೃತ್ತಿಯ ಚಂದ್ರಶೇಖರ್ (30) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ತುಂಗಾನಗರ ಠಾಣೆ ಇನ್ಸ್’ಪೆಕ್ಟರ್ ಕೆ ಟಿ ಗುರುರಾಜ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಘಟನೆ ಹಿನ್ನೆಲೆ : ಶಿವಮೊಗ್ಗ ತಾಲೂಕಿನ ಗಾಜನೂರಿನ ಹೋಟೆಲ್ ವೊಂದಕ್ಕೆ ಭದ್ರಾವತಿಯ ದಡಮಘಟ್ಟದ ಯುವಕನೋರ್ವ ಪರಿಚಯಸ್ಥ ಯುವತಿಯೊಂದಿಗೆ ಆಗಮಿಸಿದ್ದ. ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ವೇಳೆ, ಅದೇ ಹೋಟೆಲ್ ನಲ್ಲಿದ್ದ ಮೂವರು ಆರೋಪಿಗಳು ತಮ್ಮ ಮೊಬೈಲ್ ಪೋನ್ ನಲ್ಲಿ ವೀಡಿಯೋ ಮಾಡಿಕೊಂಡಿದ್ದರು. ಸದರಿ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಸಿದ್ದರು. ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ನಂತರ ಆಟೋದಲ್ಲಿ ಯುವಕ – ಯವತಿಯನ್ನು ಶಿವಮೊಗಗ ನಗರದತ್ತ ಕರೆತಂದಿದ್ದರು. 1.50 ಲಕ್ಷ ರೂ. ನೀಡುವಂತೆ ಒತ್ತಾಯಿಸಿದ್ದರು. ಈ ವೇಳೆ ಯುವತಿಯ ಪರ್ಸ್ ನಲ್ಲಿದ್ದ 24,500 ರೂ. ಹಾಗೂ ಯುವಕನ ಬಳಿಯಿದ್ದ 1500 ರೂ. ಕಿತ್ತುಕೊಂಡಿದ್ದರು. 1.50 ಲಕ್ಷ ರೂ. ನೀಡುವಂತೆ ಹೇಳಿ ಬೆದರಿಸಿ ಕಳುಹಿಸಿದ್ದರು. ನಂತರ ಯುವಕನು 7 ಸಾವಿರ ರೂ. ಹಣದೊಂದಿಗೆ ಆರೋಪಿ ಇಲಿಯಾಸ್ ಭೇಟಿಯಾಗಿದ್ದ.. ಆರೋಪಿಯು ಹೆಚ್ಚಿನ ಹಣಕ್ಕೆ ಡಿಮ್ಯಾಂಡ್ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ಸಂಬಂಧ ಯುವಕನು ತುಂಗಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

shikaripura | ಶಿಕಾರಿಪುರ : ಹುಲಿ ಮೃತದೇಹ ಪತ್ತೆ – ತನಿಖೆಗೆ ಅರಣ್ಯ ಇಲಾಖೆ ಸಚಿವರ ಸೂಚನೆ!

ಶಿವಮೊಗ್ಗ (shimoga), ಫೆ.18: ಶಿವಮೊಗ್ಗ ಜಿಲ್ಲೆ ಸಾಗರ ಅರಣ್ಯ ವಿಭಾಗದ ಶಿಕಾರಿಪುರ ತಾಲೂಕಿನ ಬೈರಾಪುರ ಗ್ರಾಮದ ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ, ನಿನ್ನೆ ಸಂಜೆ 7-8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದೆ.

 ಹುಲಿಯ ಸಾವಿನ ಕುರಿತಂತೆ ಕೂಲಂಕಷ ತನಿಖೆ ನಡೆಸಿ ವರದಿ ಸಲ್ಲಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅವರು ಫೆ. 19 ರಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯ ಜೀವಿ ಪರಿಪಾಲಕರಿಗೆ ಸೂಚನೆ ನೀಡಿರುವ ಸಚಿವರು, ಹುಲಿಗೆ ಗುಂಡು (ಪೆಲೆಟ್ಸ್) ಹೊಡೆದ ಗಾಯವೂ ಇರುವುದಾಗಿ ಮಾಧ್ಯಮಗಳಲ್ಲಿ ಸಚಿತ್ರ ವರದಿಗಳು ಪ್ರಕಟವಾಗಿದೆ. ಈ ಬಗ್ಗೆ ತನಿಖೆ ನಡೆಸಿ 10 ದಿನಗಳ ಒಳಗಾಗಿ ವಾಸ್ತವ ವರದಿ ಸಲ್ಲಿಸಲು ತಿಳಿಸಿದ್ದಾರೆ.

ಹುಲಿಯ ಮೃತ ದೇಹ ಪತ್ತೆಯಾಗಿರುವ ಪ್ರದೇಶದಲ್ಲಿ, ಯಾವತ್ತೂ ಹುಲಿಯ ದರ್ಶನವೇ ಆಗಿಲ್ಲ. ಹೀಗಾಗಿ ಬೇರೆ ಕಡೆ ಹುಲಿ ಕೊಂದು ಇಲ್ಲಿ ಹಾಕಿರಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆಯೂ ತನಿಖೆ ನಡೆಸಲು ಸಚಿವರು ಸೂಚಿಸಿದ್ದಾರೆ.

Shimoga, Feb 18: The dead body of a 7-8 year old male tiger was found in the back water of Ambligola reservoir in Shikaripura taluk of Sagar Forest division of Shimoga district yesterday evening.

Forest, Biology and Environment Minister Ishwar B Khandre has on February 19 instructed the senior officials of the forest department to conduct a thorough investigation and submit a report on the death of the tiger.

shimoga | Extortion case of threatening young man and young woman: Arrest of three accused including auto driver! shimoga | ಯುವಕ – ಯುವತಿಗೆ ಬೆದರಿಸಿ ಸುಲಿಗೆ ಪ್ರಕರಣ : ಆಟೋ ಚಾಲಕ ಸೇರಿದಂತೆ ಮೂವರು ಆರೋಪಿಗಳ ಬಂಧನ! Previous post shimoga | ಶಿವಮೊಗ್ಗ | ಯುವಕ – ಯುವತಿಗೆ ಬೆದರಿಸಿ ಸುಲಿಗೆ ಪ್ರಕರಣ : ಆಟೋ ಚಾಲಕ ಸೇರಿದಂತೆ ಮೂವರು ಆರೋಪಿಗಳ ಬಂಧನ!
shimoga | Distribution of sand blocks in Shimoga district : DC important order! shimoga | ಶಿವಮೊಗ್ಗ ಜಿಲ್ಲೆಯಲ್ಲಿ ಮರಳು ಬ್ಲಾಕ್ ಗಳ ಹಂಚಿಕೆ : DC ಮಹತ್ವದ ಆದೇಶ! Next post shimoga | ಶಿವಮೊಗ್ಗ ಜಿಲ್ಲೆಯಲ್ಲಿ ಮರಳು ಬ್ಲಾಕ್ ಗಳ ಹಂಚಿಕೆ : DC ಮಹತ್ವದ ಆದೇಶ!