shimoga | ಶಿವಮೊಗ್ಗ ತಾಲೂಕಿನ ಯಾವೆಲ್ಲ ಪ್ರದೇಶಗಳಲ್ಲಿ ಫೆ. 15 ರಂದು ವಿದ್ಯುತ್ ಇರಲ್ಲ?

shimoga | Which areas of Shimoga taluk will not have electricity on February 15? shimoga | ಶಿವಮೊಗ್ಗ ತಾಲೂಕಿನ ಯಾವೆಲ್ಲ ಪ್ರದೇಶಗಳಲ್ಲಿ ಫೆ. 15 ರಂದು ವಿದ್ಯುತ್ ಇರಲ್ಲ?

ಶಿವಮೊಗ್ಗ (shivamogga), ಫೆ. 13:  ಶಿವಮೊಗ್ಗ ನಗರದ ಹೊರವಲಯ ಮಾಚೇನಹಳ್ಳಿಯಲ್ಲಿರುವ, 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ಗ್ರಾಮೀಣ ಉಪವಿಭಾಗ ವ್ಯಾಪ್ತಿಯಲ್ಲಿ, ಫೆ. 15 ರಂದು ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಎಂದು ಮೆಸ್ಕಾಂ ತಿಳಿಸಿದೆ.

ಈ ಕುರಿತಂತೆ ಮೆಸ್ಕಾಂ ಪ್ರಕಟಣೆ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಫೆ. 15 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ, ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.

ವಿವರ : ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ದರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್, ಹೊಸೂರು ರೆಡ್ಡಿಕ್ಯಾಂಪ್, ದುಮ್ಮಳ್ಳಿ, ಶುಗರ್ ಕಾಲೋನಿ,

ಜಯಂತಿಗ್ರಾಮ, ಹೊನ್ನವಿಲೆ, ಮೆ|| ರಾಮಮೂರ್ತಿ ಮಿನರಲ್ಸ್, ಜಿಲ್ಲಾ ಕೇಂದ್ರ ಕಾರಾಗೃಹ, ಕೊಯೋನಿಕ್ಸ್ ಐಟಿ ಪಾರ್ಕ್, ಮಲ್ನಾಡ್ ಆಸ್ಪತ್ರೆ, ಕೆಎಸ್‌ಆರ್‌ಪಿ ಕಾಲೋನಿ,

ನವುಲೆ ಬಸವಾಪುರ, ಶೆಟ್ಟಿಹಳ್ಳಿ, ಮಾಳೇನಹಳ್ಳಿ, ಗುಡ್ರಕೊಪ್ಪ, ಕೆಎಂಎಫ್ ಡೈರಿ ಹಾಗೂ ಸುತ್ತಮುತ್ತನಲ್ಲಿ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Shimoga Feb 13: Mescom informed that the quarterly maintenance work of the 110/11 KV power distribution station at Machenahalli on the outskirts of Shimoga city was carried out on February 15 in the rural subdivision.

Mescom has issued a notification in this regard. In this background, on February 15 from 9 am to 6 pm, it has been informed that there will be variation in power supply in the following areas.

Machenahalli, Bidher, Nidige, Othighatta, Siddragudi, Harekatte, Sogane, Achari Camp, Hosur Reddy Camp, Dummalli, Sugar Colony, Jayantigram, Honnaville, Me|| Ramamurthy Minerals, District Central Jail, Koonix IT Park, Malnad Hospital, KSRP Colony, Navule Basavapura, Shettyhalli, Malenahalli, Gudrakoppa, KMF Dairy and the surrounding villages, there will be a variation in the electrisity supply the mescom announcement said that.

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →