shimoga | ಶಿವಮೊಗ್ಗ : ರಸ್ತೆ ಅಗಲೀಕರಣ ಕಾಮಗಾರಿ – ಮಾ. 5 ರಂದು ವಿದ್ಯುತ್ ವ್ಯತ್ಯಯ!

shimoga | Shivamogga: In which areas will there be no electricity on March 17? shimoga | ಶಿವಮೊಗ್ಗ : ಯಾವೆಲ್ಲ ಪ್ರದೇಶಗಳಲ್ಲಿ ಮಾ. 17 ರಂದು ವಿದ್ಯುತ್ ಇರಲ್ಲ?

ಶಿವಮೊಗ್ಗ (shivamogga), ಮಾ. 3: ರಸ್ತೆ ಅಗಲೀಕರಣ ಕಾಮಗಾರಿ ಹಿನ್ನೆಲೆಯಲ್ಲಿ, ಮಾರ್ಚ್ 5 ರಂದು ಕಂಬ ಸ್ಥಳಾಂತರ ಕೆಲಸ ನಡೆಸಲಾಗುತ್ತಿದೆ. ಈ ಕಾರಣದಿಂದ ನಗರದ ಎಂಆರ್‌ಎಸ್ ವಿದ್ಯುತ್ ವಿತರಣಾ ಕೇಂದ್ರದ ಪುರಲೆ ಫೀಡರ್ – 3 ರ 11 ಕೆವಿ ಮಾರ್ಗದಿಂದ ವಿದ್ಯುತ್ ಪೂರೈಕೆಯಾಗುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

ಈ ಕುರಿತಂತೆ ಫೆ. 3 ರಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದೆ. ಕಾಮಗಾರಿ ಹಿನ್ನೆಲೆಯಲ್ಲಿ ಮಾ. 5 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಮಾಹಿತಿ ನೀಡಿದೆ.

ವಿವರ : ಗುರುಪುರ, ಪುರಲೆ, ಸುಬ್ಬಯ್ಯ ಆಸ್ಪತ್ರೆ, ಮಂಜುನಾಥ ಬಡಾವಣೆ, ವೆಂಕಟೇಶ ನಗರ, ಹಸೂಡಿ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಾವಾಗಲಿದೆ.

ಈ ಪ್ರದೇಶದ ಗ್ರಾಹಕರು ಇಲಾಖೆಯೊಂದಿಗೆ ಸಹಕರಿಸಬೇಕೆಂದು ನಗರ ಉಪವಿಭಾಗ-1 ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Shimoga, March 3: In the background of road widening work, pole shifting work is being carried out on March 5. Mescom informed that due to this, there will be power interruption in the areas where power is supplied from the 11 KV line of Purale Feeder-3 of MRS power distribution center in the city.

In this regard, a press release was issued on February 3. In the background of the work Mescom has informed that there will be variation in power supply in the following areas from 10 am to 5 pm on 5th.

Details : There will be power outage in Gurupura, Purale, Subbaiah Hospital, Manjunath extension, Venkatesh Nagar, Hasudi Road and surrounding areas. In a press release, Assistant Executive Engineer, Mescom, city Sub-division-1 appealed to the consumers of the area to cooperate with the department.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →