Kuvempu University | Vast corruption in Kuvempu University: Proposal in the Legislative Council – Demand for investigation kuvempu university | ಕುವೆಂಪು ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ವಿಧಾನಪರಿಷತ್ ನಲ್ಲಿ ಪ್ರಸ್ತಾಪ – ತನಿಖೆಗೆ ಆಗ್ರಹ

kuvempu university | ಕುವೆಂಪು ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ : ವಿಧಾನಪರಿಷತ್ ನಲ್ಲಿ ಪ್ರಸ್ತಾಪ – ತನಿಖೆಗೆ ಆಗ್ರಹ

ಶಿವಮೊಗ್ಗ (shivamogga), ಮಾ. 18: ರಾಜ್ಯದ ಪ್ರತಿಷ್ಠಿತ ವಿಶ್ವಾವಿದ್ಯಾಲಯಗಳಲ್ಲಿ ಒಂದಾದ ಕುವೆಂಪು ವಿಶ್ವವಿದ್ಯಾಲಯ 36 ವರ್ಷ ಇತಿಹಾಸ ಹೊಂದಿದೆ. ಆದರೆ ವಿವಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮತ್ತು ಅಸಮರ್ಪಕ ಆಡಳಿತ ನಡೆಯುತ್ತಿದೆ. ಈ ಕುರಿತಂತೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿಧಾನ ಪರಿಷತ್ ಶಾಸಕ ಡಾ.ಧನಂಜಯ ಸರ್ಜಿ ಅವರು ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್‌ ಅವರಿಗೆ ಆಗ್ರಹಿಸಿದ್ದಾರೆ.

ಮಂಗಳವಾರ ವಿಧಾನಪರಿಷತ್  ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಅವರು ಮಾತನಾಡಿದರು. ಕುವೆಂಪು ವಿ.ವಿಯಲ್ಲಿನ ಭ್ರಷ್ಟಾಚಾರ ಹಾಗೂ ದಕ್ಷ ಅಡಳಿತ ನಡೆಸುವಲ್ಲಿ ವಿಫಲವಾಗಿರುವ ಕುಲಸಚಿವರ ವಿರುದ್ಧ ಇತ್ತೀಚಿಗೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ ಸಮಗ್ರ ತನಿಖೆಗೆ ಆಗ್ರಹಿಸಿವೆ. ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ವಿವಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಆರೋಪಿಸಿದ್ದಾರೆ.

ದೇಶದ ಮುಂದಿನ ಭವಿಷ್ಯವಾಗಿರುವ, ವಿದ್ಯಾರ್ಥಿಗಳ ಶೈಕ್ಷಣಿಕ ಬದುಕನ್ನು ರೂಪಿಸುವ ಮಹತ್ತರ ಜವಾಬ್ದಾರಿ ನಿರ್ವಹಿಸಬೇಕಾದ ವಿವಿಯು ಏಕರೂಪ ವೇಳಾಪಟ್ಟಿ ಅನುಸರಿಸುವಲ್ಲಿ ಲೋಪ, ಪ್ರಸಾರಾಂಗದಲ್ಲಿ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ಆಗಿ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದ್ದಾರೆ.

ವಿ.ವಿ ಯ ದೂರ ಶಿಕ್ಷಣ ಪ್ರವೇಶಾತಿ ಮತ್ತು ವ್ಯಾಸಂಗದ ಇನ್ನಿತರ ನಿರ್ವಹಣೆಗಳನ್ನು ಎಲ್.ಎಂ.ಎಸ್ ಮುಖಾಂತರ ನಡೆಸಲು ಬೆಂಗಳೂರಿನ ಕಂಪನಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದ, ದರ ನಿರ್ಣಯಗಳಲ್ಲಿನ ತಪ್ಪುಗಳಿಂದಾಗಿ ವಿ.ವಿ.ಗೆ ಲಕ್ಷಾಂತರ ರೂಪಾಯಿಗಳ ನಷ್ಟವಾಗಿರುವುದಾಗಿ ಪ್ರತಿಭಟನಕಾರರು ದೂರಿರುತ್ತಾರೆ.

ಆಶ್ಚರ್ಯದ ವಿಷಯವೇನೆಂದರೇ ಸದರಿ ಸಂಸ್ಥೆಯವರು ಈ ಹಿಂದೆ ಅಧ್ಯಯನ ಕೇಂದ್ರ ತೆರೆದು ಆ ಮೂಲಕ ವಿದ್ಯಾರ್ಥಿಗಳಿಂದ ಪಡೆಯಲಾಗಿದ್ದ ಶುಲ್ಕಗಳನ್ನು ವಿಶ್ವವಿದ್ಯಾಲಯಕೆ ಪಾವತಿಸದೆ ಕೋಟ್ಯಾಂತರ ಶುಲ್ಕವನ್ನು ಬಾಕಿ ಉಳಿಸಿಕೊಂಡಿದೆ.

ಸದರಿ ಸಂಸ್ಥೆಯು ವಿಶ್ವಾವಿದ್ಯಾಲಯಕ್ಕೆ ನೀಡಿದ 30 ಲಕ್ಷ ರೂ. ಚೆಕ್ ಬೌನ್ಸ್ ಆಗಿ ಪ್ರಕರಣ ನ್ಯಾಯಲಯದಲ್ಲಿದೆ. ಇಂತಹ ಸಂಸ್ಥೆಯೊಂದಿಗೆ ಮತ್ತೊಮ್ಮೆ ವ್ಯವಹರಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ದೂರಿದ್ದಾರೆ.

ಕುವೆಂಪು ವಿಶ್ವಾವಿದ್ಯಾಲಯದವು ದೂರಶಿಕ್ಷಣ ವ್ಯಾಸಂಗ ಮಾಡಲು ಪ್ರವೇಶಾತಿಯನ್ನು ಎಲ್.ಎಂ.ಎಸ್ ಮುಖಾಂತರ ನಡೆಸಲು, ಸಂಸ್ಥೆಯೊಂದಿಗೆ ಹಲವು ಆಕ್ಷೇಪಣೆಗಳನ್ನು ಬದಿಗೊತ್ತಿ  ಕೆ.ಟಿ.ಟಿ.ಪಿ  ಕಾಯ್ದೆಯನ್ನು ಉಲ್ಲಂಘನೆ ಮಾಡಿ, ಒಪ್ಪಂದ ಮಾಡಿಕೊಂಡಿರುವುದು ವಿಶ್ವಾವಿದ್ಯಾಲಯಕ್ಕೆ ಕೋಟ್ಯಾಂತರ ರೂಪಾಯಿಗಳ ನಷ್ಟವನ್ನು ಉಂಟುಮಾಡಿದೆ. ಇದರಲ್ಲಿ ಭ್ರಷ್ಟಚಾರವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

shimoga, March 18: There is rampant corruption and mismanagement at Kuvempu University. A high-level investigation should be conducted into this. Legislative Council MLA Dr. Dhananjaya Sarji has urged Higher Education Minister Dr. M. C. Sudhakar to take strict action against the officials involved in corruption. He spoke on the issue during the Legislative Council session on Tuesday.

Various organizations have recently protested against the corruption and failure of the registrar at Kuvempu University to conduct efficient administration, demanding a thorough investigation. They have alleged that the allegations published in local newspapers show that not everything is right at the university.

Shivamogga: An unknown young man who came to steal and fell asleep next to the house! shimoga | ಮನೆಯ ಪಕ್ಕವೇ ನಿದ್ರೆ ಹೋದ ಅಪರಿಚಿತ ಯುವಕ… ಎಚ್ಚರಿಸಿ ಕರೆದೊಯ್ದ ಪೊಲೀಸರು…! Previous post shimoga | ಮನೆಯ ಪಕ್ಕವೇ ನಿದ್ರೆ ಹೋದ ಅಪರಿಚಿತ ಯುವಕ… ಎಚ್ಚರಿಸಿ ಕರೆದೊಯ್ದ ಪೊಲೀಸರು…!
Shimoga Palike | Municipality area revision: Speed in Tumkur - snail pace in Shivamogga! | Continued negligence of public representatives - officials..!! ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ತುಮಕೂರಲ್ಲಿ ವೇಗ - ಶಿವಮೊಗ್ಗದಲ್ಲಿ ಆಮೆವೇಗ! | ಮುಂದುವರಿದ ಜನಪ್ರತಿನಿಧಿಗಳು - ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ..!! Next post shimoga | ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ : ಸರ್ಕಾರಕ್ಕೆ ಸಲ್ಲಿಕೆಯಾಗದ ಪ್ರಸ್ತಾವನೆ!