bhadravati | Father and son drown in Bhadra Dam backwater! bhadravati | ಭದ್ರಾ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ತಂದೆ – ಮಗ ಸಾವು!

Thirthahalli | ತೀರ್ಥಹಳ್ಳಿ : ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲು!

ತೀರ್ಥಹಳ್ಳಿ (Thirthahalli), ಮಾ. 30: ತುಂಗಾ ನದಿಯಲ್ಲಿ ಈಜಲು ತೆರಳಿದ ಯುವಕನೋರ್ವ, ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತೀರ್ಥಹಳ್ಳಿ ಪಟ್ಟಣದಲ್ಲಿ ಮಾ. 30 ರ ಮಧ್ಯಾಹ್ನ ನಡೆದಿದೆ.

ರಾಮೇಶ್ವರ ದೇವಾಲಯ ಹಿಂಭಾಗದ ತುಂಗಾ ನದಿಯಲ್ಲಿ ಘಟನೆ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಜಿಗಳಗೋಡು ಗ್ರಾಮದ ಜಿಟ್ಟಿಕೊಪ್ಪ ಮೂಲದ ಕಿರಣ್ (20) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ.

ಕಿರಣ್ ತನ್ನ  ಸ್ನೇಹಿತರೊಂದಿಗೆ ತುಂಗಾ ನದಿಯಲ್ಲಿ ಈಜಾಡಲು ತೆರಳಿದ್ದ. ಈಜಾಡುವ ವೇಳೆ ನೀರಿನ ಸುಳಿಯಲ್ಲಿ ಸಿಲುಕಿ ಅಸುನೀಗಿದ್ದಾನೆ ಎಂದು ತಿಳಿದುಬಂದಿದೆ.

ಸ್ಥಳೀಯರು ಮೃತದೇಹವನ್ನು ನದಿಯಿಂದ ಹೊರತೆಗೆದಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ. ಸ್ಥಳಕ್ಕೆ ತೀರ್ಥಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.

Thirthahalli, Mar. 30: A young man who went for a swim in the Tunga River accidentally drowned and died in an incident that took place in Thirthahalli town on March 30. The incident took place in the Tunga River behind the Rameshwaram Temple. The deceased has been identified as Kiran (22).

Shivamogga: Heavy rain accompanied by thunder and lightning! ಶಿವಮೊಗ್ಗ: ಗುಡುಗು ಬಿರುಗಾಳಿ ಸಹಿತ ಭಾರೀ ಮಳೆ! Previous post rain alert | ಬಿರು ಬಿಸಿಲಿನ ನಡುವೆ ಮತ್ತೆ ಭಾರೀ ಮಳೆ ಮುನ್ಸೂಚನೆ!
Shivamogga, Jul. 22: Water will be released from the main canal of the Bhadra Upper River Project under the Visvesvaraya Jal Nigam Limited to Vani Vilas Sagar from 27-07-2025 as per the government's directive, the announcement said. Next post bhadra dam | ಭದ್ರಾ ಜಲಾಶಯದಿಂದ 2 ಟಿಎಂಸಿ ನೀರು ಹರಿಸಲು ನಿರ್ಧಾರ : ಕಾರಣವೇನು?