ತೀರ್ಥಹಳ್ಳಿ (thirthahalli), ಜುಲೈ 30: ಡಕಾಯಿತಿ ಪ್ರಕರಣವೊಂದರ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ, ಕಳೆದ 37 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು, ತೀರ್ಥಹಳ್ಳಿ ತಾಲೂಕು ಮಾಳೂರು ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಮಂಗಳೂರು ಜಿಲ್ಲೆ ಬಜ್ಪೆ ತಾಲೂಕಿನ ನಿವಾಸಿ ಅಬ್ದುಲ್ ಖಾದರ್ ಯಾನೆ ಮಾಣು (57) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.
1989 ನೇ ಸಾಲಿನಲ್ಲಿ ತೀರ್ಥಹಳ್ಳಿ ತಾಲೂಕಿನ ಮೃಗವಧೆ ಗ್ರಾಮದ ಗುಡ್ಡೆ ಕೊಪ್ಪದಲ್ಲಿ ನಡೆದ ಡಕಾಯಿತಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಳೂರು ಪೊಲೀಸ್ ಠಾಣೆ ಗುನ್ನೆ ನಂ: 63/1989 ಕಲಂ:- 395 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಬ್ದುಲ್ ಖಾದರ್ ಯಾನೆ ಮೊಣು ಕಳೆದ 37 ವರ್ಷಗಳಿಂದ ತಲೆಮರಿಸಿಕೊಂಡಿದ್ದು, ನ್ಯಾಯಾಲಯವು LPR NO : 20/2001 ಘೋಷಿಸಿರುತ್ತದೆ.
ಆರೋಪಿಯ ಪತ್ತೆ ಬಗ್ಗೆ ಎಸ್ಪಿ ನಿಖಿಲ್ ಬಿ ಅವರು ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ ಕಲಗುಚ್ಚಿ ಮಾರ್ಗದರ್ಶನದಲ್ಲಿ ಮಾಳೂರು ಠಾಣೆ ಇನ್ಸ್’ಪೆಕ್ಟರ್ ರಾಜಶೇಖರ್ , ಪಿಎಸ್ಐ ಸುನಿಲ್ ಬಿ. ಸಿ. ರವರ ನಿರ್ದೇಶನದಲ್ಲಿ ಠಾಣೆ ಸಿಬ್ಬಂದಿ ಗಳಾದ ಮೇಘರಾಜ್ ಮತ್ತು ಅಭಿಲಾಶ ರವರು ಆರೋಪಿಯನ್ನು ಕೇರಳ ರಾಜ್ಯದ ಮಂಜೇಶ್ವರದ ವರ್ಕಾಡಿ ಬಳಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
Thirthahalli: Malur police arrest accused who was absconding for 37 years! | Thirthahalli, July 30: An accused who was absconding for the past 37 years without appearing in court for the hearing of a dacoity case has been arrested by the Thirthahalli taluk Malur police station police.

