shimoga rain alert | ಚಂಡಮಾರುತ, ಬಿಸಿಲ ಧಗೆ ಎಫೆಕ್ಟ್ : ಭಾರೀ ಮಳೆ ಮುನ್ಸೂಚನೆ!

shimoga rain | Shivamogga | Heavy rain in Malnad even before the start of monsoon! shimoga rain | ಶಿವಮೊಗ್ಗ | ಮುಂಗಾರು ಆರಂಭಕ್ಕೂ ಮುನ್ನವೇ ಮಲೆನಾಡಲ್ಲಿ ಭರ್ಜರಿ ಮಳೆ!

ಶಿವಮೊಗ್ಗ (shivamogga), ಮೇ 1: ಮುಂಗಾರು ಪೂರ್ವ ಮಳೆಯು, ಮೇ ತಿಂಗಳಲ್ಲಿಯೂ ಮುಂದುವರಿಕೆಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಮೇ 6 ರವರೆಗೆ ಮಲೆನಾಡು ಪ್ರದೇಶ ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಆಂಧ್ರಪ್ರದೇಶ ಭಾಗದ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತ ಹಾಗೂ ಪ್ರಸ್ತುತ ಏರುತ್ತಿರುವ ಬಿಸಿಲ ಧಗೆಯ ಕಾರಣದಿಂದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಶಿವಮೊಗ್ಗ, ಬೆಂಗಳೂರು ನಗರ – ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮೈಸೂರು, ಚಾಮರಾಜನಗರ, ಹಾಸನ, ತುಮಕೂರು, ದಾವಣಗೆರೆ, ಚಿಕ್ಕಮಗಳೂರು, ಮಂಡ್ಯ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಮೇ 1 ರಿಂದ 3 ರವರೆಗೆ ಸಾಧಾರಣ ಮಳೆಯಾಗಲಿದೆ. ಮೇ 4 ರಿಂದ 6 ರವರೆಗೆ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಹೆಚ್ಚಿದ ತಾಪ : ಶಿವಮೊಗ್ಗ ಜಿಲ್ಲೆಯಾದ್ಯಂತ ಬಿಸಿಲ ತಾಪ ಏರುಗತಿಯಲ್ಲಿ ಸಾಗಿದೆ. ಶಿವಮೊಗ್ಗ ನಗರದಲ್ಲಿ 35 ಡಿಗ್ರಿ ಸೆಲ್ಸಿಯಸ್ ಗೂ ಅಧಿಕ ಪ್ರಮಾಣದ ತಾಪಮಾನ ದಾಖಲಾಗುತ್ತಿದೆ. ಜಿಲ್ಲೆಯ ವಿವಿಧೆಡೆಯೂ ಉಷ್ಣಾಂಶದ ಪ್ರಮಾಣ ಹೆಚ್ಚಿರುವುದು ಕಂಡುಬರುತ್ತಿದೆ.

ಆದರೆ ಜಿಲ್ಲೆಯ ವಿವಿಧೆಡೆ  ಆಗಾಗ್ಗೆ ಬೀಳುತ್ತಿರುವ ಮುಂಗಾರು ಪೂರ್ವ ಮಳೆಯು ಬಿಸಿಲ ತಾಪ ಕೊಂಚ ತಗ್ಗಿಸಿದೆ. ಜೊತೆಗೆ ಜನ – ಜಾನುವಾರುಗಳಿಗೆ ಸಾಕಷ್ಟು ಅನುಕೂಲವಾಗುವಂತೆ ಮಾಡಿದೆ.

Shivamogga, May 1: The India Meteorological Department has forecast that the pre-monsoon rains will continue in May as well. It has said that there is a possibility of heavy rain in various parts of the state, including the Malnad region, till May 6.

It has been stated that widespread rainfall is likely in Shivamogga, Bangalore Urban – Rural, Kolar, Chikkaballapur, Ramanagara, Mysore, Chamarajanagar, Hassan, Tumkur, Davangere, Chikkamagaluru, Mandya, Bellary and Chitradurga districts.

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: www.udayasaakshi.@gmail.com Mobile : 9242987506

View all posts by B. Renukesha →