
shimoga | ಶಿವಮೊಗ್ಗ : ಕೆರೆಯಲ್ಲಿ ಕಾಲು ಜಾರಿ ಬಿದ್ದು ಯುವಕ ಸಾ***ವು!
ಶಿವಮೊಗ್ಗ (shivamogga), ಆಗಸ್ಟ್ 12: ಕೆರೆಯಲ್ಲಿ ಕಾಲು ಜಾರಿ ಬಿದ್ದು ಯುವಕನೋರ್ವ ಮೃ**ತ**ಪಟ್ಟ ಘಟನೆ, ಶಿವಮೊಗ್ಗ ತಾಲೂಕಿನ ಆಯನೂರು ಸಮೀಪದ ಗೌಡನಕೆರೆಯಲ್ಲಿ ಆಗಸ್ಟ್ 12 ರಂದು ನಡೆದಿದೆ.
ಆಯನೂರು – ಹಣಗೆರೆಕಟ್ಟೆ ರಸ್ತೆಯ ಹೊಸೂರು ಗ್ರಾಮದ ನಿವಾಸಿ ನಿಶಾಂತ್ (25) ನೀರುಪಾಲಾದ ಯುವಕ ಎಂದು ಗುರುತಿಸಲಾಗಿದೆ. ಬೆಳಿಗ್ಗೆ ಸರಿಸುಮಾರು 6 ಗಂಟೆ ಸುಮಾರಿಗೆ ಗೌಡನಕೆರೆಗೆ ಯುವಕ ತೆರಳಿದ್ದು, 10 ಗಂಟೆಯಾದರೂ ಮನೆಗೆ ಹಿಂದಿರುಗಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕಾರಣದಿಂದ ಕುಟುಂಬದವರು ಕೆರೆ ಬಳಿ ಆಗಮಿಸಿ ಪರಿಶೀಲಿಸಿದ್ದಾರೆ. ಈ ವೇಳೆ ಯುವಕನ ಬೈಕ್ ಹಾಗೂ ಚಪ್ಪಲಿ ಮಾತ್ರ ಪತ್ತೆಯಾಗಿದೆ. ತಕ್ಷಣವೇ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ರವಾನಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ತಂಡ, ಬೋಟ್ ಮೂಲಕ ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದೆ. ಸಂಜೆ 4. 30 ಗಂಟೆ ಸುಮಾರಿಗೆ ಕೆರೆಯಲ್ಲಿ ಯುವಕನ ಮೃ**ತದೇ**ಹ ಪತ್ತೆ ಹಚ್ಚುವಲ್ಲಿ ಸಫಲವಾಗಿದೆ. ಈ ಕುರಿತಂತೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ ತಂಡದ ಎಫ್ ಎಸ್ ಟಿ ಓ ಮಕ್ದುಂ ಹುಸೇನ್, ಎಲ್ ಎಫ್ ಚೇತನ್ ಕುಮಾರ್, ಎಫ್ ಡಿ ಮಂಜುನಾಥ್, ಫೈರ್ ಮ್ಯಾನ್ ಗಳಾದ ರಾಜೀವ್ ಸುಣಗಾರ್, ಸಂತೋಷ್, ಸಾಗರ್ ಭಾಗಿಯಾಗಿದ್ದರು.
Shimoga, August 12: The incident of d**eath of a young man after he slipped and fell in the lake took place on August 12 at Gaudanakere near Ayanur in Shimoga taluk.