Shivamogga : bommanakatte ashraya layout site golmal - demand for enquiry! ಶಿವಮೊಗ್ಗ : ಆಶ್ರಯ ನಿವೇಶನ ಹಕ್ಕುಪತ್ರ ಗೋಲ್ಮಾಲ್ – ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಮನವಿ

shimoga | ಶಿವಮೊಗ್ಗ : ಆಶ್ರಯ ನಿವೇಶನ ಹಕ್ಕುಪತ್ರ ಗೋಲ್ಮಾಲ್ – ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಮನವಿ

ಶಿವಮೊಗ್ಗ (shivamogga), ಅಕ್ಟೋಬರ್ 9: ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಎ ಬ್ಲಾಕ್ ನಲ್ಲಿ, ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದು ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಹಿತರಕ್ಷಣಾ ಸಮಿತಿ ಆರೋಪಿಸಿದೆ.

ಈ ಸಂಬಂಧ ಅಕ್ಟೋಬರ್ 9 ರಂದು ಸಂಘಟನೆಯ ಪ್ರಮುಖರು, ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಪತ್ರ ಅರ್ಪಿಸಿ ತನಿಖೆಗೆ ಆಗ್ರಹಿಸಿದೆ.

ಎ ಬ್ಲಾಕ್ ನ ನಿವೇಶನವೊಂದಕ್ಕೆ ಪ್ರಸ್ತುತ ಮಹಿಳೆಯೋರ್ವರ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ. ಆದರೆ ಇದಕ್ಕೂ ಮುನ್ನ ಸದರಿ ನಿವೇಶನದ ಹಕ್ಕುಪತ್ರವನ್ನು ಬೇರೆಯವರಿಗೆ ನೀಡಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಎ ಬ್ಲಾಕ್ ನ ಆಶ್ರಯ ನಿವೇಶನಗಳಿಗೆ ಕಾನೂನುಬಾಹಿರವಾಗಿ ಹಕ್ಕುಪತ್ರ ನೀಡಲಾಗುತ್ತಿದೆ. ಈ ಕುರಿತಂತೆ ತನಿಖೆ ನಡೆಸಬೇಕು. ನಕಲಿ ಹಕ್ಕುಪತ್ರ ಸೃಷ್ಟಿಗೆ ಕಡಿವಾಣ ಹಾಕಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಮನವಿ ಅರ್ಪಿಸುವ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ಬಿ ಸಂತೋಷ್ ನಾಯ್ಕ್, ಶಶಿಕುಮಾರ್, ಬಾಬು, ಪ್ರವೀಣ್, ಅಶೋಕ್ ಮೊದಲಾದವರಿದ್ದರು.

Shivamogga, October 9: The Sir M Visvesvaraya Building and Laborers’ Welfare Committee has alleged that fake documents are being created and land titles are being distributed in Block A of Bommanakkatte Ashraya Layout in Shivamogga city.

Shivamogga: Petition seeking action against lawyer who threw shoe at Supreme Court judge ಶಿವಮೊಗ್ಗ : ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆದ ವಕೀಲನ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮನವಿ Previous post shimoga | ಶಿವಮೊಗ್ಗ : ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆದ ವಕೀಲನ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮನವಿ
Power outages in various parts of Shivamogga city on November 30th! ಶಿವಮೊಗ್ಗ ನಗರದ ವಿವಿಧೆಡೆ ನವೆಂಬರ್ 30 ರಂದು ವಿದ್ಯುತ್ ವ್ಯತ್ಯಯ! Next post Shimoga | power cut news | ಶಿವಮೊಗ್ಗ : ಅಕ್ಟೋಬರ್ 11 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ!