Shivamogga : bommanakatte ashraya layout site golmal - demand for enquiry! ಶಿವಮೊಗ್ಗ : ಆಶ್ರಯ ನಿವೇಶನ ಹಕ್ಕುಪತ್ರ ಗೋಲ್ಮಾಲ್ – ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಮನವಿ

shimoga | ಶಿವಮೊಗ್ಗ : ಆಶ್ರಯ ನಿವೇಶನ ಹಕ್ಕುಪತ್ರ ಗೋಲ್ಮಾಲ್ – ಕ್ರಮಕ್ಕೆ ಆಗ್ರಹಿಸಿ ಡಿಸಿಗೆ ಮನವಿ

ಶಿವಮೊಗ್ಗ (shivamogga), ಅಕ್ಟೋಬರ್ 9: ಶಿವಮೊಗ್ಗ ನಗರದ ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಎ ಬ್ಲಾಕ್ ನಲ್ಲಿ, ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳ ಹಕ್ಕುಪತ್ರ ವಿತರಿಸಲಾಗುತ್ತಿದೆ ಎಂದು ಸರ್ ಎಂ ವಿಶ್ವೇಶ್ವರಯ್ಯ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಹಿತರಕ್ಷಣಾ ಸಮಿತಿ ಆರೋಪಿಸಿದೆ.

ಈ ಸಂಬಂಧ ಅಕ್ಟೋಬರ್ 9 ರಂದು ಸಂಘಟನೆಯ ಪ್ರಮುಖರು, ಡಿಸಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಮನವಿ ಪತ್ರ ಅರ್ಪಿಸಿ ತನಿಖೆಗೆ ಆಗ್ರಹಿಸಿದೆ.

ಎ ಬ್ಲಾಕ್ ನ ನಿವೇಶನವೊಂದಕ್ಕೆ ಪ್ರಸ್ತುತ ಮಹಿಳೆಯೋರ್ವರ ಹೆಸರಿಗೆ ಖಾತೆ ಮಾಡಿಕೊಡಲಾಗಿದೆ. ಆದರೆ ಇದಕ್ಕೂ ಮುನ್ನ ಸದರಿ ನಿವೇಶನದ ಹಕ್ಕುಪತ್ರವನ್ನು ಬೇರೆಯವರಿಗೆ ನೀಡಲಾಗಿದೆ ಎಂದು ಸಂಘಟನೆ ತಿಳಿಸಿದೆ.

ಎ ಬ್ಲಾಕ್ ನ ಆಶ್ರಯ ನಿವೇಶನಗಳಿಗೆ ಕಾನೂನುಬಾಹಿರವಾಗಿ ಹಕ್ಕುಪತ್ರ ನೀಡಲಾಗುತ್ತಿದೆ. ಈ ಕುರಿತಂತೆ ತನಿಖೆ ನಡೆಸಬೇಕು. ನಕಲಿ ಹಕ್ಕುಪತ್ರ ಸೃಷ್ಟಿಗೆ ಕಡಿವಾಣ ಹಾಕಬೇಕು ಎಂದು ಸಂಘಟನೆ ಆಗ್ರಹಿಸಿದೆ.

ಮನವಿ ಅರ್ಪಿಸುವ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷರಾದ ಬಿ ಸಂತೋಷ್ ನಾಯ್ಕ್, ಶಶಿಕುಮಾರ್, ಬಾಬು, ಪ್ರವೀಣ್, ಅಶೋಕ್ ಮೊದಲಾದವರಿದ್ದರು.

Shivamogga, October 9: The Sir M Visvesvaraya Building and Laborers’ Welfare Committee has alleged that fake documents are being created and land titles are being distributed in Block A of Bommanakkatte Ashraya Layout in Shivamogga city.

Shivamogga: Petition seeking action against lawyer who threw shoe at Supreme Court judge ಶಿವಮೊಗ್ಗ : ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆದ ವಕೀಲನ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮನವಿ Previous post shimoga | ಶಿವಮೊಗ್ಗ : ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಮೇಲೆ ಶೂ ಎಸೆದ ವಕೀಲನ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಮನವಿ
Shivamogga: Power outages in various places on October 9th! ಶಿವಮೊಗ್ಗ : ಅಕ್ಟೋಬರ್ 9 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Next post Shimoga | power cut news | ಶಿವಮೊಗ್ಗ : ಅಕ್ಟೋಬರ್ 11 ರಂದು ನಗರದಲ್ಲಿ ವಿದ್ಯುತ್ ವ್ಯತ್ಯಯ!