thirthahalli news | Young woman from Hegalathi village in Thirthahalli goes missing – Police appeal for help in finding her ತೀರ್ಥಹಳ್ಳಿಯ ಹೆಗಲತ್ತಿ ಗ್ರಾಮದ ಯುವತಿ ಕಣ್ಮರೆ – ಪತ್ತೆಗೆ ಸಹಕರಿಸಲು ಪೊಲೀಸರ ಮನವಿ

thirthahalli news | ತೀರ್ಥಹಳ್ಳಿಯ ಹೆಗಲತ್ತಿ ಗ್ರಾಮದ ಯುವತಿ ಕಣ್ಮರೆ – ಪತ್ತೆಗೆ ಸಹಕರಿಸಲು ಪೊಲೀಸರ ಮನವಿ

ತೀರ್ಥಹಳ್ಳಿ (thirthahalli), ನವೆಂಬರ್ 13: ಮನೆಯಿಂದ ಹೊರಹೋದ ಯುವತಿಯೋರ್ವಳು ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಗ್ರಾಮದ ಹೆಗಲತ್ತಿಯಲ್ಲಿ ನಡೆದಿದೆ.

ಈ ಕುರಿತಂತೆ ಪೊಲೀಸ್ ಇಲಾಖೆ ನವೆಂಬರ್ 13 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಗುರುಪ್ರಸಾದ್ ಎಂಬುವರ ಪುತ್ರಿ 21 ವರ್ಷದ ನಾಗಶ್ರೀ ನಾಪತ್ತೆಯಾದವರಾಗಿದ್ದಾರೆ. ಅಕ್ಟೋಬರ್ 11 ರಂದು ರಾತ್ರಿ ಮನೆಯಿಂದ ಹೋದವರು ಇಲ್ಲಿಯವರೆಗೂ ಹಿಂದಿರುಗಿಲ್ಲ.

ಚಹರೆ : ಯುವತಿಯು 5 ಅಡಿ ಎತ್ತರ, ದುಂಡುಮುಖ, ಗೋಧಿ ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾರೆ. ಮನೆಯಿಂದ ಹೋಗುವಾಗ ಲೈಟ್ ಪಿಂಕ್ ಟೀ ಶರ್ಟ್, ಕಪ್ಪು ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.

ಇವರ ಬಗ್ಗೆ ಮಾಹಿತಿ ತಿಳಿದುಬಂದಲ್ಲಿ ಮಾಳೂರು ಪೊಲೀಸ್ ಠಾಣೆ ದೂ. ಸಂ. : 08181 – 235142/9480803353/08181-228310/9480803333/08182-261413/ 9480803300 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Thirthahalli, November 13: A young woman who left her home mysteriously disappeared in Hegalathi, Malur village, Thirthahalli taluk, Shimoga district.

Shivamogga: Disruption in drinking water supply on November 14th - 15th! ಶಿವಮೊಗ್ಗ : ನವೆಂಬರ್ 14 - 15 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ! Previous post shimoga | drinking water | ಶಿವಮೊಗ್ಗ : ನವೆಂಬರ್ 14 – 15 ರಂದು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ!
A young man from Keegadi village in Thirthahalli has gone missing! ತೀರ್ಥಹಳ್ಳಿಯ ಕೀಗಡಿ ಗ್ರಾಮದ ಯುವಕ ನಾಪತ್ತೆ! Next post Thirthahalli news | ತೀರ್ಥಹಳ್ಳಿಯ ಕೀಗಡಿ ಗ್ರಾಮದ ಯುವಕ ನಾಪತ್ತೆ!