Thirthahalli | ತೀರ್ಥಹಳ್ಳಿ : ಮನೆಯಿಂದ ಶಿವಮೊಗ್ಗದ ಕಾಲೇಜ್ ಗೆ ತೆರಳಿದ ಯುವತಿ ನಿಗೂಢ ಕಣ್ಮರೆ!
ತೀರ್ಥಹಳ್ಳಿ (thirthahalli), ನವೆಂಬರ್ 15 : ಮನೆಯಿಂದ ಕಾಲೇಜ್ ಗೆ ತೆರಳಿದ ಯುವತಿಯೋರ್ವಳು, ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಗ್ಗೊಡಿಗೆ ಗ್ರಾಮದ ಕೊರೊಡಿ ಆನಂದ್ ಹೆಚ್ ಎಸ್ ಎಂಬುವವರ ಪುತ್ರಿ ಈಶಾನ್ಯ (19) ನಾಪತ್ತೆಯಾದ ಯುವತಿ ಎಂದು ಗುರುತಿಸಲಾಗಿದೆ. ಈ ಕುರಿತಂತೆ ಪೊಲೀಸ್ ಇಲಾಖೆಯು ನವೆಂಬರ್ 15 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಯುವತಿಯು ಶಿವಮೊಗ್ಗದ ವಸುಂಧರ ಹಾಸ್ಟೆಲ್‌ನಲ್ಲಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ 2 ನೇ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದರು. ನವೆಂಬರ್ 10 ರಂದು ಮನೆಯಿಂದ ಕಾಲೇಜ್‌ಗೆ ಹೋಗುವುದಾಗಿ ಯುವತಿ ಹೇಳಿ ಹೋಗಿದ್ದು, ನಂತರ ಕಣ್ಮರೆಯಾಗಿದ್ದಾರೆ. ಎಲ್ಲಿಯೂ ಸುಳಿವು ಲಭ್ಯವಾಗಿಲ್ಲ.
ಚಹರೆ : ಯುವತಿಯು 5 ಅಡಿ ಎತ್ತರ, ದೃಢವಾದ ಮೈಕಟ್ಟು, ದುಂಡು ಮುಖ, ಎಣ್ಣೆ ಕಪ್ಪು ಮೈ ಬಣ್ಣ, ತಲೆಯಲ್ಲಿ ಸುಮಾರು 14 ಇಂಚು ಉದ್ದದ ಕಪ್ಪು ಕೂದಲಿದ್ದು, ಎಡ ತುಟಿಯ ಮೇಲ್ಭಾಗ ರಾಗಿ ಕಾಳು ಗಾತ್ರದ ಕಪ್ಪುಮಚ್ಚೆ ಇರುತ್ತದೆ. ಕನ್ನಡ ಮಾತನಾಡಲು, ಓದಲು – ಬರೆಯಲು ತಿಳಿದಿದ್ದು ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ್ ಬಿಳಿ ಬಣ್ಣದ ವೇಲ್ ಧರಿಸಿರುತ್ತಾರೆ. ಹಾಗೂ ಒಂದು ಕಪ್ಪು ಬಣ್ಣದ ಸ್ಕೂಲ್ ಬ್ಯಾಗ್ ತೆಗೆದುಕೊಂಡು ಹೋಗಿರುತ್ತಾರೆ.
ಸದರಿ ಯುವತಿಯ ಮಾಹಿತಿ ಲಭ್ಯವಾದಲ್ಲಿ ಎಸ್.ಪಿ. ಶಿವಮೊಗ್ಗ -08182-261400, ಡಿವೈಎಸ್‌ಪಿ ತೀರ್ಥಹಳ್ಳಿ 08181 – 220388, ಸಿಪಿಐ ಮಾಳೂರು ವೃತ್ತ :- 9480803333/ಪಿಎಸ್‌ಐ ಆಗುಂಬೆ ರವರಿಗೆ :- 9480803314, ಕಂಟ್ರೋಲ್ ರೂ ಶಿವಮೊಗ್ಗ – 9480803300, ಇವರುಗಳನ್ನು ಸಂಪರ್ಕಿಸಿ ಮಾಹಿತಿಯನ್ನು ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.
Thirthahalli, November 15: A young woman who had gone to college from home has mysteriously disappeared. The incident took place under the jurisdiction of Agumbe Police Station in Thirthahalli taluk, Shimoga district.
