shimoga central jail news | ಶಿವಮೊಗ್ಗ ಸೆಂಟ್ರಲ್ ಜೈಲ್ ಸಿಬ್ಬಂದಿ ಅರೆಸ್ಟ್ : ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..?!

Prison staff caught bringing marijuana to Shivamogga Central Jail! ಶಿವಮೊಗ್ಗ ಸೆಂಟ್ರಲ್ ಜೈಲ್ ಸಿಬ್ಬಂದಿ ಅರೆಸ್ಟ್ : ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..?!

ಶಿವಮೊಗ್ಗ (shivamogga), ನವೆಂಬರ್ 21: ಒಳ ಉಡುಪಿನಲ್ಲಿ ಗಾಂಜಾ ಅಡಿಗಿಸಿಕೊಂಡು ಜೈಲ್’ಗೆ ಆಗಮಿಸಿದ ಶಿವಮೊಗ್ಗ ಸೆಂಟ್ರಲ್ ಜೈಲ್ ಸಿಬ್ಬಂದಿಯೋರ್ವ, ಜೈಲಿನ ಭದ್ರತಾ ಸಿಬ್ಬಂದಿಗೆ ಸಿಕ್ಕಿಬಿದ್ದ ಕುತೂಹಲಕಾರಿ ಘಟನೆ ನವೆಂಬರ್ 20 ರಂದು ನಡೆದಿದೆ!

ಸೆಂಟ್ರಲ್ ಜೈಲ್ ನಲ್ಲಿ ಎಸ್.ಡಿ.ಎ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದ ಸಾತ್ವಿಕ್ (25) ಗಾಂಜಾ ಸಾಗಾಣೆ ವೇಳೆ ಸಿಕ್ಕಿಬಿದ್ದ ನೌಕರನಾಗಿದ್ದಾನೆ. ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಜೈಲಿನ ಸಿಬ್ಬಂದಿಗಳ ಕೈಗೆ ಆರೋಪಿ ಸಿಲುಕಿ ಬಿದ್ದಿರುವುದು ಪ್ರಕರಣದ ವಿಶೇಷವಾಗಿದೆ.

ಏನೀದು ಘಟನೆ? : 20/11/2025 ರಂದು ಬೆಳಿಗ್ಗೆ 10.25 ಗಂಟೆಗೆ ಸಾತ್ವಿಕ್ ಎಂದಿನಂತೆ ಜೈಲ್’ಗೆ ಕರ್ತವ್ಯಕ್ಕೆಂದು ಆಗಮಿಸಿದ್ದಾನೆ.

ಈ ವೇಳೆ ಜೈಲ್’ನ ಪ್ರವೇಶ ದ್ವಾರದಲ್ಲಿ ಕರ್ತವ್ಯದಲ್ಲಿದ್ದ ಕೆ.ಎಸ್.ಐ.ಎಸ್.ಎಫ್ ನ ಇನ್ಸ್’ಪೆಕ್ಟರ್ ಜಗದೀಶ್, ಪಿಎಸ್ಐ ಪ್ರಭು ಎಸ್, ಸಿಬ್ಬಂದಿಗಳಾದ ಕಪ್ಪೇರ ಬಸವರಾಜ್ ಅವರು ಅನುಮಾನದ ಮೇರೆಗೆ ಆರೋಪಿಯನ್ನು ತಪಾಸಣೆಗೊಳಪಡಿಸಿದ್ದಾರೆ.

ಈ ವೇಳೆ ಆತನ ಒಳ ಉಡುಪಿನಲ್ಲಿ, ಕಪ್ಪು ಗಮ್ ಟೇಪ್ ನಲ್ಲಿ ಸುತ್ತಿಟ್ಟಿದ್ದ ಗಾಂಜಾ ಪತ್ತೆಯಾಗಿದೆ. ಒಟ್ಟಾರೆ 170 ಗ್ರಾಂ ತೂಕದ ಗಾಂಜಾವನ್ನು ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ.

ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು, ತುಂಗಾನಗರ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಈ ಕುರಿತಂತೆ ಜೈಲ್ ನ ಅಧೀಕ್ಷಕರಾದ ಡಾ. ಎಸ್ ರಂಗನಾಥ್ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Shivamogga, November 21: An interesting incident took place on November 20 when a Shivamogga Central Jail employee was caught by the prison security guards after arriving at the jail with marijuana in his underwear!

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →