Doddapet police station conducts special operation in RML Nagar, Milaghatta area of Shivamogga: Four people found with marijuana! ಶಿವಮೊಗ್ಗದ ಆರ್’ಎಂಎಲ್ ನಗರ, ಮಿಳಘಟ್ಟ ಸುತ್ತಮುತ್ತ ದೊಡ್ಡಪೇಟೆ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ : ಗಾಂಜಾ ಸೇವಿಸಿದ್ದ ನಾಲ್ವರು ಪತ್ತೆ!

shimoga news | ಶಿವಮೊಗ್ಗದ RML ನಗರ, ಮಿಳಘಟ್ಟ ಸುತ್ತಮುತ್ತ ದೊಡ್ಡಪೇಟೆ ಠಾಣೆ ಪೊಲೀಸರ ವಿಶೇಷ ಕಾರ್ಯಾಚರಣೆ : ಗಾಂಜಾ ಸೇವಿಸಿದ್ದ ನಾಲ್ವರು ಪತ್ತೆ!

ಶಿವಮೊಗ್ಗ (shivamogga), ನವೆಂಬರ್ 21: ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು, ಠಾಣಾ ವ್ಯಾಪ್ತಿಯ ವಿವಿಧೆಡೆ ಪುಂಡ-ಪೋಕರಿಗಳ ಹಾವಳಿ ಮಟ್ಟ ಹಾಕಲು ಖಡಕ್ ಕ್ರಮಕೈಗೊಂಡಿದ್ದಾರೆ. ರಾತ್ರಿ ವೇಳೆ ಏರಿಯಾ ಡಾಮಿನೇಷನ್ ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

ನವೆಂಬರ್ 19 ರಂದು ಠಾಣಾ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣ, ಕೆಎಸ್ಆರ್’ಟಿಸಿ ಬಸ್ ನಿಲ್ದಾಣ, ಆರ್’ಎಂಎಲ್ ನಗರ, ಬುದ್ದ ನಗರ, ಮಿಳಘಟ್ಟ ಏರಿಯಾಗಳಲ್ಲಿ ಏರಿಯಾ ಡಾಮಿನೇಷನ್ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.

ಈ ವೇಳೆ ಗಾಂಜಾ ಸೇವನೆ ಮಾಡಿದ್ದ ಶಂಕೆ ಮೇಲೆ ಒಟ್ಟಾರೆ 24 ಜನರನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ. ತದನಂತರ ವೈದ್ಯಕೀಯ ಪರೀಕ್ಷೆ ವೇಳೆ 4 ಜನರು ಗಾಂಜಾ ಸೇವಿಸಿದ್ದು ದೃಢಪಟ್ಟಿದ್ದು, ಅವರ ವಿರುದ್ದ ಕೇಸ್ ದಾಖಲಿಸಿದ್ದಾರೆ.

ಕಠಿಣ ಕ್ರಮ : ‘ಶಿವಮೊಗ್ಗ ಜಿಲ್ಲೆಯಾದ್ಯಂತ ಏರಿಯಾ ಡಾಮಿನೇಷನ್ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ. ಸಾರ್ವಜನಿಕವಾಗಿ ಉಪಟಳ ನೀಡುವವರು, ಕಾನೂನು – ಸುವ್ಯವಸ್ಥೆಗೆ ಭಂಗ ತರುವವರು, ಮಾದಕ ದ್ರವ್ಯ ಸೇವನೆ ಮಾಡುವವರು

ಹಾಗೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಯಿರುವ ಸಂಶಯಾಸ್ಪದ ವ್ಯಕ್ತಿಗಳ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಇಲಾಖೆಯು ನವೆಂಬರ್ 20 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದೆ.

Shivamogga, November 21: The Doddapet police station in Shivamogga has taken drastic measures to curb the menace of hooligans and hooligans in various places within the police station limits. They have launched a special area domination operation at night.

On November 19, a special area domination operation was conducted in the private bus stand, KSRTC bus stand, RML Nagar, Buddha Nagar, and Milaghatta areas within the police station limits.

Prison staff caught bringing marijuana to Shivamogga Central Jail! ಶಿವಮೊಗ್ಗ ಸೆಂಟ್ರಲ್ ಜೈಲ್ ಸಿಬ್ಬಂದಿ ಅರೆಸ್ಟ್ : ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..?! Previous post shimoga central jail news | ಶಿವಮೊಗ್ಗ ಸೆಂಟ್ರಲ್ ಜೈಲ್ ಸಿಬ್ಬಂದಿ ಅರೆಸ್ಟ್ : ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..?!
Shivamogga: Power outages in various places on November 24th! ಶಿವಮೊಗ್ಗ : ನವೆಂಬರ್ 24 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ! Next post shimoga | Power Cut News | ಶಿವಮೊಗ್ಗ : ನವೆಂಬರ್ 24 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ!