Bhadravati | Bolero vehicle overturns: 14 people injured! ಭದ್ರಾವತಿ | ಬೊಲೆರೋ ವಾಹನ ಪಲ್ಟಿ : 14 ಜನರಿಗೆ ಗಾಯ!

hosanagara news | ರಿಪ್ಪನ್’ಪೇಟೆ : ಬೈಕ್ ಅಪಘಾತ – ಓರ್ವ ಸಾವು, ಮತ್ತೋರ್ವನಿಗೆ ಗಾಯ!

ಹೊಸನಗರ (hosanagar), ಡಿಸೆಂಬರ್ 8: ಚಾಲನೆಯ ನಿಯಂತ್ರಣ ಕಳೆದುಕೊಂಡ ಬೈಕ್ ವೊಂದು ರಸ್ತೆ ಬದಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ನಲ್ಲಿದ್ದ ಓರ್ವ ಮೃತಪಟ್ಟು ಮತ್ತೋರ್ವ ಗಾಯಗೊಂಡ ಘಟನೆ, ಹೊಸನಗರ ತಾಲೂಕಿನ ರಿಪ್ಪನ್’ಪೇಟೆ ಸಮೀಪದ ಕೋಡ್ರಿಗೆ ಹೊಳೆ ಸಮೀಪ ನಡೆದಿದೆ.

ಹೆದ್ದಾರಿಪುರ ಬಳಿಯ ಗಿಣಸೆ ಗ್ರಾಮದ ನಿವಾಸಿ ಮಂಜುನಾಥ್ (32) ಮೃತಪಟ್ಟವರೆಂದು ಗುರುತಿಸಲಾಗಿದೆ. ಲೋಹಿತ್ (29) ಎಂಬುವರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿರೋ ಹೊಂಡಾ ಸ್ಪ್ಲೆಂಡರ್ ಬೈಕ್ ನಲ್ಲಿ ಹರತಾಳು ಗ್ರಾಮದಿಂದ ಹೆದ್ದಾರಿಪುರಕ್ಕೆ ಇಬ್ಬರು ಆಗಮಿಸುತ್ತಿದ್ದ ವೇಳೆ, ಚಾಲನೆ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ಮರಕ್ಕೆ ಬೈಕ್ ಡಿಕ್ಕಿಯಾಗಿದೆ.

ಘಟನೆಯಲ್ಲಿ ಮಂಜುನಾಥ್ ಅವರಿಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಈ ಸಂಬಂಧ ರಿಪ್ಪನ್’ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hosanagara, December 8: A motorcycle rider died and another was injured when he lost control of his bike and crashed into a tree on the side of the road. The incident took place near Kodri Hole near Rippanpet in Hosanagara taluk.

Shivamogga: Thieves inject a cow and take it away in a car! *Scene caught on CCTV camera ಶಿವಮೊಗ್ಗ : ಆಕಳಿಗೆ ಇಂಜೆಕ್ಷನ್ ಚುಚ್ಚಿ ಕಾರಲ್ಲಿ ಹೊತ್ತೊಯ್ದ ಕಳ್ಳರು! *ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ Previous post shimoga news | ಶಿವಮೊಗ್ಗ : ಆಕಳಿಗೆ ಇಂಜೆಕ್ಷನ್ ಚುಚ್ಚಿ ಕಾರಲ್ಲಿ ಹೊತ್ತೊಯ್ದ ಕಳ್ಳರು!
Shivamogga ranks 6th among the top 10 cities in the country with clean air! ಸ್ವಚ್ಚ ಗಾಳಿ ಹೊಂದಿರುವ ದೇಶದ ಟಾಪ್ – 10 ನಗರಗಳಲ್ಲಿ ಶಿವಮೊಗ್ಗಕ್ಕೆ 6 ನೇ ಸ್ಥಾನ! Next post shimoga news | ಸ್ವಚ್ಛ ಗಾಳಿ ಹೊಂದಿರುವ ದೇಶದ ಟಾಪ್ – 10 ನಗರಗಳಲ್ಲಿ ಶಿವಮೊಗ್ಗಕ್ಕೆ 6 ನೇ ಸ್ಥಾನ!