ಶಿವಮೊಗ್ಗ (shimoga), ಡಿಸೆಂಬರ್ 31: ಬೊಲೆರೊ ವಾಹನವೊಂದು ರಸ್ತೆ ಬದಿ ಪಲ್ಟಿಯಾಗಿ ಬಿದ್ದ ಪರಿಣಾಮ, ಅದರಲ್ಲಿದ್ದ 14 ಜನರು ಗಾಯಗೊಂಡ ಘಟನೆ ಭದ್ರಾವತಿ ತಾಲೂಕಿನ ಅತ್ತಿಗುಂದ – ಬೆಳ್ಳಿಗೆರೆ ರಸ್ತೆಯಲ್ಲಿ ಡಿಸೆಂಬರ್ 31 ರ ಬೆಳಿಗ್ಗೆ ನಡೆದಿದೆ.
ಘಟನೆಯಲ್ಲಿ 4 ಜನರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು, ಅವರನ್ನು ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಾಳುಗಳನ್ನು ಭದ್ರಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೂಡ್ಲಿಗೆರೆಯಿಂದ ಉದ್ದಾಂಜನೇಯ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ಕಳೆದುಕೊಂಡ ಬೊಲೆರೋ ವಾಹನ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಕಳೆದ ಒಂದು ವಾರದ ಹಿಂದಷ್ಟೆ ಬಿಸಿಲುಮನೆಯ ಬಳಿ ಬೊಲೆರೋ ವಾಹನ ಪಲ್ಟಿಯಾಗಿ ಬಿದ್ದ ಘಟನೆ ನಡೆದಿತ್ತು.
ಚಾಲಕನ ಅಜಾಗರೂಕ ಚಾಲನೆಯೇ ಅವಘಡಕ್ಕೆ ಕಾರಣವೆಂದು ಹೇಳಲಾಗಿದ್ದು, ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ. ಘಟನಾ ಸ್ಥಳಕ್ಕೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
Bhadravati, December 31: An incident occurred on the morning of December 31 on the Attigunda-Belligere road in Bhadravati taluk, in which 14 people were injured when a Bolero vehicle overturned on the side of the road. Four people were seriously injured in the incident and have been admitted to the Government Meggan Hospital in Shivamogga. The remaining injured have been admitted to Bhadravati Hospital.


2 Comments on “Bhadravati news | ಬೊಲೆರೋ ಪಲ್ಟಿ : 14 ಜನರಿಗೆ ಗಾಯ!”
Comments are closed.