shimoga news | ಶಿವಮೊಗ್ಗ : ತಿಂಡಿ – ತಿನಿಸು ತಯಾರಿಕಾ ಘಟಕದಲ್ಲಿ ದಿಡೀರ್ ತಪಾಸಣೆ!

Shivamogga: Sudden inspection at snack-food manufacturing unit! ಶಿವಮೊಗ್ಗ : ತಿಂಡಿ – ತಿನಿಸು ತಯಾರಿಕಾ ಘಟಕದಲ್ಲಿ ದಿಡೀರ್ ತಪಾಸಣೆ!

ಶಿವಮೊಗ್ಗ (shivamogga), ಜನವರಿ 1:  ತಿಂಡಿ – ತಿನಿಸು ತಯಾರಿಸುವ ಫುಡ್ ಪ್ರಾಡಕ್ಟ್ ಘಟಕಕ್ಕೆ ಅಧಿಕಾರಿಗಳ ತಂಡ ದಿಡೀರ್ ಭೇಟಿಯಿತ್ತು ತಪಾಸಣೆ ನಡೆಸಿದ ಘಟನೆ, ಡಿಸೆಂಬರ್ 31 ರಂದು ಗಾಂಧಿ ಬಜಾರ್ ನ ನಾಗಪ್ಪ ಕೇರಿಯಲ್ಲಿ ನಡೆದಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಅಂಕಿತ ಅಧಿಕಾರಿ, ಆಹಾರ ಇಲಾಖೆ ಉಪ ನಿರ್ದೇಶಕರು, ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕರು, ಕೋಟೆ ಪೊಲೀಸ್ ಠಾಣೆ ಸಿಬ್ಬಂದಿಗಳು ಕಾರ್ಯಾರಣೆಯಲ್ಲಿ ಭಾಗಿಯಾಗಿದ್ದರು.

ಫುಡ್ ಪ್ರಾಡಕ್ಟ್ ಘಟಕದಲ್ಲಿ ತಿಂಡಿ – ತಿನಿಸು ತಯಾರಿಕೆ ವೇಳೆ ನಿಯಮಗಳ ಪಾಲನೆ ಮಾಡದಿರುವುದು ಕಂಡುಬಂದಿದೆ. ಆಹಾರದ ಗುಣಮಟ್ಟ ಕಾಯ್ದುಕೊಳ್ಳದಿರುವುದು ಮತ್ತು ಕೇಂದ್ರದಲ್ಲಿ ಸ್ವಚ್ಛತೆಯಿಲ್ಲದಿರುವುದು ಪತ್ತೆಯಾಗಿದೆ.

ತಿಂಡಿ – ತಿನಿಸು ತಯಾರಿಕೆ ವೇಳೆ ನಿಯಮಗಳ ಪಾಲನೆ ಮಾಡುವಂತೆ ಅಧಿಕಾರಿಗಳ ತಂಡ ಕೇಂದ್ರದ ಮಾಲೀಕರಿಗೆ ಎಚ್ಚರಿಕೆ ನೀಡಿದೆ.

Shivamogga, January 1: An incident occurred on December 31 at Nagappa Keri in Gandhi Bazaar when a team of officials made a surprise visit to a food product unit that manufactures snacks and dishes.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

One Comment on “shimoga news | ಶಿವಮೊಗ್ಗ : ತಿಂಡಿ – ತಿನಿಸು ತಯಾರಿಕಾ ಘಟಕದಲ್ಲಿ ದಿಡೀರ್ ತಪಾಸಣೆ!”

Comments are closed.