shimoga news | ಶಿವಮೊಗ್ಗ : ಕಾರು ಡಿಕ್ಕಿ – ಬೈಕ್ ನಲ್ಲಿದ್ದ ಇಬ್ಬರು ಕಾರ್ಮಿಕರು ಸಾವು!

Shivamogga : Medical College Student Dies in Accident – Another Injured! shimoga accident news | ಶಿವಮೊಗ್ಗ : ಅಪಘಾತದಲ್ಲಿ ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಸಾವು - ಮತ್ತೋರ್ವರಿಗೆ ಗಾಯ!

ಶಿವಮೊಗ್ಗ (shivamogga), ಜನವರಿ 27: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್ ನಲ್ಲಿದ್ದ ಇಬ್ಬರು ಮೃತಪಟ್ಟು, ಮತ್ತೋರ್ವರು ಗಂಭೀರವಾಗಿ ಗಾಯಗೊಂಡ ಘಟನೆ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಕಳೆದ ಭಾನುವಾರ ನಡೆದಿದೆ.

ಉತ್ತರ ಪ್ರದೇಶ ರಾಜ್ಯದ ಡಿಯರ್ ಜಿಲ್ಲೆಯ ಲಂಗರ ಬಜಾರ್ ಪೋಸ್ಟ್ ನ ಬೆಂಕಿ ಸಿಂಗ್ ವಿ ಗ್ರಾಮದ ಮನೋಜ್ ಚೌರಾಸಿಯ (33) ಮತ್ತು ಬಿಹಾರದ ಪೂರ್ವ ಚಂಪರಣ್ ಜಿಲ್ಲೆಯ ಅರವಿಂದ್ ಶರ್ಮಾ (32) ಮೃತಪಟ್ಟವರೆಂದು ಗುರುತಿಸಲಾಗಿದೆ.

ಉತ್ತರ ಪ್ರದೇಶ ರಾಜ್ಯದ ಮತ್ತೋರ್ವ ಕಾರ್ಮಿಕ ದೀನನಾಥ್ ಕುಮಾರ್ ಯಾದವ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂವರು ಜಯಂತಿ ಗ್ರಾಮದಲ್ಲಿರುವ ಫ್ಯಾಕ್ಟರಿಯೊಂದರಲ್ಲಿ ಕಳೆದೊಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದರು. ಎಂದಿನಂತೆ ಬೈಕ್ ನಲ್ಲಿ ಫ್ಯಾಕ್ಟರಿಗೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ, ಕಾರು ಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga: Car Collision – Two Workers on Bike Killed! | Shivamogga, January 27: In a collision between a car and a bike, two workers riding the bike were killed and another was seriously injured. The incident occurred last Sunday near the Machenahalli Industrial Area under the jurisdiction of the Tunganagar Police Station. The deceased have been identified as Manoj Chaurasia (33) from Benki Singh V village, Langar Bazaar Post, Deoria district, Uttar Pradesh, and Arvind Sharma (32) from East Champaran district, Bihar. Dinananth Kumar Yadav was injured and admitted to the hospital. All three had been working at a factory in Jayanti village for the past year. As usual, they were traveling to the factory on a bike when the car rammed into them. A case has been registered at the Tunganagar Police Station regarding the incident.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →