hosanagara BREAKING NEWS | ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಬೆಂಕಿ : ಭಾರೀ ದುರಂತದಿಂದ ಪಾರಾದ ಪ್ರಯಾಣಿಕರು!

: A private bus traveling from Hosanagar in Shivamogga district to Bengaluru was completely gutted in a fire accident on the night of January 27, around 10:30 p.m., near Arasalu–Suduru villages in Hosanagar taluk. Miraculously, all passengers on board escaped with their lives. About 30 passengers sustained injuries and were admitted to hospitals. Among them, 10 have been shifted to Shivamogga city hospital, according to reports.

ಹೊಸನಗರ (shimoga), ಜನವರಿ 28: ಶಿವಮೊಗ್ಗ ಜಿಲ್ಲೆಯ ಹೊಸನಗರದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ವೊಂದು ಬೆಂಕಿಯಿಂದ ಸುಟ್ಟು ಕರಕಲಾದ ಘಟನೆ, ಜನವರಿ 27 ರ ರಾತ್ರಿ 10. 30 ರ ಸರಿಸುಮಾರಿಗೆ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅರಸಾಳು – ಸೂಡೂರು ಗ್ರಾಮಗಳ ನಡುವೆ ನಡೆದಿದೆ.

ಘಟನೆಯಲ್ಲಿ ಬಸ್ ನಲ್ಲಿದ್ದ ಎಲ್ಲ ಪ್ರಯಾಣಿಕರು ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಮಾರು 30 ಪ್ರಯಾಣಿಕರಿಗೆ ಗಾಯವಾಗಿದ್ದು, ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಲ್ಲಿ 10 ಜನರನ್ನು ಶಿವಮೊಗ್ಗ ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಏನೀದು ಘಟನೆ? : ಹೊಸನಗರದಿಂದ ಬೆಂಗಳೂರಿಗೆ ಅನ್ನಪೂರ್ಣೇಶ್ವರಿ ಖಾಸಗಿ ಸ್ಲೀಪರ್ ಬಸ್ ರಾತ್ರಿ ಹೊರಟಿತ್ತು. ಸುಮಾರು 40 ಪ್ರಯಾಣಿಕರಿದ್ದರು. ಅರಸಾಳು – ಸೂಡೂರು ಗ್ರಾಮಗಳ ನಡುವೆ ಬಸ್ ಸಂಚರಿಸುತ್ತಿದ್ದ ವೇಳೆ, ಬಸ್ ನಲ್ಲಿ ದಿಡೀರ್ ಬೆಂಕಿ ಕಾಣಿಸಿಕೊಂಡಿದೆ.

ಕೆಲ ಪ್ರಯಾಣಿಕರು ಆತಂಕದಿಂದ ಕಿರುಚಿಕೊಂಡಿದ್ದಾರೆ. ತಕ್ಷಣವೇ ಬಸ್ ಚಾಲಕ ಬಸ್ ನ್ನು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾನೆ. ಅಪಾಯದ ಮುನ್ಸೂಚನೆ ಅರಿತ ಪ್ರಯಾಣಿಕರು ಬಸ್ ಎಕ್ಸಿಟ್ ಡೋರ್, ಕಿಟಕಿಗಳ ಮೂಲಕ ಹೊರಕ್ಕೆ ಧುಮುಕಿದ್ದಾರೆ ಎನ್ನಲಾಗಿದೆ.

ಕ್ಷಣಮಾತ್ರದಲ್ಲಿಯೇ ಇಡೀ ಬಸ್ ಬೆಂಕಿಯ ಕೆನ್ನಾಲಿಗೆಯಿಂದ ಧಗಧಗನೆ ಉರಿಯಲಾರಂಭಿಸಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಬಸ್ ಗೆ ಹೊತ್ತಿದ್ದ ಬೆಂಕಿ ನಂದಿಸುವಲ್ಲಿ ಸಫಲವಾಗಿದೆ.

ರಿಪ್ಪನ್’ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

*** ಬಸ್ ಗೆ ಬೆಂಕಿ ಹೊತ್ತಿದ ವಿಷಯ ತಿಳಿಯುತ್ತಿದ್ದಂತೆ ಹೊಸನಗರ ಅಗ್ನಿಶಾಮಕ ದಳದ ಠಾಣಾಧಿಕಾರಿ ಆನಂದಪ್ಪ ನೇತೃತ್ವದ ತಂಡ ಸ್ಥಳಕ್ಕಾಗಮಿಸಿದೆ. ಹಾಗೆಯೇ ಹೆಚ್ಚುವರಿಯಾಗಿ ಶಿವಮೊಗ್ಗದಿಂದಲೂ ಅಗ್ನಿಶಾಮಕ ದಳದ ತಂಡ ಆಗಮಿಸಿ, ಬಸ್ ಗೆ ಹೊತ್ತಿದ್ದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ. ಕಾರ್ಯಾಚರಣೆಯಲ್ಲಿ ಶಿವಮೊಗ್ಗದ ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ರಾಜು, ಡಿಎಫ್ಓ ಅಶೋಕ್ ಕುಮಾರ್, ಎಎಫ್’ಎಸ್ ವಿಲ್ಪ್ರೇಡ್, ಹೊಸನಗರ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ರಾಜೇಶ್, ರವಿ, ರವೀಂದ್ರ, ಮಧು ಇತರರು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Private Bus to Bengaluru Catches Fire: Passengers Escape Major Tragedy

Hosanagar (Shivamogga), January 28: A private bus traveling from Hosanagar in Shivamogga district to Bengaluru was completely gutted in a fire accident on the night of January 27, around 10:30 p.m., near Arasalu–Suduru villages in Hosanagar taluk. Miraculously, all passengers on board escaped with their lives. About 30 passengers sustained injuries and were admitted to hospitals. Among them, 10 have been shifted to Shivamogga city hospital, according to reports.

What happened? The Annapoorneshwari private sleeper bus had departed from Hosanagar to Bengaluru with around 40 passengers. While passing between Arasalu and Suduru villages, the bus suddenly caught fire.Some passengers screamed in panic. The driver immediately rammed the bus into a roadside tree to bring it to a halt. Realizing the danger, passengers rushed out through the exit door and windows. Within moments, the entire bus was engulfed in flames. Firefighters arrived at the scene and successfully extinguished the blaze. The incident occurred within the jurisdiction of Ripponpete Police Station. Further details are awaited.

Firefighting Operation (Shivamogga–Hosanagar): As soon as news of the fire broke, a team led by Hosanagar Fire Station Officer Anandappa reached the spot. Additionally, a team from Shivamogga also arrived and helped douse the flames. The operation involved Shivamogga Regional Fire Officer Raju, DFO Ashok Kumar, AFS Wilfred, and Hosanagar fire staff members Rajesh, Ravi, Ravindra, Madhu, among others.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →