shimoga news | ಶಿವಮೊಗ್ಗ : ಮಹಿಳೆಯ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಎಸ್ಪಿ ಸನ್ಮಾನ

Shivamogga: Police Personnel Honored by SP for Saving Woman’s Life ಶಿವಮೊಗ್ಗ : ಮಹಿಳೆಯ ಜೀವ ಉಳಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಎಸ್ಪಿ ಸನ್ಮಾನ

ಶಿವಮೊಗ್ಗ (shivamogga), ಜನವರಿ 31: ಕಳೆನಾಶಕ ಸೇವಿಸಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಮಹಿಳೆಯೋರ್ವರನ್ನು ಆಸ್ಪತ್ರೆಗೆ ದಾಖಲಿಸಿ ಜೀವ ರಕ್ಷಿಸಿದ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೆ, ಎಸ್ಪಿ ನಿಖಿಲ್ ಬಿ ಅವರು ಸನ್ಮಾನಿಸಿ ಅಭಿನಂದಿಸಿದ್ದಾರೆ.

112 ಇಆರ್’ಎಸ್ಎಸ್ ವಾಹನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತುಂಗಾನಗರ ಪೊಲೀಸ್ ಠಾಣೆ ಹೆಡ್ ಕಾನ್ಸ್’ಟೇಬಲ್ ಶಬ್ಬೀರ್ ಬೇಗ್  ಹಾಗೂ ಡಿಎಆರ್ ಎ ಹೆಚ್ ಸಿ ಜಯಂತ್ ಎಂಬುವರೇ ಜೀವ ರಕ್ಷಕ ಸಿಬ್ಬಂದಿಗಳಾಗಿದ್ದಾರೆ.

ಶಿವಮೊಗ್ಗದ ಹೊರವಲಯ ಮಲವಗೊಪ್ಪದಲ್ಲಿ ಮಹಿಳೆಯೋರ್ವರು ಕಳೆನಾಶಕ ಸೇವಿಸಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಈ ಇಬ್ಬರು ಸಿಬ್ಬಂದಿಗಳು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಜೀವ ಉಳಿಸಿದ್ದರು.

ಸದರಿ ಸಿಬ್ಬಂದಿಗಳ ಸಕಾಲಿಕ ಕ್ರಮ ಹಾಗೂ ಕರ್ತವ್ಯ ನಿಷ್ಠೆ ಮೆಚ್ಚಿದ ಎಸ್ಪಿ ಅವರು, ತಮ್ಮ ಕಚೇರಿಯಲ್ಲಿ ಇಬ್ಬರನ್ನು ಆತ್ಮೀಯವಾಗಿ ನಸ್ಮಾನಿಸಿ ಅಭಿನಂದಿಸಿದ್ದಾರೆ.

Shivamogga: Police Personnel Honored by SP for Saving Woman’s Life

Shivamogga, January 31: Two police personnel who saved the life of a woman battling between life and death after consuming pesticide were honored and congratulated by Superintendent of Police Nikhil B. The life-saving officers are Head Constable Shabbir Beg, serving in the Tunganagar Police Station with the 112 ERSS vehicle, and DAR Head Constable Jayanth. The incident took place at Malavagoppa on the outskirts of Shivamogga, where a woman had consumed pesticide. Upon receiving information, the two officers rushed to the spot, admitted her to the hospital, and saved her life. Appreciating their timely action and dedication to duty, the SP warmly honored and congratulated them at his office.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →