shimoga news | ಶಿವಮೊಗ್ಗ : ವಿವಿಧೆಡೆ ಲೋಕಾಯುಕ್ತ ದಾಳಿ – ತಪಾಸಣೆ!

Shivamogga: Lokayukta Raids at Multiple Locations – Inspection!ಶಿವಮೊಗ್ಗ : ವಿವಿಧೆಡೆ ಲೋಕಾಯುಕ್ತ ದಾಳಿ – ತಪಾಸಣೆ!

ಶಿವಮೊಗ್ಗ, ಏಪ್ರಿಲ್ 07: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಶೋಭಾ ಕೆ ಆರ್ ಅವರಿಗೆ ಸೇರಿದ ಮನೆ ಸೇರಿದಂತೆ ವಿವಿಧ ಸ್ಥಳಗಳ ಮೇಲೆ, ಏಪ್ರಿಲ್ 07 ರಂದು ಲೋಕಾಯುಕ್ತ ತಂಡ ದಿಡೀರ್ ದಾಳಿ ನಡೆಸಿ ತಪಾಸಣೆ ನಡೆಸುತ್ತಿರುವ ಸಂಗತಿ ತಿಳಿದುಬಂದಿದೆ.

ಶಿವಮೊಗ್ಗ, ಶಿಕಾರಿಪುರ, ಸಾಗರ ಸೇರಿದಂತೆ ಒಟ್ಟು ಐದು ಸ್ಥಳಗಳಲ್ಲಿ ಲೋಕಾಯುಕ್ತ ತಂಡ ಏಕಕಾಲಕ್ಕೆ ದಾಳಿ ನಡೆಸಿ, ತಪಾಸಣೆ ನಡೆಸುತ್ತಿವೆ. ಅಧಿಕಾರಿಯ ಆಪ್ತ ಸಹಾಯಕನ ಮನೆಯಲ್ಲಿಯೂ ಲೋಕಾಯುಕ್ತ ತಂಡ ತಪಾಸಣೆ ನಡೆಸುತ್ತಿರುವ ಮಾಹಿತಿ ತಿಳಿದುಬಂದಿದೆ.

ದಾವಣಗೆರೆ ಲೋಕಾಯುಕ್ತ ಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಶಿವಮೊಗ್ಗ, ಹಾವೇರಿ, ದಾವಣಗೆರೆ ಜಿಲ್ಲೆಗಳ ಲೋಕಾಯುಕ್ತ ಅಧಿಕಾರಿ – ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ ಎಂದು ತಿಳಿದುಬಂದಿದ್ದು, ದಾಳಿಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.

Shivamogga: Lokayukta Raids at Multiple Locations – Inspection!

Shivamogga, April 07: It has come to light that on April 07, the Lokayukta team carried out sudden raids and inspections at various places, including the residence of Shobha K.R., District Officer of the Backward Classes Welfare Department.

Simultaneous raids were conducted at a total of five locations including Shivamogga, Shikaripura, and Sagara. Reports also indicate that the Lokayukta team inspected the house of the officer’s close aide.

The operation was led by the Davanagere Lokayukta SP. Lokayukta officials and staff from Shivamogga, Haveri, and Davanagere districts participated in the operation. Further details regarding the raids are yet to be made available.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *