ಶಿವಮೊಗ್ಗ (shivamogga), ಏಪ್ರಿಲ್ 18: ಭದ್ರಾವತಿಯ ಭದ್ರಾ ನದಿಯಲ್ಲಿ 12-10-2025 ರಂದು ಕಾಲು ಜಾರಿ ಬಿದ್ದು ಮೃತಪಟ್ಟಿದ್ದ ಶಿವಮೊಗ್ಗದ ಮಾಚೇನಹಳ್ಳಿ ಕೆಎಸ್ಆರ್’ಪಿ 8 ನೇ ಪಡೆ ಪೊಲೀಸ್ ಸಿಬ್ಬಂದಿ ಎಲ್ ಚಂದ್ರಶೇಖರ್ ಅವರ ಕುಟುಂಬಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 1 ಕೋಟಿ ರೂ. ಪರಿಹಾರ ಮೊತ್ತದ ಚೆಕ್ ವಿತರಿಸಿದೆ.
ಮಾಚೇನಹಳ್ಳಿಯ ಕೆಎಸ್ಆರ್ಪಿ ಆವರಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದ ವೇಳೆ ಮೃತ ಎಲ್ ಚಂದ್ರಶೇಖರ್ರವರ ಪತ್ನಿ ಸುಮಲತಾ ಮತ್ತು ಅವರ ಮಕ್ಕಳಿಗೆ 1 ಕೋಟಿ ರೂ. ಚೆಕ್ನ್ನು ವಿತರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್ಪಿ ನಿಖಿಲ್ ಬಿ ಅವರು ಮಾತನಾಡಿ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರ್ಕಾರದಿಂದ ಎಂಒಯು ಮಾಡಿಕೊಂಡ ಬ್ಯಾಂಕ್ಗಳು ನೀಡುವ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಮೃತ ಎಲ್ ಚಂದ್ರಶೇಖರ್ರವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಿವಮೊಗ್ಗ ಶಾಖೆಯಲ್ಲಿ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಖಾತೆದಾರರಾಗಿರುತ್ತಾರೆ. ಆದ್ದರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಈ ಸೌಲಭ್ಯ ದೊರೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಕೆಎಸ್ಆರ್ಪಿ 8 ನೇ ಪಡೆಯ ಕಮಾಂಡೆಂಟ್ ಎಸ್ ಯುವಕುಮಾರ್ ಅವರು ಮಾತನಾಡಿ, ನೌಕರರು ಕರ್ತವ್ಯ ನಿರ್ವಹಣೆ ವೇಳೆ ಆಕಸ್ಮಿಕವಾಗಿ ಅಪಘಾತ ಹಾಗೂ ದುರ್ಘಟನೆಗಳು ಸಂಭವಿಸಿದಾಗ ಕುಟುಂಬವು ಆರ್ಥಿಕ ದುಸ್ಥಿತಿಗೆ ಒಳಗಾಗದಂತೆ ತಡೆಯುವ ಸಲುವಾಗಿ ಎಲ್ಲ ಅಧಿಕಾರಿ, ಸಿಬ್ಬಂದಿಗಳು ಕಡ್ಡಾಯವಾಗಿ ಪಿಎಂಎಸ್ಬಿವೈ ಮತ್ತು ಪಿಎಂಜೆಜೆಬಿವೈ ವಿಮೆ ಹಾಗೂ ಪೊಲೀಸ್ ಸ್ಯಾಲರಿ ಪ್ಯಾಕೇಜ್ಗೆ ನೋಂದಣಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದರು.
ಡೆಪ್ಯೂಟಿ ಜನರಲ್ ಮ್ಯಾನೇಜರ್ ಕೃಷ್ಣ ಮೋಹನ್ ಮುಚಾರ್ಲರವರು ಎಲ್ ಚಂದ್ರಶೇಖರ್ರವರ ಪತ್ನಿ ಸುಮಲತಾ ಮತ್ತು ಅವರ ಮಕ್ಕಳಿಗೆ 1 ಕೋಟಿ ರೂ. ಚೆಕ್ನ್ನು ವಿತರಣೆ ಮಾಡಿದರು. ಈ ವೇಳೆ ಎಸ್ಬಿಐ ನ ಪ್ರಾದೇಶಿಕ ಪ್ರಬಂಧಕರು ವಿಜಯ್ ಸಾಯಿ ಮದುಗುಲ, ಎಸ್ಬಿಐ(ಡಿ-ವಿಎಎಸ್)ಮುಖ್ಯ ಪ್ರಬಂಧಕರಾದ ಕೆ.ಪುಷ್ಪಲತ, ಎಸ್ಬಿಐ ಬಿ ಹೆಚ್ ರಸ್ತೆ ಶಾಖೆಯ ಮುಖ್ಯ ಪ್ರಬಂಧಕರಾದ ಪ್ರಕಾಶ್ಕುಮಾರ್ ಮತ್ತು 8 ನೇ ಪಡೆಯ ಅಧಿಕಾರಿ/ಸಿಬ್ಬಂದಿಗಳು ಹಾಜರಿದ್ದರು.
Shivamogga KSRP Policeman who drowned: Rs. 1 crore. Compensation distributed to family
Shivamogga A.18: State Bank of India has distributed a cheque of Rs. 1 crore as compensation to the family of Machenahalli KSRP 8th Battalion Policeman L Chandrashekhar, who died after slipping and falling in the Bhadra river of Bhadravati on 12-10-2025.

