ಶಿವಮೊಗ್ಗ (shivamogga) ಮೇ 12: ಶಿವಮೊಗ್ಗ ನಗರ ಉಪವಿಭಾಗ-1, ಘಟಕ-2 ರ ವ್ಯಾಪ್ತಿಯಲ್ಲಿ ಮೇ 13 ಮತ್ತು 14 ರಂದು ವಿದ್ಯುತ್ ಕಂಬಗಳ ತೆರವು ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಮೇ 13 ಹಾಗೂ 14 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಾಹಿತಿ ನೀಡಿದೆ.
ವಿವರ : ಸೀತಾರಾಮ ಕಲ್ಯಾಣ ಮಂದಿರ ಅಡ್ಡರಸ್ತೆ, ಶನಿ ಮಹಾತ್ಮ ದೇವಸ್ಥಾನ ಅಡ್ಡರಸ್ತೆ, ವಿದ್ಯುತ್ ಪರೀವೀಕ್ಷಕರ ಕಚೇರಿ ರಸ್ತೆ, ವಾತ್ಸಲ್ಯ ಆಸ್ಪತ್ರೆ,
ಮಲ್ಲಿಕಾರ್ಜುನ ಚಿತ್ರಮಂದಿರ ಅಡ್ಡರಸ್ತೆ, ಪಾರ್ಕ್ ಬಡಾವಣೆ ಹಾಗೂ ದುರ್ಗಿಗುಡಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Power outage in various places in Shivamogga city on May 13-14
Shivamogga May 12: MESCOM has informed that the work of clearing electric poles has been carried out on May 13 and 14 in the limits of Shivamogga city subdivision-1, unit-2.
In this context, it has been informed that there will be power outage in the following areas on May 13 and 14 from 10 am to 2 pm.
Details: Sitarama Kalyana Mandir Crossroad, Shani Mahatma Temple Crossroad, Electricity Inspector’s Office Road, Vatsalya Hospital, Mallikarjuna Cinema Crossroad, Park Layout and the surrounding areas of Durgigudi. MESCOM has requested the public to cooperate.

