shiralkoppa news | ಕೃಷಿ ಪಂಪ್’ಸೆಟ್ ಗೆ ವಿದ್ಯುತ್ ಸಂಪರ್ಕ ಶಿರಾಳಕೊಪ್ಪ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿ ಎಸ್‌ಸಿ / ಎಸ್‌ಟಿ ವರ್ಗದ ರೈತರಿಂದ ಅರ್ಜಿ ಆಹ್ವಾನ

Shivamogga: Electricity facility for agricultural pump sets – Applications invited from MESCOM Kumsi Sub-Division ಶಿವಮೊಗ್ಗ : ಕೃಷಿ ಪಂಪ್ಸೆಟ್ಗಳಿಗೆ ವಿದ್ಯುತ್ ಸೌಲಭ್ಯ – ಮೆಸ್ಕಾಂ ಕುಂಸಿ ಉಪ ವಿಭಾಗದಿಂದ ಅರ್ಜಿ ಆಹ್ವಾನ
ಶಿಕಾರಿಪುರ (shikaripura), ಮೇ 15 : ಮೆಸ್ಕಾಂ ವ್ಯಾಪ್ತಿಯ ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಉಪ-ವಿಭಾಗದ ಅಡಿಯಲ್ಲಿ ಬರುವ ಎಸ್‌ಸಿ ಮತ್ತು ಎಸ್‌ಟಿ ಪಂಗಡದ ರೈತರಿಗೆ ಕೃಷಿ ಪಂಪ್‌ಸೆಟ್‌ಗಳಿಗೆ 2026-27 ನೇ ಸಾಲಿಗೆ ವಿದ್ಯುತ್ ಸೌಲಭ್ಯ ಒದಗಿಸಲು ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯ ಪ್ರಯೋಜನ ಪಡೆಯಲು ಇಚ್ಛಿಸುವ ಅರ್ಹ ರೈತರು ಅಗತ್ಯ ದಾಖಲೆಗಳಾದ ಇತ್ತೀಚಿನ ಪಹಣಿ ಪ್ರತಿ,
ಜಾತಿ ಪ್ರಮಾಣ ಪತ್ರ (ಆರ್ ಡಿ ಸಂಖ್ಯೆ ನಮೂದಿಸಿರಬೇಕು), ಆಧಾರ ಕಾರ್ಡ್ ಪ್ರತಿ,
ಕೊಳವೆ ಬಾವಿ ಇರುವ ಜಾಗದಲ್ಲಿ ನಿಂತಿರುವ ಫಲಾನುಭವಿಯ ಜಿ.ಪಿ.ಎಸ್ ಫೋಟೋ,
ರೇಷನ್ ಕಾರ್ಡ್ ಪ್ರತಿ (ಬಿಪಿಎಲ್),
ಆದಾಯ ಪ್ರಮಾಣ ಪತ್ರ, ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು,
ಬ್ಯಾಂಕ್ ಪಾಸ್‌ಬುಕ್ ಜೆರಾಕ್ಸ್ ಪ್ರತಿಯೊಂದಿಗೆ
 ಜೂನ್ 15 ರೊಳಗಾಗಿ ಶಿರಾಳಕೊಪ್ಪ ಮೆಸ್ಕಾಂ ಉಪ-ವಿಭಾಗದ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಈ ಹಿಂದೆ ಗಂಗಾ ಕಲ್ಯಾಣ ಮತ್ತು ಎಸ್‌ಸಿಪಿ/ಟಿಎಸ್‌ಪಿ ಯೋಜನೆಯಡಿ ಈಗಾಗಲೇ ವಿದ್ಯುತ್ ಸಂಪರ್ಕ ಪಡೆದಿರುವವರು ಈ ಯೋಜನೆಗೆ ಅರ್ಹರಿರುವುದಿಲ್ಲ. ಸಲ್ಲಿಕೆಯಾದ ಅರ್ಜಿಗಳನ್ನು ತಾಂತ್ರಿಕ ಕಾರ್ಯಸಾಧ್ಯತೆ ಮತ್ತು ಸಮಾಜ ಕಲ್ಯಾಣ ಇಲಾಖೆಯ ಆಯ್ಕೆ ಸಮಿತಿಯ ಅನುಮೋದನೆಗೆ ಅನುಗುಣವಾಗಿ ಆದ್ಯತೆ ಮೇರೆಗೆ ಪರಿಗಣಿಸಲಾಗುವುದು ಎಂದು ಶಿರಾಳಕೊಪ್ಪ ಮೆಸ್ಕಾಂ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ತಿಳಿಸಿದ್ದಾರೆ.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *