shimoga job news | ಶಿವಮೊಗ್ಗ : ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಉದ್ಯೋಗಾವಕಾಶ – ಮೇ 21 ರಂದು ನೇರ ಸಂದರ್ಶನ

ಶಿವಮೊಗ್ಗ : ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಉದ್ಯೋಗಾವಕಾಶ – ಮೇ 21 ರಂದು ನೇರ ಸಂದರ್ಶನ

ಶಿವಮೊಗ್ಗ, ಮೇ 16 : ಜಿಲ್ಲಾ ಉದ್ಯೋಗ ವಿನಿಮಯ ಕಚೇರಿವತಿಯಿಂದ ಮೇ 21 ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗಾಕಾಂಕ್ಷಿಗಳಿಗೆ ನೇರ ಸಂದರ್ಶನವನ್ನು ಹಮ್ಮಿಕೊಂಡಿದೆ.
ಸಂದರ್ಶನದಲ್ಲಿ ಖಾಸಗಿ ಪ್ರತಿಷ್ಠಿತ ಕಂಪನಿಯಾದ ‘ಇಸುಝ ಮೋಟಾರ್ಸ್ ಇಂಡಿಯಾ ಲಿ.,’ ಭಾಗವಹಿಸಲಿದ್ದು, ಖಾಲಿ ಇರುವ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿದೆ.
ಪಿಯುಸಿ, ಕಾಮರ್ಸ್/ ಬಿಕಾಂ, ಐಟಿಐ-ಡಿಸೆಲ್ ಫಿಟ್ಟರ್ಸ್, ಡಿಪ್ಲೊಮಾ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ಪೂರೈಸಿದ, 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.
ಸಂದರ್ಶನಕ್ಕೆ ಬರುವವರು ತಮ್ಮ ಬಯೋಡೇಟಾ ಮತ್ತು ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಗುತ್ಯಪ್ಪ ಕಾಲೋನಿ, ಪಂಪಾ ನಗರ 2ನೇ ಕ್ರಾಸ್, ಸಾಗರ ರಸ್ತೆ, ಶಿವಮೊಗ್ಗ ಇಲ್ಲಿ ಹಾಜರಾಗುವಂತೆ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ನೇರ ಸಂದರ್ಶನಕ್ಕೆ ಪ್ರವೇಶ ಉಚಿತವಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9380663606/ 9108235132 ಗಳನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shivamogga: Job opportunity in a prestigious private company – Live interview on May 21
Shivamogga, May 16: The District Employment Exchange Office has organized a live interview for job seekers on May 21 at 10 am.
A prestigious private company, ‘Isuzu Motors India Ltd.’, will participate in the interview and will select candidates for the vacant posts through live interview.
Candidates between the ages of 18 to 35 who have completed PUC, Commerce/B.Com, ITI-Diesel Fitters, Diploma in Mechanical Engineering can participate.
Those who come for the interview should appear at the District Employment Exchange Office, Guthyappa Colony, Pampa Nagar 2nd Cross, Sagar Road, Shivamogga with their biodata and Aadhaar card copies, the employment officer has informed in the announcement. Admission to the live interview is free.
The announcement states that for more information, contact mobile numbers 9380663606/ 9108235132.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *