ಶಿವಮೊಗ್ಗ (shivamogga),ಮೇ 16: ಹಾವೇರಿ, ರಾಣೇಬೆನ್ನೂರ, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಹಾಗೂ ನದಿಯ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಬಹುಗ್ರಾಮ ನದಿ ನೀರು ಯೋಜನೆಯಡಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗಾಗಿ ತುಂಗಭದ್ರಾ ನದಿಯ ನೀರನ್ನು ಅವಲಂಭಿಸಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ನೀರನ್ನು ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಮೇ18 ರಿಂದ 23 ರವರೆಗೆ ಪ್ರತಿದಿನ 2000 ಕ್ಯೂಸೆಕ್ಸ್ ನಂತೆ ನೀರನ್ನು ಹರಿಸಲು ನಿರ್ಧರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ನದಿ ದಂಡೆಯ ಕೆಳಮಟ್ಟದಲ್ಲಿ ಸಾರ್ವಜನಿಕರು ತಿರುಗಾಡುವುದು, ದನಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಮಾಡುವುದು ಇತ್ಯಾದಿ ಮಾಡಬಾರದೆಂದು ಎಚ್ಚರಿಕೆ ನೀಡಲಾಗಿದೆ.
ನೀರು ಹರಿಸುವ ಅವಧಿಯಲ್ಲಿ ರೈತರು ನದಿ ದಂಡೆಯಲ್ಲಿ ಅಳವಡಿಸಿರುವ ಪಂಪ್ಸೆಟ್ಗಳಿಂದ ನೀರೆತ್ತುವುದನ್ನೂ ಸಹ ನಿಷೇಧಿಸಲಾಗಿದೆ ಎಂದು ಬಿ.ಆರ್. ಪ್ರಾಜೆಕ್ಟ್, ಭದ್ರಾ ಜಲಾಶಯ ಯೋಜನೆ ಕುಡಿಯುವ ನೀರಿನ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Water release from Bhadra reservoir from May 18: What is the reason?
Shivamogga, May 16: Under the Bahugram River Water Project, it has been decided to release 2000 cusecs of water from Bhadra reservoir to Tungabhadra river from May 18 to 23 to supply drinking water to the public in Haveri, Ranebennur, Byadgi and Hirekerur towns and villages along the river.
In this context, the public has been warned not to roam around, graze cattle and do gardening etc. on the lower banks of the river.
During the water release period, farmers are also prohibited from drawing water from the pump sets installed on the river banks, said the member secretaries of the B.R. Project, Bhadra Reservoir Project Drinking Water Advisory Committee in a statement.

