shimoga news | ಶಿವಮೊಗ್ಗ | 18 ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಕೆಎಸ್ಆರ್‌ಪಿ ಪೊಲೀಸ್ ಕಾನ್ಸ್‌ಟೇಬಲ್ ಹೃದಯಾಘಾತದಿಂದ ನಿಧನ!

Shivamogga | KS Reserve Police Constable Dies of Heart Attack Just 18 Days After Marriage ಶಿವಮೊಗ್ಗ | 18 ದಿನಗಳ ಹಿಂದಷ್ಟೇ ವಿವಾಹವಾಗಿದ್ದ ಕೆಎಸ್ಆರ್ಪಿ ಪೊಲೀಸ್ ಕಾನ್ಸ್ಟೇಬಲ್ ಹೃದಯಾಘಾತದಿಂದ ನಿಧನ!

ಶಿವಮೊಗ್ಗ (shivamogga), ಮೇ 27 : ಇಲ್ಲಿನ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ 8ನೇ ಪಡೆಯ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಈರಣ್ಣ ಗುಡಾದಾರ್, 26 ವರ್ಷ ಅವರು ಮಂಗಳವಾರದಂದು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು ಮೂಲತಃ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನವರಾಗಿದ್ದು, ಕಳೆದ 7 ವರ್ಷಗಳಿಂದ ಶಿವಮೊಗ್ಗದ ಕೆಎಸ್ಆರ್‌ಪಿ 8ನೇ ಪಡೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೇ 26ರಂದು ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದಾಗ ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ.

ಮೃತ ಈರಣ್ಣ ಅವರಿಗೆ ಕೇವಲ 18 ದಿನಗಳ ಹಿಂದೆಯಷ್ಟೇ ವಿವಾಹವಾಗಿತ್ತು ಎನ್ನಲಾಗಿದ್ದು, ಮೃತರು ಪತ್ನಿ, ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

ಸಂತಾಪ: ಯುವ ಪೊಲೀಸ್ ಸಿಬ್ಬಂದಿಯ ಅಕಾಲಿಕ ನಿಧನಕ್ಕೆ ಕೆಎಸ್ಆರ್‌ಪಿ 8ನೇ ಪಡೆಯ ಕಮಾಂಡೆಂಟ್ ಆದ ಎಸ್. ಯುವಕುಮಾರ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಕಮಾಂಡೆಂಟ್ ಕೋರಿದ್ದಾರೆ.

Shivamogga | KS Reserve Police Constable Dies of Heart Attack Just 18 Days After Marriage

Shivamogga, May 27: Eeranna Gudadar, 26, who was serving as a constable in the 8th Battalion of the Karnataka State Reserve Police in Shivamogga, passed away on Tuesday due to a severe heart attack.

The deceased hailed from Gokak taluk in Belagavi district and had been serving in the Shivamogga KSRP 8th Battalion for the past seven years. On May 26, he suffered a massive heart attack and breathed his last while being rushed to the hospital.

It is reported that Eeranna had married only 18 days ago. He is survived by his wife, father, mother, and sister.

Condolence: S. Yuvakumar, Commandant of the KSRP 8th Battalion, expressed deep sorrow over the untimely demise of the young police constable and prayed for strength to his family to bear the grief.

Follow us on social media

B. Renukesha

About B. Renukesha

ಬಿ_ರೇಣುಕೇಶ್, ಪತ್ರಕರ್ತರು ಸುದ್ದಿ-ಮಾಹಿತಿಗೆ ಸಂಪರ್ಕಿಸಿ Email: udayasaakshi@gmail.com Mobile : 9242987506

View all posts by B. Renukesha →

Leave a Reply

Your email address will not be published. Required fields are marked *